ಬ್ರೇಕಿಂಗ್ ನ್ಯೂಸ್ ಮಠ ಮಂದಿರ, ಮಸೀದಿ, ಚರ್ಚುಗಳಲ್ಲಿ ಸಾಮೂಹಿಕ ಪಾರ್ಥನೆ ಬೇಡ-ಠಾಣಾಧಿಕಾರಿ ಯಮನಪ್ಪ ಮಾಂಗ ಸರ್ವ ಧರ್ಮ ಮುಖಂಡರ ಜೊತೆ ಸಭೆ 05/04/202005/04/20201 min read admin ಮುಗಳಖೋಡ: ಜಾತಿ, ಮತ, ಪಂಥ, ಸ್ವದೇಶಿ-ವಿದೇಶಿ ಎಂಬ ತಾರತಮ್ಯವಿಲ್ಲದೇ ದೇಶದಲ್ಲಿ ವೇಗವಾಗಿ ಹರಡುತ್ತಿರುವ ಕರೋನ ವೈರಸ್‌ಅನ್ನು ಮಾನವ ಧರ್ಮದಿಂದ ಕಟ್ಟಿಹಾಕಬೇಕು. ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ರೋಗ ಹರಡದಂತೆ ಅದನ್ನು ತಡೆಗಟ್ಟುವ ಶಕ್ತಿ ಭಾರತೀಯರಿಗೆ ಇದೆ. ರೋಗವನ್ನು ಎದುರಿಸಲು ಎಲ್ಲರೂ ಒಗ್ಗಟ್ಟಾಗಿ ಸಹಕರಿಸಬೇಕು ಎಂದು ಹಾರೂಗೇರಿಯ ಠಾಣಾಧಿಕಾರಿ ಯಮನಪ್ಪ ಮಾಂಗ ಹೇಳಿದರು.ಅವರು ದೇಶದಲ್ಲಿ ಮಾರಕ ಕೋರೊನ ವೈರಸ್ ರೋಗ ಹರಡದಂತೆ ಮುಂಜಾಗ್ರತ ಕ್ರಮವಾಗಿ ಪ್ರದಾನಿ ಮೋದಿಯವರ ಸೂಚನೆಯಂತೆ ಎಪ್ರೀಲ್ 14 ರ ವರೆಗೆ ದೇಶಾದ್ಯಂತ ಜಾರಿಯಲ್ಲಿರುವ ಕರ್ಪ್ಯೂ ಹಿನ್ನೆಲೆಯಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸುವ ಸಲುವಾಗಿ ಮುಗಳಖೋಡ ಪಟ್ಟಣದ ಶ್ರೀ ಮಾಧವಾನಂದ ಆಶ್ರಮದಲ್ಲಿ ನಡೆದ ಸರ್ವ ಧರ್ಮ ಮುಖಂಡರ ಸಭೆಯಲ್ಲಿ ಭಾಗಿಯಾಗಿ ಸಾರ್ವಜನಿಕರು ಅನವಶ್ಯಕವಾಗಿ ಹೊರಗಡೆ ಬಾರದೇ, ಬರುವ ಅಗತ್ಯವಿದ್ದರೆ ಮಾಸ್ಕ್ಗಳನ್ನು ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿ ನಾವು ನಮಗೋಸ್ಕರ ಎಚ್ಚೆತ್ತುಕೊಂಡು ಮಠ, ಮಂದಿರ, ಮಸೀದಿ ಹಾಗೂ ಚರ್ಚುಗಳಲ್ಲಿ ಸಾಮೂಹಿಕ ಪಾರ್ಥನೆ ಬೇಡ ಎಂದು ಹೇಳಿದರು.ಕೊರೊನಾ ರೋಗ ತಡೆಗಟ್ಟುವುದಷ್ಟೇ ಅಲ್ಲದೇ, ರೋಗದ ಬಗ್ಗೆ ಜಾಗೃತಿಯನ್ನು ಮೂಡಿಸುವುದು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅದನ್ನು ಬಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಕರೋನ ವೈರಸ್ ಬಗ್ಗೆ ಸುಳ್ಳು ಮಾಹಿತಿ ಹಾಗೂ ಅಪಪ್ರಚಾರ ಮಾಡುವುದರಿಂದ ಜನರು ಭಯಭೀತರಾಗುತ್ತಿದ್ದಾರೆ. ಇಂತಹ ಘಟನೆಗಳು ಕಂಡುಬoದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು.ಸಭೆಯಲ್ಲಿ ಎ.ಎಸ್.ಐ ಐ.ಎಂ. ದುಂದಮನಿ, ಪಿ.ಕೆ.ಡೋಣಿ, ಕುಮಾರ ಪವಾರ್. ಪರಮೇಶ್ ಗುಡೋಡಗಿ, ಸಂಗನಬಸವ ನಂದಿಕೇಶ್ವರ್, ಗೋಪಾಲ್ ಯಡವಣ್ಣವರ, ಪುರಸಭೆ ಸದಸ್ಯರಾದ ರಮೇಶ್ ಖೇತಗೌಡರ್, ಮಹಾವೀರ್ ಕುರಾಡೆ, ವಿಠ್ಠಲ ಯಡವಣ್ಣವರ, ಚಂದ್ರು ಗೌಲತ್ತಿನವರ, ಮುಪ್ಪಯ್ಯ ಹಿರೇಮಠ, ಸುರೇಶ್ ಹೊಸಪೇಟಿ, ಮುಸ್ತಾಫ್ ಮೋಮಿನ್, ಕುತುಬುದ್ದೀನ್ ಯಲಿಗಾರ್, ಹಾಜೇಸಾಬ್ ಅತ್ತಾರ, ಹಸನ್‌ಸಾಬ್ ಯಲಿಗಾರ್, ಸುಲ್ತಾನ್ ಡಾಂಗೆ, ಶಿಲ್ಲು ಡಾಂಗೆ, ಅಪ್ಪಾಸಾಬ್ ಪಾಟೀಲ್ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ಸಭೆಯಲ್ಲಿ ಉಪಸ್ಥಿತರಿದ್ದರು Share