ಭಕ್ತಿ ಭಂಡಾರಿ, ಕ್ರಾಂತಿಯೋಗಿ ಬಸವಣ್ಣ | ವಿಶ್ವದಾದ್ಯಂತ ಬಸವ ಜಯಂತಿ ಸರಳ ರೀತಿಯಲ್ಲಿ ಆಚರಣೆ

ವಿಷೇಶ ವರದಿ : ಮಲ್ಲು ಬೋಳನ್ನವರ
ಹಳ್ಳೂರ :
ವಿಭೂತಿಯ ಹೊಸದವರ
ರುದ್ರಾಕ್ಷಿಯ ಧರಿರಿಸದವರು
ನಿತ್ಯ ಲಿಂಗಾರ್ಚನೆಯ ಮಾಡದವರ
ಸದ್ಬಕ್ತರ ಸಂಗದಲ್ಲಿದವರ ಎನಗೊಮ್ಮೆ ತೋರದರರು
ಕೂಡಲ ಸಂಗಮದೇವಾ ಸೆರಗೊಡ್ಡಿ ಬೇಡುವೆನು……….

ಪ್ರತಿ ವರ್ಷದಂತೆ ಮತ್ತೇ ಸಬವ ಜಯಂತಿ ಬಂದಿದೆ, ಕನ್ನಡಿಗರಲ್ಲಿ ಅಷ್ಟೇ ಅಲ್ಲ ಇಡೀ ವಿಶ್ವದಾದ್ಯಂತ ಬಸವ ಕಲ್ಯಾಣ ಸದ್ದು ಮಾಡಬೇಕಾಗಿತ್ತು ಆದರೆ ವಿಶ್ವದಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಪರಿಣಾಮವಾಗಿ ವಿಜೃಂಭಣೆಯಿಂದ ನಡೆಯಬೇಕಿದ ಬಸವ ಜಯಂತಿ ಲಾಕ್ ಡೌನ್ ಮೂಲಕ ಲಾಕ್ ಆಗಿದೆ.

ಇಂದು ಬಸವ ಪ್ರೇಮಿಗಳಿಗೆ ಸ್ವಲ್ಪ ಮಟ್ಟಿಗೆ ಅಸಮಾಧಾನ ಮೂಡಿದೆ, ಕಾರಣ ಏನೂ ಗೊತ್ತಾ ಮಳೆಗಾಲದಂತೆ, ಚಳಿಗಾಲದಂತೆ, ದೀಪಾವಳಿಯಂತೆ, ಸಂಕ್ರಾಂತಿಯಂತೆ ಬಸವ ಜಯಂತ್ಯೂತ್ಸವವೂ ಕೂಡಾ ಪ್ರತಿ ವರ್ಷ ಬರುತ್ತದೆ. ಬಸವ ಪ್ರೇಮೀಗರ ಮನಸ್ಸುಗಳಲ್ಲಿ ಹೊಸ ಸಂಚಲನ ಮೂಡಿಸುತ್ತದೆ ಆದರೆ ಇಂದು ಮಾತ್ರ ಆ ಸಂಚಲನಕ್ಕೆ ಕಡಿವಾಣ ಬಿದ್ದಿದೆ.

ವಿಶ್ವಗುರು ಬಸವಣ್ಣನವರು ಪರಮಾತ್ಮನ ಕರುಣೆಯ ಕಂದರಾಗಿ ಅವತರಿಸಿ, ಲೋಕಕ್ಕೆ ಹೊಸ ಧರ್ಮವೊಂದನ್ನು ಕೊಟ್ಟರು, ಇಂಗಳೇಶ್ವರ ಬಾಗೇವಾಡಿಯಲ್ಲಿ ಶ್ಐವ ಬ್ರಾಹ್ಮಣ ದಂಪತಿಳಾದ ಮಾದರದ-ಮಾದಲಾಂಬಿಕೆಯರ ಮಗನಾಗಿ ಆನಂದನಾಮ ಸಂವತ್ಸರದಲ್ಲಿ ವೈಶಾಖ ಮಾಸದ ಅಕ್ಷಯ ತ್ರುತೀಯಯದಂದು ಕ್ರಿ.ಶ.1134 ಏಪ್ರಿಲ್ 20ರ ರೋಹಿಣಿ ನಕ್ಷತ್ರದಲ್ಲಿ ಜನಿಸಿದ ಬಸವಣ್ಣ.

ದೇವರು ಬೇರೆ ಎಲ್ಲಿಯೂ ಇಲ್ಲ ಻ವನು ನಮ್ಮೊಳಗೆ ಇದ್ದಾನೆ ಎಂಬ ಬಸವಣ್ಣ ನಂಬಿದ್ದರು. ಸುಳ್ಳು ಹೇಳುವರು, ಕೊಲೆ ಸುಲಿಗೆ, ಪ್ರಾಣಿ ಬಲಿ, ಹಿಂಸೆ ಬಸವಣ್ಣನವರಿಗೆ ಯಾವುದು ಇಷ್ಟವಾಗುತ್ತೊರಲಿಲ್ಲ. ಬಸವಣ್ಣನವರಿಗೆ ಕ್ರಾಂತಿಯೋಗಿ ಬಸವಣ್ಣ, ಮಹಾಮಾನತಾವಾದಿ ಎಂಬ ಹೆಸರುಗಳೂ ಕೂಡಿವೆ. ಸಮಾನತೆ, ಕಾಯಕ, ತತ್ವಗಳನ್ನು ಆಚರಿಸುವ ಮತ್ತು ಪಾಲಿಸುವ ಯಾರು ಬೇಕಾದರೂ ಶಿವರಣರಾಗಬುದು ಅನ್ನೋದು ಬಸವಣ್ನನವರ ದೃಷ್ಟಿಕೋನವಾಗಿತ್ತು.

ಇಂತಹ ಮಾಹಾನ್ ನೇತರರಾದ ಬಸವಣ್ಣನವರು ಲಿಂಗಾಯತ ಧರ್ಮದ ಸಂಸ್ಥಾಪಕ ಹಾಗೂ ಧರ್ಮಪಿತರು. ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕರಿಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣವಾದರು, ಬಸವಣ್ನನವರನ್ನು ಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ, ಭಕ್ತಿ ಭಂಡಾರಿ ಬಸವಣ್ಣ, ಮಹಾ ಮಾನವತಾವಾದಿ ಎಂದೂ ಕರೆಯಲಾಗುತ್ತದೆ. ಮಾನವಿಯತೆ, ಕಾಯಕ, ನಿಷ್ಠೆ ಧರ್ಮದ ಬುನಾದಿಯಾಗಬೇಕು ಎಂದು ಬಲವಾದ ನಂಬಿಕ್ಕೆಯಾಗಬೇಕು ಎಂಬುವುದು ಬಸವಣ್ಣನವರ ಮಾತು.

ಈ ವರ್ಷ ದೇಶದಾದ್ಯಂತ ಸರಳ ರೀತಿಯಲ್ಲಿ ಬಸವ ಜಯಂತಿಯನ್ನು ಆಚರಣೆ ಮಾಡಲಾಗಿದೆ. ಕೊರೋನಾ ವೈರಸ್ ಹಿನ್ನೆಲೆ ಎಲ್ಲೂ ತಮ್ಮ ತಮ್ಮ ಮನೆಗಳೇ ಬವಸಣ್ನ ಭಾವ ಚಿತ್ರಕ್ಕೆ ಪೂಜೆ ಸಲ್ಲಿ ಜಯಂತಿಯನ್ನು ಆಚರಣೆ ಮಾಡಿದ್ದಾರೆ. ಸರಕಾರಿ ಕಚೇರಿಗಳಲ್ಲಿ ಸಹ ಅತಿ ಸರಳ ರೀತಿಯಲ್ಲಿ ಅಚರಿಸಲಾಗಿದೆ.

ಪುರಸಭೆ ಕಾರ್ಯಾಲಯದಲ್ಲಿ ಬಸವಜಯಂತಿ ಆಚರಣೆ

ಮುಗಳಖೋಡ: ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಶ್ರೀ ಬಸವೇಶ್ವರರ 887ನೇ ಜಯಂತಿಯನ್ನು ಸಾಮಾಜಿಕ ಅಂತರದೊAದಿಗೆ ಸರಳವಾಗಿ ಆಚರಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಜಿ.ಬಿ.ಡಂಬಳ ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಕೆಂಪಣ್ಣಾ ಮುಶಿ, ಮಹಾವೀರ ಕುರಾಡೆ, ರಮೇಶ ಖೇತಗೌಡರ, ಮುತ್ತಪ್ಪ ಬಾಳೋಜಿ, ಸದಾಶಿವ ಭಜಂತ್ರಿ, ಎಸ.ಎಸ್.ಕೋಠೆ, ಯಮನಪ್ಪ ದೇವಣ್ಣವರ ಕೆಂಚಪ್ಪ ಹಳಿಂಗಳಿ, ಮುತ್ತು ಎರಡತ್ತಿ, ಸೈಸಾಬ ನಧಾಪ, ಅನೀಲ ದಳವಾಯಿ, ಮಹಾದೇವ ಶೇಗುಣಸಿ ಮುಂತಾದವರು ಇದ್ದರು.

ಒಂದು ಜಾತಿ, ಒಂದು ಧರ್ಮಕ್ಕೆ ಅಂಟಿಕೊಂಡವರಲ್ಲ ಬಸವಣ್ಣವರು : ಪಿಕೆಪಿಎಸ್ ಮಾಜಿ ಅಧ್ಯಕ್ಷ ರಾಮಪ್ಪ ಪೂಜಾರಿ

ಅರಟಾಳ ;ಒಂದು ಜಾತಿ, ಒಂದು ಧರ್ಮಕ್ಕೆ ಅಂಟಿಕೊಂಡವರಲ್ಲ ಬಸವಣ್ಣವರು. ಅವರ ತತ್ವವನ್ನು ಯಾರು ಅಳವಡಿಕೊಳ್ಳತ್ತಿವಿ ಅವರು ಮಾನವ ಧರ್ಮರಾಗುತ್ತಾರೆ ಎಂದು ಪಿಕೆಪಿಎಸ್ ಮಾಜಿ ಅಧ್ಯಕ್ಷ ರಾಮಪ್ಪ ಪೂಜಾರಿ ಹೇಳಿದರು.
ಅವರು ರವಿವಾರದಂದು ಗ್ರಾಮದ ಶ್ರೀ ಬಸವೇಶ್ವರ ಸರ್ಕಲ್‌ದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವಣ್ಣನವರು ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಮುಕ್ತಿ ಹೊಂದುತ್ತದೆ. ಧರ್ಮ ಒಂದೆ ಅದು ಮಾನವಧರ್ಮ, ನಾವೆಲ್ಲರು ಒಂದೆ ಎಂಬ ತತ್ವವನ್ನು ಜಾರಿಗೆ ತಂದವರು ಬಸವಣ್ನನವರು. ಅವರ ವಚನಗಳನ್ನು ಕೇಳಿದರೆ ಸಾಕು ಬದುಕು ಸುಖಮಯವಾಗುತ್ತದೆ. ಶ್ರೇಷ್ಟವಾದ ಮಾನವಧರ್ಮವೊಂದನ್ನು ತಂದು ಸರ್ವರಲ್ಲೂ ಸಮತಾಭಾವ, ಸಾಮರಸ್ಯಬದುಕಿಗೆ ಮಾರ್ಗ ತೊರಿಸಿದವರು ಬಸವಣ್ಣವರು ಎಂದು ಹೇಳಿದರು.
ಬಸವೇಶ್ವರ ಸರ್ಕಲ್‌ದಲ್ಲಿ ಬಸವಣ್ಣನವರ ಭಾವಚಿತ್ರದ ಪೂಜೆಯನ್ನು ಕರೆಪ್ಪ ಹಿರೇಕುರಬರ ನೇರವೆರಿಸಿದರು. ತಾಪಂ ಸದಸ್ಯ ಶಿವಪ್ಪ ಹಟ್ಟಿ ಜ್ಯೋತಿ ಹಂಚುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಗ್ರಾಪಂ ಕಾರ್ಯಾಲಯದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಪಿಕೆಪಿಎಸ್ ಕಾರ್ಯದರ್ಶಿ ಪರಮಾನಂದ ಖ್ಯಾಡಿ ಪೂಜೆ ಸಲ್ಲಿಸಿದರು. ಗ್ರಾಪಂ ಪಿಡಿಓ ಎ. ಜಿ. ಎಡಕೆ, ಕಾರ್ಯದರ್ಶಿ ಜಿತೇಂದ್ರ ಗಡಾದೆ, ರಂಗು ಜಂಬಗಿ, ಎಮ್. ಪಿ. ಪಾಟೀಲ, ಅಶೋಕ ಆನಗೊಂಡಿ, ರಮೇಶ ಜಾಧವ, ಶ್ರೀಶೈಲ ಪೂಜಾರಿ, ಮಾಳಪ್ಪ ಕಾಂಬಳೆ, ಕಲ್ಲಪ್ಪ ಪಾಟೀಲ, ವಾಸನಗೌಡ ಜಂಬಗಿ, ಇದ್ದರು. ಕಾರ್ಯಕ್ರಮವನ್ನು ಚನ್ನಬಸು ಬಿರಾದಾರ ನಿರೂಪಿಸಿ ವಂದಿಸಿದರು.

ಬಸವೇಶ್ವರರ ಹಾಗೂ ಶಿವಾಜಿ ಮಹಾರಾಜರ ಜಯಂತಿಯನ್ನು ಸರಳ ರೀತಿಯಲ್ಲಿ ಆಚರಣೆ

ರಾಯಬಾಗ : ಪಟ್ಟಣದ ಮಿನಿವಿಧಾನ ಸೌಧದಲ್ಲಿ ರವಿವಾರ ಬಸವೇಶ್ವರರ ಹಾಗೂ ಶಿವಾಜಿ ಮಹಾರಾಜರ ಜಯಂತಿ ಉತ್ಸವವನ್ನು ಆಚರಿಸಲಾಯಿತು. ತಹಶೀಲ್ದಾರ ಚಂದ್ರಕಾಂತ ಭಜಂತ್ರಿ ಅವರು ಬಸವೇಶ್ವರರ ಹಾಗೂ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು

ರಾಯಬಾಗ :ಕಡುಬಡವರಿಗೆ ಹಾಗೂ ವಿಧವಾ ಹೆಣ್ಣುಮಕ್ಕಳಿಗೆ ಆಹಾರ ಸಾಮಾಗ್ರಿಗಳ ಕೀಟ್‌ ವಿತರಣೆ

ರಾಯಬಾಗ : ಕೊರೋನಾದಿಂದ ಲಾಕಡೌನ್ ಹಿನ್ನಲೆಯಲ್ಲಿ ಪಟ್ಟಣದಲ್ಲಿರುವ ಅತೀ ತೊಂದರೆಗಿಡಾದ ಕಡುಬಡವರಿಗೆ ಹಾಗೂ ವಿಧವಾ ಹೆಣ್ಣುಮಕ್ಕಳಿಗೆ ಉದ್ಯಮಿ ಹಾಗೂ ಸಮಾಜ ಸೇವಕ ಸದಾಶಿವ ದೇಶಿಂಗೆ ಅವರು ರಾಯಣ್ಣಾ ಗೋ-ಗ್ರೀನ್ ಫೌಂಡೇಶನದ ವತಿಯಿಂದ ಜೀವನಾವಶ್ಯಕ ಆಹಾರ ಸಾಮಾಗ್ರಿಗಳ ಕೀಟ್‌ಗಳನ್ನು ವಿತರಿಸಿ ಮಾನವಿಯತೆ ಮೆರೆದರು.
ಕೀಟ್‌ಗಳನ್ನು ವಿತರಿಸಿ ಉದ್ಯಮಿ ಸದಾಶಿವ ದೇಶಿಂಗೆ ಅವರು ಮಾತನಾಡಿ ಕೊರೋನಾ ಪರಿಣಾಮದಿಂದ ನಮ್ಮ ಫಾಲ್ಟಿç ಉದ್ಯಮದಲ್ಲಿ ಸುಮಾರು ನಾಲ್ಕು ಕೋಟಿ ರೂಪಾಯಿಗಳಷ್ಟು ನಷ್ಟ ಸಂಭAವಿಸಿದೆ, ಆದರೆ ರಾಯಬಾಗ ಪಟ್ಟಣದಲ್ಲಿರುವ ಕೆಲವರು ಬಡ ಮತ್ತು ವಿಧವೆ ಹೆಣ್ಣುಮಕ್ಕಳು ಲಾಕ್‌ಡೌನ್‌ದಿಂದ ಒಂದು ಹೊತ್ತು ಊಟಕ್ಕೂ ಕೂಡಾ ತೊಂದರೆಯಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು ಈ ಹಿನ್ನಲೆಯಲ್ಲಿ ನಾವು ಅವರ ಒಂದು ನೋವಿಗೆ ಸ್ಪಂಧಿಸಿ ಅವರಿಗೆ ಜೀವನಾವಶ್ಯಕ ವಸ್ತುಗಗಳ ಆಹಾರ ಸಾಮಗ್ರಿಗಳ ಕೀಟ್‌ಗಳನ್ನು ವಿತರಿಸಿ ಅವರಿಗೆ ಆತ್ಮ ಸ್ಥೆರ್ಯ ತುಂಬಿದ್ದೇವೆAದು ಹೇಳಿದರು.
ಈ ಸಂದರ್ಭದಲ್ಲಿ ಉದ್ಯಮಿ ಸದಾಶಿವ ದೇಶಿಂಗೆ, ನ್ಯಾಯವಾಧಿಗಳಾದ ಪ್ರಶಾಂತ ಒಡೆಯರ, ಡಿ.ಬಿ.ಪೂಜಾರಿ, ಆರ್.ಎಸ್.ಬುಗಡಿಕಟ್ಟಿ, ಅಪ್ಪಾಸಾಬ ಘೇನಾನಿ, ಧರೇಪ್ಪ ಘೇನಾನೀ ಸೇರಿದಂತೆ ಅನೇಕರು ಇದ್ದರು.

ಉಚಿತ ಮಾಸ್ಕಗಳನ್ನು ವಿತರಣೆ : ಮಾಜಿ ಶಾಸಕ ಸಿ ಎಸ್ ನಾಡಗೌಡ

ಮುದ್ದೇಬಿಹಾಳ: ಪಟ್ಟಣದ ತಾಲೂಕಾ ಸರಕಾರಿ ಆಸ್ಪತ್ರೆಗೆ ಮಾಜಿ ಶಾಸಕ ಸಿ ಎಸ್ ನಾಡಗೌಡ ಅವರು ಶವಿವಾರ ಬೇಟಿ ನೀಡಿ ಆಸ್ಪತ್ರೆಯ ಸಿಬ್ಬಂದಿಗಳೊಂದಿಗೆ ಮತ್ತು ತಾಲೂಕಾ ಆರೋಗ್ಯಾಧಿಕಾರಿ ಡಾ, ಸತೀಶ ತಿವಾರಿ ಅವರೊಂದಿಗೆ ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ಏನೆಲ್ಲ ತೊಂದರೆಗಳಿವೆ ಮತ್ತು ಹೇಗೆಲ್ಲ ಕಟ್ಟೆಚ್ಚರ ವಹಿಸಲಾಗಿದೆ ಎಂಬುದನ್ನು ಮಾಹಿತಿ ಸಂಗ್ರಿಸಿದರು.
ವೇಳೆ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೊರೊನಾ ವಾರಿಯರ್ಸಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ, ತಾಲೂಕಾ ವೈದ್ಯಾಧಿಕಾರಿಗಳಿಗೆ, ವೈದ್ಯಕಿಯ ಸಿಬ್ಭಂದಿಗಳಿಗೆ, ಪೋಲಿಸ್ ಇಲಾಖೆಯ ಸಿಬ್ಭಂದಿಗಳಿಗೆ ಮಾಸ್ಕಗಳನ್ನು ವಿತರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊರೊನಾ ಇದೋಂದು ಸಾಂಕ್ರಾಮಿಕ ವೈರಾಣುವಾಗಿದ್ದು ಇಲ್ಲಿಯತನಕವೂ ಈ ವೈರಾಣುವಿಗೆ ಚುಚ್ಚುