ಮೂಡಲಗಿ : ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪಿಗಳ ಬಂಧನ

ಮೂಡಲಗಿ: ಬೆಳಗಾವಿ ಜಿಲ್ಲೆಯಾದ್ಯಂತ ಕೊರೊನಾ ವೈರಸ್ ಕಾಯಿಲೆ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧ್ಯಂತ ಜನರ ಗುಂಪು ಸೇರುವ ಸ್ಥಳಗಳನ್ನು ನಿಷೇಧಿಸಿ, ಜಿಲ್ಲಾಧಿಕಾರಿಯವರ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದರು.
ಆದರೆ ಮೂಡಲಗಿ ನಗರದಲ್ಲಿ ನಿಷೇಧಾಜ್ಞೆ ಉಲ್ಲಂಘನೆ ಮಾಡಿ ತನ್ನ ಅಂಗಡಿಯನ್ನು ಅಧಿಕೃತವಾಗಿ ತೆಗೆದು ಹೆಚ್ಚಿನ ಜನರನ್ನು ಅಂಗಡಿಯ ಮುಂದೆ ನಿಲ್ಲಿಸಿಕೊಂಡು, ಅವಶ್ಯಕ ವಸ್ತುಗಳನ್ನು ಹೊರತುಪಡಿಸಿ ಬೇರೆ ವಸ್ತುಗಳನ್ನು ಮಾರಾಟ ಮಾಡುವುದು ಮತ್ತು ನಿಷೇಧಾಜ್ಞೆ ಉಲ್ಲಂಘಿಸಿ ಜನರನ್ನು ಸೇರಿಸಿಕೊಂಡು ತಿರುಗಾಡುವುದು ಮಾಡುತ್ತಿರುವ ಜಾನ್ ಮಹಾದೇವ ಕರಬನ್ನವರ, ಪ್ರಕಾಶ್ ಕೆಂಪಣ್ಣ ತೇರದಾಳ್, ಯಲ್ಲಪ್ಪ ದುಂಡಪ್ಪ ಬೆಳ್ಳಕ್ಕಿ, ಸೋಮಯ್ಯ ಬಸಯ್ಯ ಹಿರೇಮಠ್, ವಹೀದಲಿ ಮಹ್ಮದಲಿ ಬಾಗವಾನ ಎಂಬ ಆರೋಪಿಗಳನ್ನು ಬಂಧಿಸಿ, ಕಾಲಂ : 188 ಐಪಿಸಿ ನೇದ್ದರಡಿಯಲ್ಲಿ ಪ್ರತ್ಯೇಕವಾಗಿ ಮೂಡಲಗಿ ಠಾಣೆಯಲ್ಲಿ ಈ ಪ್ರಕರಣವನ್ನು ದಾಖಲಾಗಿದೆ ಎಂದು ಮೂಡಲಗಿ ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ ತಿಳಿಸಿದರು
Share
WhatsApp
Follow by Email