ಬ್ರೇಕಿಂಗ್ ನ್ಯೂಸ್ ಮತದಾರರ ಋಣ ತೀರಿಸಲು ಇದೊಂದು ಅಳಿಲು ಸೇವೆ : ಕೆ.ಎಮ್,ಎಫ್ ರಾಜ್ಯಾಧ್ಯಕ್ಷ ಬಾಲಚಂದ್ರ ಜಾರಕಿಹೊಳಿ 25/04/202025/04/20201 min read admin ಮೂಡಲಗಿ : ಅರಭಾಂವಿ ಕ್ಷೇತ್ರದಲ್ಲಿ ವಾಸಿಸುತ್ತಿರುವ ಪ್ರತಿಯೊಂದು ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ನೀಡುವ ಮೂಲಕ ಮಹಾನ್ ದಾನಿಯಾಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸತ್ಕಾರ್ಯ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಸಮಾಜ ಮುಖಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಬಾಲಚಂದ್ರ ಜಾರಕಿಹೊಳಿ ಅವರು ಕ್ಷೇತ್ರದ ಜನರ ಹೃದಯದಲ್ಲಿ ನೆಲೆಸಿರುವ ಹೃದಯವಂತರು ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಬಣ್ಣಿಸಿದರು.ಶನಿವಾರದಂದು ಪಟ್ಟಣದ ಸರ್ವ ಕುಟುಂಬಗಳಿಗೆ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಆಹಾರ ಧಾನ್ಯಗಳ ಕಿಟ್ಟ್ ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಅರಭಾಂವಿ ವಿಧಾನ ಸಭಾ ಮತ ಕ್ಷೇತ್ರದಲ್ಲಿ ೩೪ ಗ್ರಾಮ ಪಂಚಾಯತಿಗಳಿದ್ದು, ಇದರಲ್ಲಿ ೭೭ ಗ್ರಾಮಗಳಿವೆ ಕ್ಷೇತ್ರದ ಪ್ರತಿಯೊಂದು ಕುಟುಂಬಗಳಿಗೆ ಬಡವ-ಶ್ರೀಮಂತ ಎಂಬ ಬೇಧ ಭಾವ ಮಾಡದೇ ಸರ್ವ ಕುಟುಂಬಗಳಿಗೆ ಸ್ವಂತ ವೆಚ್ಚದಲ್ಲಿ ನೀಡುತ್ತಿರುವ ಕಾರ್ಯ ಇತರರಿಗೆ ಮಾದರಿಯಾಗಿದೆ. ೭೬೨೫೮ ಕುಟುಂಬಗಳಿಗೆ ಒಟ್ಟು ಹತ್ತು ದಿನಗಳು ಆಗುವಷ್ಟು ದಿನಸಿ ದಿನ ಬಳಕೆ ವಸ್ತುಗಳನ್ನು ಕ್ಷೇತ್ರದ ಮತದಾರರಿಗೆ ನೀಡುತ್ತಿದ್ದಾರೆ. ಮೂಡಲಗಿಯಲ್ಲಿಂದು ಪ್ರತಿ ಕುಟುಂಬಗಳಿಗೆ ಹಂಚಲಾಗುತ್ತಿದ್ದು, ನಾಳೆಯಿಂದ ಪ್ರತಿಯೊಂದು ಗ್ರಾಮಗಳ ಕುಟುಂಬಕ್ಕೆ ಆಹಾರ ಧಾನ್ಯಗಳನ್ನು ವಿತರಿಸಲಾಗುವದು ಎಂದು