ರಾಯಬಾಗ :ಕೊರೋನಾ ವೈರಸ್ ಸಲುವಾಗಿ ನಿರಂತರ ಸೇವೆ ಸಲ್ಲಿಸುತ್ತಿರುವ ಆಶಾ,ಅಂಗನವಾಡಿ,ಆರಕ್ಷಕರಿಗೆ ಹಾಗೂ ಗ್ರಾಪಂ ಸಿಬ್ಬಂದಿಗಳಿಗೆ ಸತ್ಕರಿಸಿ ಅಭಿನಂದಿಸಲಾಯಿತು.

ರಾಯಬಾಗ : ಕೊರೋನಾ ವೈರಸ್ ಸಲುವಾಗಿ ನಿರಂತರ ಸೇವೆ ಸಲ್ಲಿಸುತ್ತಿರುವ ತಾಲೂಕಿನ ಬಾವನ ಸೌಂದತ್ತಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಎಲ್ಲಾ ಅಂಗನವಾಡಿ, ಆಶಾಕಾರ್ಯಕರ್ತರು, ಆರಕ್ಷಕ ಸಿಬ್ಬಂದಿ, ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿಗಳನ್ನು ಬುಧವಾರ ಕಾಂಗ್ರೇಸ್ ಪಕ್ಷದ ಮುಖಂಡ ಮಹಾವೀರ ಮೊಹಿತೆ ಹಾಗೂ ಜಿ.ಪಂ.ಸದಸ್ಯೆ ಜಯಶ್ರೀ ಮೊಹಿತೆ ಅವರ ನೇತೃತ್ವದಲ್ಲಿ ಸತ್ಕರಿಸಿ ಅಭಿನಂದಿಸಲಾಯಿತು.
ಬಾವನಸೌAದತ್ತಿ ಜಿಲ್ಲಾ ಪಂಚಾಯ್ತಿಯ ವ್ಯಾಪ್ತಿಯ ಬಾವನಸೌಂದತ್ತಿ, ದಿಗ್ಗೇವಾಡಿ,ಭಿರಡಿ, ಜಲಾಲಪೂರ, ಬೆಕ್ಕೇರಿ ಗ್ರಾಮಗಳಲ್ಲಿ ಕೊರೋನಾ ವೈರಸ್ ಸಲುವಾಗಿ ನಿರಂತರ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಹಾಗೂ ಆಶಾಕಾರ್ಯಕರ್ತರಿಗೆ ಶಾಲುಹೊದಿಸಿ, ಸಾರಿನೀಡಿ ಹಾಗೂ ಗೌರವಧನ ಕೊಟ್ಟು ವಿಶೇಷವಾಗಿ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ಮಹಾವೀರ ಮೊಹಿತೆ ಅವರು ಮಾತನಾಡಿ ಕೊರೋನಾ ರೋಗವು ಚೀನಾ ದೇಶದಿಂದ ಬಂದು ಜಗತ್ತಿನ ಎಲ್ಲಾ ಕಡೆಗೆ ಹಬ್ಬುತ್ತಿದೆ ಇದರ ಒಂದು ನಿಯಂತ್ರಣಕ್ಕಾಗಿ ಹಗಲಿರುಳು ದುಡಿಯುತ್ತಿರುವ ಅಂಗನವಾಡಿ ಹಾಗೂ ಆಶಾಕಾರ್ಯಕರ್ತರ ಸೇವೆ ಅನನ್ಯವಾಗಿದೆ ಗ್ರಾಮ ಹಾಗೂ ಪಟ್ಟಣಗಳಲ್ಲಿ ಈ ಕಾರ್ಯಕರ್ತರ ಸೇವೆ ಬಹಳ ಅತೀ ಅವಶ್ಯವಾಗಿದೆ, ಕಾರ್ಯಕರ್ತೆಯರು ತಮ್ಮ ಜೀವನದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆ ಅವರಿಗೆ ಒಂದು ಆತ್ಮಸ್ಥರ್ಯ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡೋಣ ಎಂದು ಹೇಳಿದರು. ಬಾವನಸೌಂದತ್ತಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಸುಮಾರು ನೂರು ಜನ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಸತ್ಕರಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ, ಜಿ.ಪಂ.ಸದಸ್ಯೆ ಜಯಶ್ರೀ ಮೊಹಿತೆ, ಜಿಲ್ಲಾ ಕಾಂಗ್ರೇಸ್ ಕಮೀಟಿ ಅಧ್ಯಕ್ಷ ಲಕ್ಷö್ಮಣರಾವ ಚಿಂಗಳೆ, ಧೂಳಗೌಡ ಪಾಟೀಲ, ಬಿ.ಎನ್.ಬಂಡಗಾರ,ಗಣೇಶ ಮೊಹಿತೆ, ರಾಜು ಶಿರಗಾಂವೆ, ಸುಭಾಷ ಕೋಠಿವಾಲೆ, ಚಂದು ಬುರುಡ, ದಿಲೀಪ ಜಮಾದರ, ರಮೇಶ ಬೆಳಗಲಿ ಸೇರಿದಂತೆ ಅನೇಕರು ಇದ್ದರು.
Share
WhatsApp
Follow by Email