ಬ್ರೇಕಿಂಗ್ ನ್ಯೂಸ್ ಬೆಳಗಿನ ಜಾವ ವ್ಯಾಪಾರಸ್ತರಿಗೆ ಬಿಸಿ ಮುಟ್ಟಿಸಿದ ಅಥಣಿ ಡಿವೈಎಸ್ ಪಿ. ಎಸ್ ವಿ ಗಿರೀಶ್. 26/03/202026/03/20201 min read admin ಅಥಣಿ: ದೇಶಾದ್ಯಂತ 144 ಜಾರಿ ಹಿನ್ನೆಲೆಯಲ್ಲಿ ಅಥಣಿ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಗುಂಪು ಕೂಡಿದ್ದ ಜನರಿಗೆ ಅಥಣಿ ಡಿವೈಎಸ್ ಪಿ ಎಸ್ ವಿ ಗಿರೀಶ್ ಕಡಖ್ ವಾರ್ನ ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ದಿನಸಿ ಅಂಗಡಿಗಳ ಪರವಾನಿಗೆ ಕೊಡಲು ಅಥಣಿ ಪುರಸಭೆ ಮುಂದಾಗಿದ್ದು ತರಕಾರಿ ಮಾರಾಟಕ್ಕೆ ಸಂಬoಧಿಸಿದoತೆ ಪಟ್ಟಣದ ವ್ಯಾಪಾರಿಗಳಿಗೆ ಈ ಹಿಂದೆಯೆ ಮನೆ ಮನೆಗೆ ತೆರಳಿ ವ್ಯಾಪಾರ ಮಾಡಲು ಅನುವು ಮಾಡಿಕೊಡಲಾಗಿತ್ತು. ಆದರೂ ಕೂಡ ತರಕಾರಿ ಮಾರುಕಟ್ಟೆಯಲ್ಲಿ ಜನರು ಗುಂಪು ಕೂಡಿದ್ದು ಗಮನಕ್ಕೆ ಬರುತ್ತಿದ್ದಂತೆಯೇ ಜನರನ್ನು ಚದುರಿಸುವದಕ್ಕಾಗಿ ಅಲ್ಲಲ್ಲಿ ಲಾಠಿ ರುಚಿ ಉನ್ನಿಸಿ ಜನರನ್ನು ಮನೆಗೆ ತೆರಳುವಂತೆ ಮಾಡಿದರು. ಶಾಂತಿ ಸುವ್ಯವಸ್ಥೆ ಕಾಪಾಡಲು ಜನರಿಗೆ ಎಷ್ಟು ಸಲ ಹೇಳಿದರು ಕೂಡ ಕೇಳದ ಹಿನ್ನೆಲೆಯಲ್ಲಿ ಲಾಠಿ ಬೀಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದ್ದು ಕಂಡು ಬಂತು.ಲಾಠಿ ಏಟು ಬೀಳುತ್ತಿದ್ದಂತೆಯೆ ತರಕಾರಿ ವ್ಯಾಪಾರಿಗಳು ಸ್ಥಳದಲ್ಲೇ ತರಕಾರಿ ಬಿಟ್ಟು ಓಡಿದರೆ ಖರೀದಿಗೆ ಬಂದವರು ಕೂಡ ದಿಕ್ಕಾಪಾಲಾದ್ದರು. ಈ ವೇಳೆ ಅಥಣಿ ಸಿಪಿಐ ಶಂಕಗೌಡ ಬಸನಗವಡಾ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಮಹಂತೇಶ್, ಕೌಲಾಪೂರ,ಕಿರಿಯ ಆರೋಗ್ಯ ನಿರಿಕ್ಷಕ ಬಸವರಾಜ ಬೋಳಿಶೆಟ್ಟಿ, ಮತ್ತು ಪುರಸಭೆ ಹಾಗೂ ಪೋಲಿಸ್ ಸಿಬ್ಬಂದಿ ಉಪಸ್ಥಿತರಿದ್ದರು. ಅಥಣಿ ಪಟ್ಟಣದಲ್ಲಿ ಶಿಸ್ತು ಮತ್ತು ಶಾಂತಿ ಕಾಪಾಡಿಕೊಳ್ಳಲು ಹಾಗೂ ಕೊರೊನಾ ಜಾಗೃತಿ ಮೂಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಉಳಿದ ಇಲಾಖೆಯ ಹಾಗೂ ತಮ್ಮ ಇಲಾಖೆಯ ಗುತ್ತಿಗೆ ಕಾರ್ಮಿಕರು ಸೇರಿದಂತೆ ಸಾರ್ವಜನಿಕರು ಸಹಕರಿಸುತ್ತಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ್ ಕವಲಾಪೂರ ಹೇಳಿದರು Share