ಬ್ರೇಕಿಂಗ್ ನ್ಯೂಸ್ ಮೂಡಲಗಿ ಶ್ರೀ ಕಾಳಿಕಾ ದೇವಿ ಜಾತ್ರಾ ಮಹೋತ್ಸವ ರದ್ದು 25/04/202025/04/20201 min read admin ಮೂಡಲಗಿ : ಕೊರೋನಾ ವೈರಸ್ ಸೋಂಕು ಹರಡುವ ಸಾಧ್ಯತೆ ಇರುವ ಕಾರಣ ಮುಂಜಾಗ್ರತಾ ಕ್ರಮವಾಗಿ ವಿಶ್ವಕರ್ಮ ಸಮಾಜದ ಹಿರಿಯರು ಹಾಗೂ ಶ್ರೀ ಕಾಳಿಕಾ ದೇವಸ್ಥಾನ ಟ್ರಸ್ಟ್ ನಿರ್ಣಯದಂತೆ ಮೂಡಲಗಿ ಶ್ರೀ ಕಾಳಿಕಾ ದೇವಿ ಜಾತ್ರಾ ಮಹೋತ್ಸವ ರದ್ದುರದ್ದುಗೊಳಿಸಲಾಗಿದೆ ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.ವಿಶ್ವಕರ್ಮ ಸಮಾಜದ ಮೂಡಲಗಿ ಮತ್ತು ಸುತ್ತ ಮುತ್ತ ಗ್ರಾಮದ ಸಮಸ್ತ ಭಕ್ತಾಧಿಗಳು ತಮ್ಮ ತಮ್ಮ ಮನೆಗಲ್ಲೇ ವಿರಾಟ ವಿಶ್ವಕರ್ಮ ಹಾಗೂ ಜಗನ್ಮಾತೆ ಶ್ರಿ ಕಾಳಿಕಾ ದೇವಿ ಪೂಜೆಯನ್ನು ಮಾಡಿ ಶ್ರಿ ದೇವಿ ಕೃಪೆಗೆ ಪಾತ್ರರಾಗಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಸರಕಾರ ಕೈಗೊಂಡ ಲಾಕ್ ಡೌನ್ ನಿರ್ಧಾರಕ್ಕೆ ಸಹಕರಿಸಬೇಕೆಂದು ಶ್ರೀ ಕಾಳಿಕಾ ದೇವಿ ಟ್ರಸ್ಟ್ ಮನವಿ ಮಾಡಿಕೊಂಡಿದೆ. Share