ಬ್ರೇಕಿಂಗ್ ನ್ಯೂಸ್ ಉತ್ತಮ ಕೆಲಸಗಾರತಿ ಎಂದು ಹೆಸರು ಪಡೆಡಿರುವ ನಿಪ್ಪಾಣಿ ಶಾಸಕಿ : ಶಶಿಕಲಾ ಜೋಲ್ಲೆ 02/04/202002/04/2020 admin ಚಿಕ್ಕೋಡಿ : ನಿಪ್ಪಾಣಿ ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಸರ್ಕಾರ ನೀಡಿರುವ ನಿಯಮಗಳನ್ನು ಗಾಳಿಗೆ ತೂರಿ , ರಾಜ್ಯದಲ್ಲಿ ಉತ್ತಮ ಕೆಲಸಗಾರತಿ ಎಂದು ಹೆಸರು ಪಡೆಡಿರುವ ನಿಪ್ಪಾಣಿ ಶಾಸಕಿ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಶಶಿಕಲಾ ಜೋಲ್ಲೆ ಅವರು ಬಿಜೆಪಿಯ ನೂರಾರು ಕಾರ್ಯಕರ್ತರೊಂದಿಗೆ ಒಂದು ಕಡೆ ಸೇರಿ ಸಾಮೂಹಿಕ ಕಾರ್ಯಕ್ರಮ ಮಾಡುವ ಮೂಲಕ , ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟ ಆಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಆರೋಪವಾಗಿದೆ. ಈ ಕುರಿತಂತೆ ಫೋಟೋಗಳು ಮತ್ತು ವಿಡಿಯೋ ತೆಗೆದಿರುವ ಸಾಕ್ಷಿಗಳನ್ನು ನಮ್ಮ ಹತ್ತಿರ ಇವೆ ಇವುಗಳನ್ನು ನಾವು ರಾಜ್ಯಪಾಲರು , ಮುಖ್ಯಮಂತ್ರಿ ಬಿ . ಎಸ್ . ಯಡಿಯೂರಪ್ಪ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕಳಿಸಲಾಗಿದೆ . 144 ಸೆಕ್ಷನ್ ಜಾರಿ ಅಡಿ ಹೇರಲಾಗಿದ್ದ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಗುಂಪುಗೂಡಿ ಕಾರ್ಯಕ್ರಮ ಮಾಡಿರುವುದನ್ನು ಖಂಡಿಸಿ ಸ್ಥಳೀಯನಿಪ್ಪಾಣಿ ತಹಶೀಲದಾರ ಅವರಿಗೆ ದೂರು ಸಲ್ಲಿಸಲಾಗಿದೆ .ಕಾಂಗ್ರೇಸ್ ಪಕ್ಷದ ಮಾಜಿ ಸಚಿವ ವೀರಕುಮಾರ ಪಾಟೀಲ , ಮಾಜಿ ಶಾಸಕರಾದ ಕಾಕಾಸಾಹೇಬ ಪಾಟೀಲ ಮತ್ತು ಸುಭಾಷ ಜೋಶಿ ಹಾಗೂ ಲಕ್ಷ್ಮಣರಾವ ಚಿಂಗಳೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರು ಎಲ್ಲರೂ ಸೇರಿ ದೂರು ಸಲ್ಲಿಸಿದ್ದಾರೆ. ಕೊರೊನಾ ಭೀತಿಯ ಸಂದರ್ಭದಲ್ಲಿ ಪೊಲೀಸರನ್ನು ಹುರಿದುಂಬಿಸಲು ಸಚಿವೆ ಜೊಲ್ಲೆ ಅವರು ನಿಪ್ಪಾಣಿ ಪಟ್ಟಣದ ಶಿವಾಜಿ ಕಾಲೊನಿಯಲ್ಲಿ ತಮ್ಮ ಕಾರ್ಯಕರ್ತರೊಂದಿಗೆ ಭಾನುವಾರ ಸಂಜೆ ಕಾರ್ಯಕ್ರಮ ಆಯೋಜಿಸಿದ್ದರು . ಕಾರ್ಯಕ್ರಮದಲ್ಲಿ ಹಿಂದಿ ಮತ್ತು ಮರಾಠಿ ಜನಪ್ರಿಯ ದೇಶಭಕ್ತಿ ಗೀತೆಗಳಿಗೆ ಕಾರ್ಯಕರ್ತರು ಚಪ್ಪಾಳೆ ತಟ್ಟಿದರು . ಕೆಲವು ಕಾರ್ಯಕರ್ತರು ಮತ್ತು ಅವರಿಗೆ ಜೊತೆಯಾಗಿ ಕೆಲವು ಪೊಲೀಸರು ಹಾಡುಗಳಿಗೆ ಹೆಜ್ಜೆ ಹಾಕುತ್ತಿರುವುದು ಕ್ಯಾಮರಾದಲ್ಲಿ ರೆಕಾರ್ಡ್ ಇದೆ . “ ಪೊಲೀಸರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ . ಅವರಿಗೆ ಪ್ರೋತ್ಸಾಹ ಕೊಡಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ . ಆದರೆ , ಅದೇ ನೆಪದಲ್ಲಿ ಪೊಲೀಸರ ಜೊತೆ ಸೇರಿಕೊಂಡು ಪ್ರಧಾನಿಯವರ ಘೋಷಣೆಯನ್ನು ಉಲ್ಲಂಘಿಸುವುದು , ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಕಾರ್ಯಕರ್ತರೊಂದಿಗೆ ಗುಂಪು ಗೂಡುವುದುಡಿಸ್ಟನ್ಸಿಂಗ್ ಸೇರಿದಂತೆ ಇತರೆ ಸುರಕ್ಷತಾ ಕ್ರಮಗಳನ್ನು ಪಾಲಿಸುವುನ್ನು ಮರೆತು ಇದರಿಂದ ಸೋಂಕು ಹರಡಲು ಸರ್ಕಾರದ ಪ್ರತಿನಿಧಿಗಳೇ ಅವಕಾಶ ಮಾಡಿ ಕೊಟ್ಟಂತಾಗುತ್ತದೆ . ಸಾರ್ವಜನಿಕರು ಮನೆಯಿಂದ ಹೊರ ಬಂದರೆ ಲಾಠಿ ಬೀಸುವ ಪೊಲೀಸರು , ಬಿಜೆಪಿ ಶಾಸಕರು ಮತ್ತು ಕಾರ್ಯಕರ್ತರೊಂದಿಗೆ ಸೇರಿ ಹಾಡುಗಳಿಗೆ ಹೆಜ್ಜೆ ಹಾಕಿದ್ದು ಅಕ್ಷಮ್ಯ . ಈ ರೀತಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟ ಆಡುವುದನ್ನು ನಾವು ಖಂಡಿಸುತ್ತೇವೆ ‘ ಎಂದು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಲಕ್ಷ್ಮಣರಾವ ಚಿಂಗಳೆ ತಿಳಿಸಿದರು Share