ಲಾಕ್ ಡೌನ್ ಹಿನ್ನಲೇಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಮಹಾತ್ಮಾಗಾಂಧಿ(ನರೇಗಾ) ಯೋಜನೆಯಡಿಯಲ್ಲಿ ಕೂಲಿ

ಚಿಕ್ಕೋಡಿ: ಗ್ರಾಮೀಣ ಪ್ರದೇಶದ ಜನರು ಲಾಕ್ ಡೌನ್ ಹಿನ್ನಲೇಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಮಹಾತ್ಮಾಗಾಂಧಿ(ನರೇಗಾ) ಯೋಜನೆಯಡಿಯಲ್ಲಿ ಗ್ರಾಮ ಪಂಚಾಯತಿಯಲ್ಲಿ ಕೂಲಿ ಕೆಲಸ ನೀಡಲಾಗುತ್ತಿದೆ ಎಂದು ತಾಲೂಕ ಪಂಚಾಯತಿ ಐಇಸಿ ಸಂಯೋಜಕರಾದ ರಂಜೀತ ಕಾಂಬಳೆ ಹೇಳಿದರು.
ತಾಲೂಕಿನ ಮುಗಳಿ ಹಾಗೂ ವಡ್ರಾಳ ಗ್ರಾಮದಲ್ಲಿನ ಕೂಲಿ ಕಾರ್ಮಿಕರಿಗೆ ಪ್ರತಿಜ್ಞಾ ವಿಧಿ ಭೋದಿಸಿ ಮಾತನಾಡಿದ ಅವರು,ಗ್ರಾಮೀಣ ಪ್ರದೇಶದ ಜನರಿಗೆ ಕೇಂದ್ರ ಸರಕಾರ ನರೇಗಾದಲ್ಲಿ ಸ್ಥಳೀಯವಾಗಿ ಕೂಲಿ ನೀಡುವ ಯೋಜನೆ ಜಾರಿಗೆ ತರಲಾಗಿದೆ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ಪ್ರಸಕ್ತ ವರ್ಷದಲ್ಲಿ ಪ್ರತಿ ಕೂಲಿ ಕಾರ್ಮಿಕರಿಗೆ 275 ರೂಗಳನ್ನು ನೀಡಲಾಗುತ್ತಿದೆ ಎಂದರು.ಜಾಬ್ ಕಾರ್ಡ ಹೊಂದದೆ ಇರುವ ಕಾರ್ಮಿಕರಿಗೆ ಗ್ರಾಮ ಪಂಚಾಯತಿಯಲ್ಲಿ ವಾಸ ಇರುವ ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರಿಗೆ ತುರ್ತಾಗಿ ಜಾಬ್ ಕಾರ್ಡ ನೀಡುವಂತೆ ಸರಕಾರ ಆದೇಶ ಮಾಡಿದೆ ಎಂದರು.ಎಲ್ಲಾ ಗ್ರಾಮ ಪಂಚಾಯತಿಯಲ್ಲಿ ಕೂಲಿ ನೀಡುವ ಬೇಡಿಕೆ ಬಂದರೆ ಅವರಿಗೆ ಕಡ್ಡಾಯವಾಗಿ ಕೂಲಿ ಕೆಲಸ ನೀಡಬೇಕೆಂದು ಪಿಡಿಓಗಳಿಗೆ ಸೂಚನೆ ನೀಡಿದರು.
ತಾ.ಪಂ ತಾಂತ್ರಿಕ ಸಂಯೋಜಕ ಅಜೀತ ಚಿಕ್ಕೂಡ ಮಾತನಾಡಿ, ಸರಕಾರದ ಆದೇಶದ ಪ್ರಕಾರ 5 ಜನರಗಿಂತ ಹೆಚ್ಚು ಕೂಲಿ ಕಾರ್ಮಿಕರು ಗುಂಪಾಗಿ ಕೆಲಸ ಮಾಡದಂತೆ ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ ಸೂಚನೆ ನೀಡಿದರು.
ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಇದನ್ನು ತಡೆಯುವನಿಟ್ಟಿನಲ್ಲಿ ಕಾರ್ಮಿಕರು ಕಡ್ಡಾಯವಾಗಿ ಮಾಸಕ್ ಹಾಕಿಕೊಳ್ಳಬೇಕು. ಮೇಲಿಂದ ಮೇಲೆ ಸಾಬೂನು ಹಾಗೂ ಸಾನಿಟೈಜರನಿಂದ ಕೈ ತೊಳೆದು ಕೊಳ್ಳಬೇಕೆಂದರು.
ಪಿಡಿಓಗಳಾದ ಚಂದ್ರಶೇಖರ ಕುಂಬಾರ,ಶಿವಾನಂದ ದೇಸಾಯಿ
ಕಾರ್ಯದರ್ಶಿ ವಿಠ್ಠಲ ಬಂತೆ, ತಾಂತ್ರಿಕ ಸಹಾಯಕ ವಿನಯಕುಮಾರ ಪಾಟೀಲ, ವಿಶ್ವನಾಥ ಗಾಡಿವಡ್ಡರ,ಬಿಎಫ್‍ಟಿ ಮಹಾದೇವ ಮಠಪತಿ, ದೊಡ್ಡಪ್ಪಾ ಬನ್ನೆ,ಸಾಗರ ನಾಯಿಕ,ಸಿದ್ದಗೌಡ ಪಾಟೀಲ್ ಉಪಸ್ಥಿತರಿದ್ದರು.
ಪೋಟೊ ಶಿರ್ಷಿಕೆ:16ಸಿಕೆಡಿ1
ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದಲ್ಲಿ ನರೇಗಾ ಯೋಜನೆಯಡಿಯಲ್ಲಿ ಕೂಲಿ ಕಾರ್ಮಿಕರು ಸಾಮಾಜಿಕ ಅಂತರ ಕಾಯ್ದಕೊಳ್ಳುವಂತೆ ಕಾರ್ಮಿಕರಿಗೆ ತಾಲೂಕ ಪಂಚಾಯತಿ ಐಇಸಿ ಸಂಯೋಜಕರಾದ ರಂಜೀತ ಕಾಂಬಳೆ ಪ್ರತಿಜ್ಞಾವಿಧಿ ಬೋಧಿಸಿದರು.
Share
WhatsApp
Follow by Email