ಬ್ರೇಕಿಂಗ್ ನ್ಯೂಸ್ ರಾಜ್ಯದ ಸರ್ಕಾರಿ ನೌಕರರಿಗೆ ರಜೆ ಘೋಷಣೆ 23/03/202023/03/20201 min read admin ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ರಾಜ್ಯದ 50 ವರ್ಷ ಮೇಲ್ಪಟ್ಟ ಸರ್ಕಾರಿ ನೌಕರರಿಗೆ ಸರ್ಕಾರ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಏಪ್ರಿಲ್ 4ರ ವರೆಗೆ 50 ವರ್ಷ ಮೇಲ್ಪಟ್ಟ ರಾಜ್ಯ ಸರ್ಕಾರಿ ನೌಕರರಿಗೆ ರಜೆಯನ್ನು ಘೋಷಿಸಿದೆ. ಈ ಕುರಿತಂತೆ ಆದೇಶ ಹೊರಡಿಸಿರುವ ಸರ್ಕಾರದ ಉಪ ಕಾರ್ಯದರ್ಶಿ ಚಂದ್ರಹಾಸ ಗಂ ತಾಳೂಕರ, ಇತ್ತೀಚೆ ಕೋವಿಡ್-19 ವೈರಾಣು ಭಾರತದಲ್ಲಿ ತೀವ್ರವಾಗಿ ಹರಡುತ್ತಿದೆ. ಈ ವೈರಾಣು ತಡೆಗಟ್ಟುವ ನಿಟ್ಟಿನಲ್ಲಿ ಭಾರತ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದೇ ಮಾದರಿಯ ಕ್ರಮವನ್ನು ಅನುಸರಿಸುವಂತೆ ಭಾರತ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಿಗಳಿಗೆ ಸೂಚನೆ ನೀಡಿರುತ್ತದೆ. ಹೀಗಾಗಿ ಕೋವಿಡ್-19 ವೈರಾಣು ಹರಡುವಿಕೆಯನ್ನು ತಡೆಗಟ್ಟುವ ಕ್ರಮವಾಗಿ 50 ವರ್ಷ ಮೀರಿದ ಹಾಗೂ ಮಧುಮೇಹ, ಉಸಿರಾಟದ ತೊಂದರೆಗಳು, ಮೂತ್ರಪಿಂಡ ಖಾಲಿಯೆ, ಸೇರಿದಂತೆ ಇತರೆ ಮಾರಣಾಂತಿಕ ಖಾಯಿಲೆಗಳಿಂದ ಬಳಲುತ್ತಿರುವ ಸರ್ಕಾರಿ ನೌಕರರು ಸ್ವಸುರಕ್ಷಿತ ವಲಯದಲ್ಲಿ ಇರಲು ಇಚ್ಚಿಸಿದಲ್ಲಿ, ದಿನಾಂಕ 04-04-2020ರ ವರೆಗೆ ಯಾವುದೇ ವೈದ್ಯಕೀಯ ಪ್ರಮಾಣ ಪತ್ರವನ್ನು ಹಾಜರು ಪಡಿಸದೇ, ರಜೆಯನ್ನು ಪಡೆಯಲು ಅರ್ಹರಿರುತ್ತಾರೆ. Share