ಬುದ್ಧಿ ಹೇಳಿದ್ದಕ್ಕೆ ಪೊಲೀಸರ ಮೇಲೆ ಬಿಎಸ್ ಎಪ್ ಯೋಧನಿಂದ ಹಲ್ಲೆ

ಚಿಕ್ಕೋಡಿ: ಮಾಸ್ಕ್ ಹಾಕಿಕೊಳ್ಳಿ ಹಾಗೇ ಮನೆ ಬಿಟ್ಟು ಹೊರಗಡೆ ತಿರುಗಾಡಬೇಡಿ ಎಂದು ಬುದ್ಧಿವಾದ ಹೇಳಿದ್ದಕ್ಕೆ ಕರ್ತವ್ಯ ನಿರತ ಪೊಲೀಸರ ಮೇಲೆ ಸಿ.ಆರ್.ಪಿ.ಎಫ್ ಯೋಧ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಎಕ್ಸಂಬಾ ಪಟ್ಟಣದಲ್ಲಿ ನಡೆದಿದೆ.
ಎಕ್ಸಂಬಾ ಪಟ್ಟಣದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಹೊರಗಡೆ ರಸ್ತೆಯಲ್ಲಿ ಮಾಸ್ಕ್ ಇಲ್ಲದೆ ತಿರಾಗುಡುತ್ತಿದ್ದ ಸಿ.ಆರ್.ಪಿ.ಎಫ್ ಯೋಧ ಸಚಿನ್ ಸಾವಂತ್ ನಿಗೆ ಪೊಲೀಸರು ಮನೆಯಿಂದ ಹೊರಗೆ ತಿರುಗಾಡಬೇಡಿ. ಮಾಸ್ಕ್ ಧರಿಸಬೇಕು ಎಂದು ಬುದ್ಧಿವಾದ ಹೇಳಿದ್ದಾರೆ. ಈ ವಿಚಾರಕ್ಕೆ ಪೊಲೀಸರು ಹಾಗೂ ಯೋಧ ಸಚಿನ್ ನಡುವೆ ವಾಗ್ವಾದ ನಡೆದಿದೆ.
ಈ ವೇಳೆ ಮಾತುಕತೆ ಕೈಮೀರಿ ನನಗೆ ಬುದ್ಧಿವಾದ ಹೇಳುತ್ತೀರಾ ಎಂದು ಏಕಾಏಕಿ ಯೋಧ ಸಚಿನ್ ಪೊಲೀಸರ ಬಟ್ಟೆ ಹಿಡಿದು ಎಳೆದಾಡಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಪೊಲೀಸರು ಕೂಡ ಲಾಠಿ ರುಚಿ ತೋರಿಸಿ ಯೋಧನನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Share
WhatsApp
Follow by Email