ಮುದ್ದೇಬಿಹಾಳ:ಲಾಕ್ ಡೌನ ಆದೇಶದ ಹಿನ್ನೇಲೆಯಲ್ಲಿ ಸಾರ್ವಜನಿಕರಿಗೆ ನಿತ್ಯ ಆಹಾರದ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಸರಕಾರ ದಿನಸಿ ಕಿರಾಣಿ ಅಂಗಡಿಗಳನ್ನು ಮಾತ್ರ ತೆರದು ವ್ಯಾಪಾರ ಮಾಡಲು ಅನುಕೂಲ ಕಲ್ಪಿಸಿದೆ. ಆದರೇ ಪಟ್ಟಣದ ಬಹುತೇಕ ಕಿರಾಣಿ ವ್ಯಾಪಾರಸ್ಥರು ಕಿರಾಣಿ ದಿನಸಿ ಆಹಾರ ಸಾಮಗ್ರಗಳ ವಸ್ತುಗಳ ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಕಿರಾಣಿ ವ್ಯಾಪಾರಸ್ಥರು ವ್ಯಾಪಾರ ಮಾಡಿಕೊಳ್ಳುತ್ತಿದ್ದಾರೆ ಎಂಬ ಸಾಕಷ್ಟು ದೂರುಗಳ ಸ್ಥಳಿಯ ಪೋಲಿಸ್ ಠಾಣೆಗೆ ದೂರುಗಳು ಬಂದಿರುವ ಹಿನ್ನೇಲೆಯಲ್ಲಿ ಸಾರ್ವಜನಿಕರರೊಬ್ಬರ ಸಾಕ್ಷೀ ಸಮೇತ ದೂರಿನಾದರದÀ ಮೇಲೆ ಇಲ್ಲಿನ ಬಸ್ ನಿಲ್ದಾಣದ ಎದುರಿಗಿರುವ ಮಲ್ಲಿಕಾರ್ಜುನ ಕಿರಾಣಿ ಅಂಗಡಿ ಮಾಲಿಕರನ್ನು ಪಿಎಸ್ ಮಲ್ಲಪ್ಪ ಮಡ್ಡಿ ತರಾಟಗೆ ತಗೆದುಕೊಂಡ ಘಟನೆ ಸೋಮವಾರ ನಡೆದಿದೆ.
ಈಗಾಗಲೇ ಕಳೇದ ಒಂದು ತಿಂಗಳಿAದ ಲಾಕ್ ಡೌನನಿಂದಾಗಿ ನಿತ್ಯ ದುಡಿಯುವ ಕೈಗಳಿಗೆ ಉದ್ಯೋಗವಿಲ್ಲದೇ ಸಾರ್ವಜನಿಕರು ಬಡವರು ಕಂಗಾಲಾಗಿದ್ದಾರಲ್ಲದೇ ತುತ್ತು ಅನ್ನಕ್ಕೂ ಪರದಾಡುವಂತ ಸ್ಥಿತಿ ನಿರ್ಮಾಣಗೊಂಡಿದೆ ಇಂತಹ ಸಂದಿಗ್ದ ಸ್ಥಿತಿಯಲ್ಲಿ ಬಡವರ ಕಷ್ಟಕ್ಕೆ ಸ್ಪಂದಿಸಬೇಕೇ ವಿನಃ ದಿನಸಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಅವರ ಮೇಲೆ ಗಧಾ ಪ್ರಹಾರ ಮಾಡಬಾರದು.
ಅಷ್ಟಕ್ಕೂ ಸಾರ್ವಜನಿಕರಿಗೆ ಆಹಾರದ ಕೊರೆತಾಗಬಾರದು ಎಂಬ ಉದ್ದೇಶದಿಂದ ಕಿರಾಣಿ ಅಂಗಡಿಗಳನ್ನು ತೆರೆಯಲು ಸರಕಾರದ ಪರವಾನಿಗೆ ನೀಡಿದೆ ಆದರೇ ಸಿಕ್ಕದ್ದೇ ಚಾನ್ಸ್ ಎಂದು ನಿಗದಿತ ಬೆಲೆಗಿಂದ ಹೆಚ್ಚಿನ ಬೆಲೆ ಹಾಕಿ ಮಾರಾಟ ಮಾಡುವುದು ಕಾನೂನು ಬಾಹಿರವೂ ಕೂಡ ಒಂದು ವೇಳೆ ಇದೇ ರೀತಿ ಗ್ರಾಹಕರಿಗೆ ಮೋಸ ಮಾಡುವುದು ಕಂಡುಬAದರೆ ತಕ್ಷಣ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟುವೇ ಎಚ್ಚರಿಕೆ ಎಂದು ಖಡಕ್ ವಾರ್ನಿಂಗ ನೀಡಿದರು