ಬ್ರೇಕಿಂಗ್ ನ್ಯೂಸ್ ಬೇರೆ ರಾಜ್ಯ ದಲ್ಲಿ ಕೆಲಸ ಮಾಡುತ್ತಿರುವ 87 ಯುವಕರು ಸ್ವಗ್ರಾಮಕ್ಕೆ ಆಗಮನ 29/03/202029/03/20201 min read admin ಕಾಗವಾಡ : ಉತ್ತರ ಕರ್ನಾಟಕ ರಾಜ್ಯದ 87 ಯುವಕರು ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿ ಲಾಕ್ ಉನ್ನತ ಶಿಕ್ಷಣ ಪಡೆದ 87 ಯುವಕರು ಉದ್ಯೊಗಕಾಗಿ ನೆರೆಯ ಮಹಾರಾಷ್ಟ್ರ ರಾಜ್ಯದ ಬೇರೆ-ಬೇರೆ ಕಂಪನಿಗಳಲ್ಲಿ ವಿತರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರು ನೆರೆಯ ಸಾಂಗಲಿ ಜಿಲ್ಲೆಯ ಎಂ.ಐ.ಡಿ.ಸಿ. ಕಾರ್ಖಾನೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇವರನ್ನು ಅಲ್ಲಿಯ ಕಂಪನಿಗಳು ಮಾಲಿಕರು ಇವರನ್ನು ಸಾಂಗ್ಲಿಯಿಂದ ಹೊರ ಹಾಕಿದ್ದರಿಂದ ಕಾಲು ನಡುಗೆಯಿಂದ ಕಾಗವಾಡ ವರೆಗೆ ಬಂದರು. ಕಾಗವಾಡ ತಹಸೀಲ್ದಾರ ಶ್ರೀಮತಿ ಪ್ರಮೀಳಾ ದೇಶಪಾಂಡೆ ಮತ್ತು ಪೊಲೀಸ್ ಅಧಿಕಾರಿಗಳು ಅವರನ್ನು ಆರೋಗ್ಯ ತಪಾಸಣೆ ಮಾಡುವದೊಂದಿಗೆ ಊಟ, ತಿಂಡಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಶನಿವಾರ ರಂದು ಕಾಗವಾಡ ಬಸ್ ನಿಲ್ದಾಣದಲ್ಲಿ ಏಕ ಕಾಲಕ್ಕೆ ಈ ಯುವಕರನ್ನು ಕಂಡ ಸ್ಥಳೀಯರು ಬೆಚ್ಚಿಬಿದಿದ್ದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಶ್ರೀದೇವಿ ಸದಾಶಿವ ಚೌಗುಲೆ ಇವರು ಕೂಡಲೆ ತಹಸೀಲ್ದಾರ ಶ್ರೀಮತಿ ಪ್ರಮೀಳಾ ದೇಶಪಾಂಡೆ, ಪೊಲೀಸ್ ಅಧಿಕಾರಿ ಹಾಗೂ ಎಲ್ಲಾ ಮೇಲಾಧಿಕಾರಿಗಳ ಗಮನಕ್ಕೆ ತಂದರು Share