ಬೆಳೆ ಪರಿಹಾರ ಕ್ಕಾಗಿ ತುರ್ತು ಕ್ರಮ : ಸಚಿವ ಬಿಸಿ ಪಾಟೀಲ್

ಗಂಗಾವತಿ: ಮಂಗಳವಾರ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ತುಂಗಭದ್ರಾ ಎಡದಂಡೆ ಕಾಲುವೆಯ ಭಾಗದ ರೈತರು ಬೆಳೆದ ಸುಮಾರು 80 ಸಾವಿರ ಎಕರೆಯಷ್ಟು ಬೆಳೆಯಲ್ಲಿ 65-70 ರಷ್ಟು ಬೆಳೆ ಹಾನಿಯಾಗಿದ್ದು, ಇಂದು ಬೆಳಗ್ಗೆ ಗಂಗಾವತಿಗೆ ಭೇಟಿ ನೀಡಿದ್ದ ಕೃಷಿ ಸಚಿವರಾದ ಬಿಸಿ ಪಾಟೀಲ್ ರವರು ಹಾಗೂ ಶಾಸಕರಾದ ಪರಣ್ಣ ಮನವಳ್ಳಿ , ಮತ್ತು ಕನಕಗಿರಿ ಕ್ಷೇತ್ರದ ಶಾಸಕರಾದ ಬಸವರಾಜ ದಢೆಸುಗುರ್, ಜೊತೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು , ಕಂದಾಯ ಅಧಿಕಾರಿಗಳು, ಕೃಷಿ ಅಧಿಕಾರಿಗಳು, ತತಹಶೀಲ್ದಾರ್ ಒಳಗೊಂಡಂತೆ ಗ್ರಾಮೀಣ ಭಾಗದ ರೈತರು ಬೆಳೆದ ಭತ್ತದ ಬೆಳೆ ಹಾನಿಯಾದ ಹಳ್ಳಿಗಳಿಗೆ ಜೀರಾಳ ಕಲ್ಗುಡಿ , ಹಣವಾಳ, ಕೆಸರಹಟ್ಟಿ , ಬಸಾಪಟ್ಟಣ ಸ್ಥಳಗಳಿಗೆ ಕೃಷಿ ಸಚಿವರಾದ ಬಿ ಸಿ ಪಾಟೀಲರು ವೀಕ್ಷಣೆ ಮಾಡಿದರು.
ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳುವ ಅವಶ್ಯಕತೆಯಿಲ್ಲ, ಜೊತೆಗೆ ನಮ್ಮ ಸರ್ಕಾರ , ನಾವು ಜೊತೆಗಿದ್ದೇವೆ, ನಿಮಗೆ ಅತಿ ಶೀಘ್ರದಲ್ಲಿ ಸರ್ವೆ ಮಾಡಿಸಿ ಪರಿಹಾರವನ್ನು ಕೊಡಿಸಲು ಪ್ರಯತ್ನಿಸುತ್ತೇನೆ.
ಈ ಭಾಗದ ರೈತರ ಕಷ್ಟವನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಆದಷ್ಟು ಬೇಗನೆ ರೈತರ ಸಂಕಷ್ಟಕ್ಕೆ ನೆರವಾಗಲು ಚರ್ಚಿಸಿ ವಿಶೇಷ ಪ್ಯಾಕೆಜ್ ನೊಂದಿಗೆ ರೈತರ ಬೆಳೆಗಳಿಗೆ ಪರಿಹಾರ ಕೊಡಿಸಲಾಗುವುದು ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ಪರಣ್ಣ ಮುನವಳ್ಳಿ , ಕನಕಗಿರಿ ಕ್ಷೇತ್ರದ ಶಾಸಕರಾದ ಬಸವರಾಜ ದಡೇಸುಗೂರು, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರುಪಾಕ್ಷಪ್ಪ, ಎಪಿಎಂಸಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ , ಮಾಜಿ ಎಪಿಎಂಸಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ವಕೀಲರು, ಬಿಜೆಪಿ ಗ್ರಾಮೀಣ ಅಧ್ಯಕ್ಷರು ಚನ್ನಪ್ಪ ಮಳಗಿ,ವಕೀಲರು, ಬಿಜೆಪಿ ಮುಖಂಡರಾದ ನಾಗರಾಜ್ ಬಿಲ್ಗಾರ್, ರೈತರು ಜೊತೆಗಿದ್ದರು
Share
WhatsApp
Follow by Email