ಹೇಳಿದರು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜನರು ಕಷ್ಟದ ದಿನಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಅವರಿಗೆ ಪ್ರತಿ ಹಂತದಲ್ಲೂ ಆಸರೆಯಾಗಿ ಅಪದ್ಬಾಂದವ ಆಗಿದ್ದಾರೆ. ಇವರಂತಹ ಜನಾನುರಾಗಿ ಶಾಸಕರನ್ನು ಪಡೆದಿರುವದು ಕ್ಷೇತ್ರದ ಜನರು ಪುಣ್ಯವಂತರು. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ನಿಂತು ಅದರ ವಿರುದ್ದ ಹೋರಾಡೋಣ. ಇದಕ್ಕೆ ಹಗಲಿರುಳು ದುಡಿಯುತ್ತಿರುವ ಕೊರೋನಾ ವಾರಿಯರ್ಸ್ರನ್ನು ಗೌರವಿಸೋಣ. ಅಲ್ಲದೇ ಕೊರೋನಾ ಸಲುವಾಗಿಯೇ ಶಾಸಕರು ತಮ್ಮ ಗೃಹ ಕಛೇರಿಯಲ್ಲಿ ಸಹಾಯವಾಣಿ ಆರಂಭಿಸಿದ್ದಾರೆ ಎಂದು ತಿಳಿಸಿದರು.ಕೊರೋನಾ ಬಂದಾಗಿನಿAದ ಶಾಸಕರ ಆದೇಶದ ಮೇರೆಗೆ ಪ್ರತಿಯೊಂದು ಗ್ರಾಮಗಳಿಗೆ ತಾಲೂಕಾಡಳಿತ ಮತ್ತು ಟೀಂ ಎನ್‌ಎಸ್‌ಎಫ್ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಬಾಲಚಂದ್ರ ಜಾರಕಿಹೊಳಿಯವರು ಕ್ಷೇತ್ರದ ಜನತೆಗೆ ೨.೫೦ ಲಕ್ಷ ಮಾಸ್ಕ್ಗಳನ್ನು ನೀಡಿದ್ದಾರೆ. ನಗರ ಪ್ರದೇಶಗಳಲ್ಲಿರುವ ಸ್ಲಂ ಪ್ರದೇಶದ ನಿರ್ಗತಿಕ ಕುಟುಂಬಗಳಿಗೆ ಪ್ರತಿದಿನ ಒಂದು ಲೀಟರ್‌ನಂತೆ ಉಚಿತವಾಗಿ ನಂದಿನಿ ಹಾಲು ವಿತರಿಸುತ್ತಿದ್ದಾರೆ ಎಂದು ಅವರ ಜನಪರ ಸೇವೆಗಳನ್ನು ವಿವರಿಸಿದರು. ತಹಶೀಲ್ದಾರ ದಿಲ್‌ಶಾದ್ ಮಹಾತ ಮತ್ತು ಡಿವಾಯ್‌ಎಸ್‌ಪಿ ಡಿ.ಟಿ ಪ್ರಭು ಮಾತನಾಡಿ, ಹಸಿದ ಕುಟುಂಬಗಳಿಗೆ ಅನ್ನ ನೀಡುತ್ತಿರುವ ಅನ್ನದಾತ ಬಾಲಚಂದ್ರ ಜಾರಕಿಹೊಳಿಯವರು. ಇವರ ಸೇವೆ ಇಡೀ ರಾಷ್ಟಕ್ಕೆ ಮಾದರಿಯಾಗಿದೆ. ಬಡವರಿಗೆ, ನಿರಾಶ್ರಿತರಿಗೆ ಹಾಗೂ ಅಲೆಮಾರಿ ಕುಟುಂಬಗಳಿಗೆ ಕೊರೋನಾ ಮಹಾ ಮಾರಿ ವೈರಸ್‌ದಿಂದಾಗಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಗತ್ಯವಿರುವ ದಿನ ಬಳಕೆ ವಸ್ತುಗಳನ್ನು ಪ್ರತಿ ಕುಟುಂಬಕ್ಕೂ ನೀಡುತ್ತಿರುವದು ಶ್ಲಾಘನೀಯವಾಗಿದೆ. ಪೊಲೀಸ್‌ರಿಗಿಂತ ಅತೀ ಕಡಿಮೆ ಸಂಬಳ ಪಡೆಯುತ್ತಿರುವ ಆಶಾ ಕಾರ್ಯಕರ್ತರ ಸೇವೆ ನಮಗೆಲ್ಲಾ ಮಾದರಿಯಾಗಿದೆ. ನಿಮ್ಮಗಳ ಕಷ್ಟ ಕಾರ್ಪಣ್ಯಗಳಿಗೆ ನಮ್ಮ ಪೊಲೀಸ್ ಬಾಗಿಲು ತೆರೆದಿದೆ. ಕೊರೋನಾ ವಿರುದ್ದ ಅಹೋ ರಾತ್ರಿ ದುಡಿಯುತ್ತಿರುವ ಕಾರ್ಯಕರ್ತೆಯರು ತಮ್ಮ ಆರೋಗ್ಯದ ಬಗ್ಗೆಯು ಕಾಳಜಿ ವಹಿಸುವಂತೆ ಹೇಳಿದರು.ಮಾಜಿ ಜಿ.ಪಂ ಸದಸ್ಯ ರಾಜೇಂದ್ರ ಸಣ್ಣಕ್ಕಿ, ಪುರಸಭೆ ಸದಸ್ಯ ಈರಣ್ಣ ಕೊಣ್ಣೂರ ಮಾತನಾಡಿ, ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ಸಾಮಾಜಿಕ ಕಳಕಳಿಯನ್ನು ಕೊಂಡಾಡಿದರು. ಶಾಸಕರ ಮೂಲಕ ನಮಗೆಲ್ಲಾ ಪುಣ್ಯದ ಕೆಲಸ ಮಾಡುವ ಸೌಭಾಗ್ಯ ಒದಗಿ ಬಂದಿದೆ. ಇದನ್ನು ಸದುಪಯೋಗ ಪಡಿಸಿಕೊಂಡು ಬಾಲಚಂದ್ರ ಅವರಿಗೆ ಶಕ್ತಿ ತುಂಬೋಣ. ಕೊರೋನಾ ವೈರಸ್ ಓಡಿಸೋಣ. ಇದು ಪ್ರತಿಯೊಬ್ಬರ ಪ್ರತಿಜ್ಙೆಯಾಗಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ನಿಂಗಪ್ಪ ಫೀರೋಜಿ, ಈರಣ್ಣ ಹೊಸೂರ, ಸಿಪಿಐ ವೆಂಕಟೇಶ ಮುರನಾಳ, ರವಿ ಸೋನವಾಲಕರ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ಯುವ ಧುರೀಣ ನಾಗೇಶ ಶೇಖರಗೋಳ, ಸಂತೋಷ ಸೋನವಾಲಕರ, ವಿಜಯ ಸೋನವಾಲಕರ, ರವಿ ಸಣ್ಣಕ್ಕಿ, ಬಸವಂತ ಕಮತಿ, ಹನಮಂತ ತೇರದಾಳ, ಮುತ್ತೆಪ್ಪ ಕುಳ್ಳೂರ, ರವಿ ಪರುಶೆಟ್ಟಿ, ಗೋಕಾಕ ಬಿಇಒ ಜಿ.ಬಿ ಬಳಗಾರ, ಪಿಎಸ್‌ಐ ಗಳಾದ ಮಲ್ಲಿಕಾರ್ಜುನ ಸಿಂಧೂರ, ಹನಮಂತ ನೇರಳೆ, ಹಾಲಪ್ಪ ಬಾಲದಂಡಿ, ಸಿಡಿಪಿಒ ವಾಯ್.ಎಮ್.ಗುಜನಟ್ಟಿ, ಕೃಷಿ ಅಧಿಕಾರಿ ಎಮ್.ಎಮ್.ನದಾಫ್, ತೋಟಗಾರಿಕೆ ಅಧಿಕಾರಿ ಮಲ್ಲಿಕಾರ್ಜುನ ಜಾನಮಟ್ಟಿ, ಮುಖ್ಯಾಧಿಕಾರಿ ದೀಪಕ ಹರ್ದಿ, ತಾಲೂಕಾ ಮಟ್ಟದ ಅಧಿಕಾರಿಗಳು, ಮೂಡಲಗಿ ಪುರಸಭೆ ಸದಸ್ಯರು, ಸಹಕಾರಿಗಳು, ಉಪಸ್ಥಿತರಿದ್ದರು. ಬಾಲಚಂದ್ರ ಜಾರಕಿಹೊಳಿ.ಶಾಸಕರು ಹಾಗೂ ಕಹಾಮ ಅಧ್ಯಕ್ಷರು : “ವಿಶ್ವವ್ಯಾಪಿಯಾಗಿ ಹರಡಿರುವ ಕೊರೋನಾ ವೈರಸ್ ಓಡಿಸಲು ಇದಕ್ಕಿರುವ ಒಂದೇ ಮಾರ್ಗವೇ ಸಾಮಾಜಿಕ ಅಂತರ. ಮಾರ್ಚ ೨೪ ರಿಂದ ಜಾರಿಯಲ್ಲಿರುವ ಲಾಕ್‌ಡೌನ್ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಕೇಂದ್ರದ ಹಾಗೂ ರಾಜ್ಯ ಸರಕಾರಗಳ ವಿಧಿಸಿರುವ ನಿಯಮಗಳನ್ನು ಪಲನೆ ಮಾಡಬೇಕಾದುದ್ದು ನಮ್ಮೇಲ್ಲರ ಕರ್ತವ್ಯವಾಗಿದೆ. ಮೇ ೩ ರ ವರೆಗೆ ಲಾಕ್‌ಡೌನ್ ಇರುವದರಿಂದ ಪ್ರತಿಯೊಬ್ಬರು ಮನೆಯಲ್ಲಿದ್ದುಕೊಂಡು ಸುರಕ್ಷಿತವಾಗಿರಿ. ಕೊರೋನಾ ವಿರುದ್ದ ಜಾಗೃತರಾಗಿರಿ. ಕಳೆದ ಒಂದು ತಿಂಗಳಿನಿಂದ ಲಾಕ್‌ಡೌನ್ ಸಂದರ್ಭದಲ್ಲಿ ನಾಗರಿಕರಿಗೆ ತೊಂದರೆಯಾಗುತ್ತಿರುವದನ್ನು ಗಮನಿಸಿದ್ದೇನೆ. ಇದು ನಮಗೆ ಅನೀವಾರ್ಯವಾಗಿದೆ. ಕಳೆದ ೧೫ ವರ್ಷಗಳಿಂದ ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸದಿಂದ ನನ್ನನ್ನು ಶಾಸಕನನ್ನಾಗಿ, ಸಚಿವನನ್ನಾಗಿ ಮಾಡಿದ್ದೀರಿ. ಈಗ ನಿಮ್ಮೇಲ್ಲರ ಆಶೀರ್ವಾದದಿಂದ ಕೆಎಮ್‌ಎಫ್ ಅಧ್ಯಕ್ಷನಾಗಿದ್ದೇನೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನರ ಸಂಕಷ್ಟಕ್ಕೆ ಧಾವಿಸುವದು ನನ್ನ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಪ್ರತಿ ಕುಟುಂಬಗಳಿಗೂ ಆಹಾರ ಧಾನ್ಯಗಳನ್ನು ಹಂಚುತ್ತಿದ್ದೇನೆ. ಇದರಲ್ಲಿ ದಿನಸಿ ದಿನ ಬಳಕೆಯ ವಸ್ತುಗಳಿವೆ. ಇದರಲ್ಲಿ ಯಾರೂ ರಾಜಕೀಯ ಬೆರೆಸಬೇಡಿ. ೭೬೨೫೮ ಕುಟುಂಬಗಳಿಗೂ ಆಹಾರ ಧಾನ್ಯಗಳು ಪ್ರಾಮಾಣಿಕವಾಗಿ ಮುಟ್ಟಬೇಕು. ಇದು ನಾನು ಮಾಡುತ್ತಿರುವ ಚಿಕ್ಕ ಅಳಿಲು ಸೇವೆ. ಎಷ್ಟು ಮಾಡಿದರೂ ಕ್ಷೇತ್ರದ ಮತದಾರರ ಋಣ ತೀರಿಸಲು ಅಸಾಧ್ಯ. ಆದ್ದರಿಂದ ನಾವೆಲ್ಲರೂ ಸರಕಾರಗಳ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ.ಕೊರೋನಾ ಸೋಲಿಸೋಣ”. Share