
ಬೈಲಹೊಂಗಲದಲ್ಲಿ ಬೆಳಗಾವಿ ಜಿಲ್ಲಾ ಅಸೋಶಿಯೇಶನ್ ಆಫ್ ಫಿಜಿಕಲ್ ಹ್ಯಾಂಡಿಕ್ಯಾಪ್ಡ್ದಿAದ ವಿಕಲಚೇತನರ ಮನೆಮನೆಗೆ ತೆರಳಿ ರೇಷನ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸರಕಾರ ವಿಕಲಚೇತನರ ಕುಟುಂಬಗಳಿಗೆ ಆಹಾರದ ಸಾಮಗ್ರಿಗಳನ್ನು ಪೂರೈಸುವಂತಾಗಬೇಕೆAದರು.
ರಾಷ್ಟಿçÃಯ ಕ್ರೀಡಾಪಟು ಮುಸ್ತಾಕ ಸಯ್ಯದ ಮಾತನಾಡಿ, ಕಿಲ್ಲರ ಕೊರೊನಾದಿಂದ ಬಡ ಕುಟುಂಬಗಳು ಬೀದಿಗೆ ಬರುತ್ತಿವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಮಾನವೀಯತೆಯಿಂದ ನಡೆದುಕೊಂಡು ಬಡ ಕುಟುಂಬಗಳ ಬಾಳಿಗೆ ಬೆಳಕಾಗಬೇಕು. ಅಧಿಕಾರಿಗಳು ನೀಡುವ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಯಾರೂ ಹೊರಗಡೆ ತಿರುಗಾಡದೆ ಮನೆಯಲ್ಲಿ ಸುರಕ್ಷಿತವಾಗಿರಬೇಕೆಂದರು. ಈ ಸಂದರ್ಭದಲ್ಲಿ ಸಿದ್ದು ಶೀಲವಂತ, ಅಲ್ಲಾಭಕ್ಷ ಯರಗಟ್ಟಿ, ಶಫೀ ಚಕ್ಕೋಲಿ, ರಮೇಶ ಕಡಕೋಳ, ಮಂಜು ಕಲ್ಲೊಳ್ಳಿ ಉಪಸ್ಥಿತರಿದ್ದರು.