ಬ್ರೇಕಿಂಗ್ ನ್ಯೂಸ್ ಶ್ರೀಪಾದಬೋಧ ಸ್ವಾಮೀಜಿ ನಿಧನಕ್ಕೆ ಅಶೋಕ ಪೂಜಾರಿ ಸಂತಾಪ 20/04/202020/04/2020 admin ಮೂಡಲಗಿ : ಮೂಡಲಗಿಯ ಶ್ರೀ ಶಿವಬೋಧರಂಗ ಮಠದ ಪೂಜ್ಯ ಮಠಾಧೀಪತಿಗಳಾದ ಶ್ರೀ ಶಿವಬೋಧ ರಂಗ ಸ್ವಾಮಿಗಳು ನಿನ್ನೆ ಸಾಯಂಕಾಲ ಈ ಭೌತಿಕ ಶರೀರವನ್ನು ತ್ಯಜಿಸಿರುವದು ಸುದ್ದಿ ತಿಳಿದು ಸಮಸ್ತ ಭಕ್ತರಿಗೆ ತುಂಬಲಾದರ ನೋವನ್ನುಂಟುಮಾಡಿದೆ. ಅವರ ಅಗಲುವಿಕೆಗೆ ತೀವ್ರ ಶೋಕವ್ಯಕ್ತಪಡಿಸಿರುವ ಗೋಕಾಕದ ಜೆ.ಡಿ.ಎಸ್. ಮುಖಂಡ ಅಶೋಕ ಪೂಜಾರಿ ಪೂಜ್ಯರು ಧಾರ್ಮಿಕ ಮತ್ತು ಆಧ್ಯಾತ್ಮ ಜೀವಿಗಳಾಗಿದ್ದು, ಅವರ ಆತ್ಮ ಪರಮಾತ್ಮನಲ್ಲಿ ಒಂದಾಗಿದು ಎಂದು ತಿಳಿಸಿದ್ದಾರೆ.ಶ್ರೀಗಳು ಅತ್ಯಂತ ಸಹೃದಯದ ಶಾಂತ ಸ್ವಭಾವದ ವ್ಯಕ್ತಿತ್ವವುಳ್ಳವರಾಗಿದ್ದು, ಧಾರ್ಮಿಕ ಮತ್ತು ಆಧ್ಯಾತ್ಮಿಕ ಬದುಕಿನೊಂದಿಗೆ ಜನಪರ ನಿಲುವು ಹೊಂದಿದವರಾಗಿದ್ದರು, ಸದಾ ಮನುಕುಲದ ಒಳಿತಿಗಾಗಿ ಶ್ರಮಿಸಿದ ಅವರು ಸಂದರ್ಭ ಬಂದಾಗ ಈ ಭಾಗದ ಜನರ ಬೇಕು ಬೇಡಿಕೆಗಳಿಗೆ ಸ್ಪಂಧಿಸಿ ಸಾಮಾಜಿಕ ಹೋರಾಟ ಮತ್ತು ಪರಿವರ್ತನೆಗೆ ತಮ್ಮನ್ನೇ ತಾವು ತೊಡಗಿಸಿಕೊಂಡಿದ್ದ ಪೂಜ್ಯರಾಗಿದ್ದರು ಎಂದು ಅವರ ವ್ಯಕ್ತಿತ್ವವನ್ನು ಶ್ಲಾಘಿಸಿದ್ದಾರೆ. Share