ಬ್ರೇಕಿಂಗ್ ನ್ಯೂಸ್ ಶ್ರೀಪಾದಬೋಧ ಸ್ವಾಮೀಜಿಗಳ ನಿಧನಕ್ಕೆ ಮಹಾಲಕ್ಷ್ಮೀ ಅರ್ಬನ್ ಸೋಸಾಯಿಟಿಯ ಆಡಳಿತ ಮಂಡಳಿ ಹಾಗೂ ಸಿಬ್ಬಂಧಿಗಳಿಂದ ಸಂತಾಪ 20/04/202020/04/2020 admin ಮೂಡಲಗಿ: ಭಾನುವಾರ ನಿಧನ ಹೊಂದಿದ ಇಲ್ಲಿಯ ಶ್ರೀ ಶಿವಬೋಧರಂಗ ಮಠದ 12ನೇ ಪೀಠಾಧಿಪತಿ ಶ್ರೀ ಶ್ರೀಪಾದಬೋಧ ಸ್ವಾಮೀಜಿಯವರು ನಿಧನಕ್ಕೆ ಇಲ್ಲಿಯ ಮಹಾಲಕ್ಷ್ಮೀ ಅರ್ಬನ್ ಸೋಸಾಯಿಟಿಯಲ್ಲಿ ಮೌನಾಚರಣೆ ಮೂಲಕ ಶೃದ್ಧಾಂಜಲಿ ಸಭೆಯ ಜರುಗಿತು.ಸೊಸೈಯಿಟಿಯ ಪ್ರಧಾನ ಕಾರ್ಯದರ್ಶಿ ಚನಬಸು ಬಗನಾಳ ಮಾತನಾಡಿ, ಶ್ರೀಗಳ ನಿಧನದಿಂದ ನಾಡಿಗೆ ತುಂಬಲ್ಲಾರದ ನಷ್ಟವಾಗಿದೆ, ಶ್ರೀಗಳ ಆಶಿರ್ವಾದದಿಂದ ಮೂಡಲಗಿ ಪಟ್ಟಣದ ಅಭಿವೃದ್ಧಿಯ ಹೊಂದುತಿದ್ದು, ಅದೇ ರೀತಿ ಶ್ರೀಗಳ ಆಶಿರ್ವಾದದಿಂದ ನಮ್ಮ ಸಂಸ್ಥೆಯ ಪ್ರಗತಿ ಪಥದತ್ತ ನಡೆಯುತ್ತಿದು, ಮುಂದೆ ಸಹ ಶ್ರೀಗಳ ಆಶಿರ್ವಾದ ಇದ್ದೇ ಇರುತ್ತದೆ ಎಂದು ಆಶಯ ವ್ಯಕ್ತ ಪಡಿಸಿದರು.ಶ್ರೀಗಳ ಭಾವ ಚಿತ್ರಕ್ಕೆ ಸೋಸೈಟಿ ಉಪಾಧ್ಯಕ್ಷ ಮಲ್ಲಪ್ಪ ಗಾಣಿಗೇರ ಪೂಜೆ ಸಲ್ಲಿಸಿದರು,ಶೃದ್ಧಾಂಜಲಿ ಸಭೆಯಲ್ಲಿ ಸೋಸೈಟಿ ನಿರ್ಧೇಶಕರಾದ ಪರಪ್ಪ ಮುನ್ಯಾಳ, ಶಂಕರ ಮುರಗೋಡ, ಸಂತೋಷ ಪಾರ್ಶಿ, ಡಾ: ಪ್ರಕಾಶ ನಿಡಗುಂದಿ ಹಾಗೂ ಸಿಬ್ಬಂದಿ ವರ್ಗದವರು ಮತ್ತಿತರರು ಇದ್ದರು. Share