ಮೈಗೂರ : 1 ಸಾವಿರ ಕುಟುಂಭಕ್ಕೆ ಅರ್ಧ ಕೇಜಿಯಂತೆ ಕಡ್ಲಿ ಬೆಳೆಯನ್ನು ವಿತರಣೆ

ಜಮಖಂಡಿ: ತಾಲೂಕಿನ ಮೈಗೂರ ಗ್ರಾಮದ ಪ್ರಮುಖರು ವಂತಿಗೆ ಹಾಕಿ ಗ್ರಾಮದ 1 ಸಾವಿರ ಕುಟುಂಭಕ್ಕೆ ಅರ್ಧ ಕೇಜಿಯಂತೆ ಕಡ್ಲಿ ಬೆಳೆಯನ್ನು ವಿತರಿಸಿದರು.
ಬಡವರು ಉಪವಾಸದಿಂದ ಇರಬಾರದು ಎಂದು ಶಾಸಕ ಆನಂದ ನ್ಯಾಮಗೌಡ ಸಾಮಾಜಿಕ ಜಾಲತಾನದಲ್ಲಿ ಹಂಚಿಕೊಳ್ಳೋಣ ಎಂಬ ಸಂದೇಶ ನೀಡಿದ್ದರು ಇದಕ್ಕೆ ಪ್ರೇರಣೆಗೊಂಡ ಗ್ರಾಮದ ಪ್ರಮುಖರೆಲ್ಲರು ಸುಮಾರು 35 ಸಾವಿರ ರೂಗಳನ್ನು ವಂತಿಗೆ ಹಾಕಿ ಗ್ರಾಮದಲ್ಲೆ ಬೆಳೆದ ಕಡ್ಲಿಯನ್ನು ರೈತರಿಂದ ಖರಿದಿಸಿದ್ದಾರೆ.
ಸುಮಾರು 550 ಕೆಜಿಯಷ್ಟು ಕಡ್ಲಿಯನ್ನು ಗಿರಣೀಗೆ ಹಾಕಿಸಿ ಗ್ರಾಮದ ಮಾಧವಾನಂಧರ ಆಶ್ರಮದಲ್ಲಿ ಅರ್ಧ ಕೆಜಿಯ ಕಡ್ಲಿ ಬೆಳೆಯ ಪಾಕೆಟ್ಟುಗಳನ್ನಾಗಿ ಗ್ರಾಮದ ಪ್ರಮುಖರೆ ತಾವೆ ಸ್ವತಃ ತಯಾರಿಸಿದ್ದಾರೆ.
ಗ್ರಾಮದ ಪ್ರತಿಯೊಂದು ಆಯಾ ಸಮಾಜದ ಮುಖಂಡರ ಮೂಲಕ ಗ್ರಾಮದಲ್ಲಿನ 1 ಸಾವಿರ ಕುಟುಂಭಕ್ಕೆ ತಲುಪಿಸುವದರ ಮೂಲಕ ಎಲ್ಲರ ಪ್ರಸಂಶೆಗೆ ಪಾತ್ರರಾಗಿದ್ದಾರೆ.
ಬಾಕ್ಷ್:
ಶಾಸಕ ಆನಂದ ನ್ಯಾಮಗೌಡ ಅವರ ಹಂಚಿಕೊಳ್ಳೋಣ ಸಂದೇಶಕ್ಕೆ ತಾಲೂಕಿನಾದ್ಯಂತ ಯುವಕರ ಸಂಘಟನೆಗಳು ಸ್ಪಂದಿಸಿವೆ, ತಾಲೂಕಿನ ಮುತ್ತೂರ, ಸಾವಳಗಿ, ಅಡಿಹುಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ಯುವಕರು ವಂತಿಕೆ ಹಾಕಿ ಗ್ರಾಮದಲ್ಲೆ ಸಿಗುವ ತರಕಾರಿಯನ್ನು ರೈತರಿಂದ ಖರದಿಸಿ ಗ್ರಾಮದ ಬಡವರಿಗೆ ಉಚಿತವಾಗಿ ಹಂಚುವದರ ಮೂಲಕ ಮಾನವೀಯ ಕಾರ್ಯ ಮಾಡುತಿದ್ದಾರೆ. ಅಂಬೇಡ್ಕರ್ ಯುವ ಸೇನೆಯ ಯುವಕರು 6 ಕ್ವಿಂಟಲ್ ಕಣಿಕೆಯನ್ನು ಬೀದಿ ಹಸುಗಳಿಗೆ ಹಾಕಿದರು.
ಬಾಕ್ಷ್:
ರೈತರಿಗೆ ಸಹಾಯ ಹಸ್ತ:
ಗ್ರಾಮದಲ್ಲಿ ಸಿಗುವ ಆಹಾರ ಪದಾರ್ಥಗಳನ್ನು ಖರಿದಿಸಿ ಬಡವರಿಗೆ ಉಚಿತವಾಗಿ ಹಂಚುವ ಕಾರ್ಯದಿಂದ ಗ್ರಾಮದಲ್ಲಿನ ರೈತರ ಆರ್ಥಿಕವಾಗಿ ಉಳಿಯುತ್ತಾರೆ, ಬಡವರಿಗೆ ಹಸಿವನ್ನು ನಿಗಿಸುವ ಕಾರ್ಯವನ್ನು ನಾಗರಿಕರು ಶ್ಲಾಘಿಸುತಿದ್ದಾರೆ.
ಕೋಟ್:
ಮೈಗೂರ ಗ್ರಾಮದ ಪ್ರಮುಖರು ಸೇರಿ ವಂತಿಕೆ ಹಾಕಿ 1 ಸಾವಿರ ಕುಟುಂಭಕ್ಕೆ ಕಡ್ಲಿಬೆಳೆಯನ್ನು ಹಂಚಿದ್ದು ಶ್ಲಾಘನೀಯ. ಅವರು ಮಾದರಿಯಗುವಂತೆ ಕಾರ್ಯ ಮಾಡಿದ್ದಾರೆ. ಆನಂದ ನ್ಯಾಮಗೌಡ. ಶಾಸಕ.
ಕೋಟ್:
ಗ್ರಾಮದಲ್ಲಿ ಬಡವರಿಗೆ ನಮ್ಮಿಂದ ಒಂದಿಷ್ಟು ಅನಕೂಲವಾಗಲಿ ಎಂದು ಎಲ್ಲರು ವಂತಿಕೆ ಹಾಕಿ ಕಡ್ಲಿಬೆಳೆಯನ್ನು ಹಂಚಿದ್ದೆವೆ. ಮಹಾದೇವ ತೇಲಸಂಗ, ಮಹಾದೇವ ಪಾಟೀಲ, ಭರತೇಶ ಮೂಕನವರ, ಸಿದ್ದಪ್ಪ ಮೂಕನವರ, ಬಸವರಾಜ ಪಾಟೀಲ ಗ್ರಾಮದ ಪ್ರಮುಖರು.
Share
WhatsApp
Follow by Email