ಬ್ರೇಕಿಂಗ್ ನ್ಯೂಸ್ ಬೆಳೆ ಪರಿಹಾರ ಕ್ಕಾಗಿ ತುರ್ತು ಕ್ರಮ : ಸಚಿವ ಬಿಸಿ ಪಾಟೀಲ್ 09/04/202009/04/20201 min read admin ಗಂಗಾವತಿ: ಮಂಗಳವಾರ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ತುಂಗಭದ್ರಾ ಎಡದಂಡೆ ಕಾಲುವೆಯ ಭಾಗದ ರೈತರು ಬೆಳೆದ ಸುಮಾರು 80 ಸಾವಿರ ಎಕರೆಯಷ್ಟು ಬೆಳೆಯಲ್ಲಿ 65-70 ರಷ್ಟು ಬೆಳೆ ಹಾನಿಯಾಗಿದ್ದು, ಇಂದು ಬೆಳಗ್ಗೆ ಗಂಗಾವತಿಗೆ ಭೇಟಿ ನೀಡಿದ್ದ ಕೃಷಿ ಸಚಿವರಾದ ಬಿಸಿ ಪಾಟೀಲ್ ರವರು ಹಾಗೂ ಶಾಸಕರಾದ ಪರಣ್ಣ ಮನವಳ್ಳಿ , ಮತ್ತು ಕನಕಗಿರಿ ಕ್ಷೇತ್ರದ ಶಾಸಕರಾದ ಬಸವರಾಜ ದಢೆಸುಗುರ್, ಜೊತೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು , ಕಂದಾಯ ಅಧಿಕಾರಿಗಳು, ಕೃಷಿ ಅಧಿಕಾರಿಗಳು, ತತಹಶೀಲ್ದಾರ್ ಒಳಗೊಂಡಂತೆ ಗ್ರಾಮೀಣ ಭಾಗದ ರೈತರು ಬೆಳೆದ ಭತ್ತದ ಬೆಳೆ ಹಾನಿಯಾದ ಹಳ್ಳಿಗಳಿಗೆ ಜೀರಾಳ ಕಲ್ಗುಡಿ , ಹಣವಾಳ, ಕೆಸರಹಟ್ಟಿ , ಬಸಾಪಟ್ಟಣ ಸ್ಥಳಗಳಿಗೆ ಕೃಷಿ ಸಚಿವರಾದ ಬಿ ಸಿ ಪಾಟೀಲರು ವೀಕ್ಷಣೆ ಮಾಡಿದರು.ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳುವ ಅವಶ್ಯಕತೆಯಿಲ್ಲ, ಜೊತೆಗೆ ನಮ್ಮ ಸರ್ಕಾರ , ನಾವು ಜೊತೆಗಿದ್ದೇವೆ, ನಿಮಗೆ ಅತಿ ಶೀಘ್ರದಲ್ಲಿ ಸರ್ವೆ ಮಾಡಿಸಿ ಪರಿಹಾರವನ್ನು ಕೊಡಿಸಲು ಪ್ರಯತ್ನಿಸುತ್ತೇನೆ.ಈ ಭಾಗದ ರೈತರ ಕಷ್ಟವನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಆದಷ್ಟು ಬೇಗನೆ ರೈತರ ಸಂಕಷ್ಟಕ್ಕೆ ನೆರವಾಗಲು ಚರ್ಚಿಸಿ ವಿಶೇಷ ಪ್ಯಾಕೆಜ್ ನೊಂದಿಗೆ ರೈತರ ಬೆಳೆಗಳಿಗೆ ಪರಿಹಾರ ಕೊಡಿಸಲಾಗುವುದು ಎಂದು ತಿಳಿಸಿದರು,ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ಪರಣ್ಣ ಮುನವಳ್ಳಿ , ಕನಕಗಿರಿ ಕ್ಷೇತ್ರದ ಶಾಸಕರಾದ ಬಸವರಾಜ ದಡೇಸುಗೂರು, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರುಪಾಕ್ಷಪ್ಪ, ಎಪಿಎಂಸಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ , ಮಾಜಿ ಎಪಿಎಂಸಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ವಕೀಲರು, ಬಿಜೆಪಿ ಗ್ರಾಮೀಣ ಅಧ್ಯಕ್ಷರು ಚನ್ನಪ್ಪ ಮಳಗಿ,ವಕೀಲರು, ಬಿಜೆಪಿ ಮುಖಂಡರಾದ ನಾಗರಾಜ್ ಬಿಲ್ಗಾರ್, ರೈತರು ಜೊತೆಗಿದ್ದರು Share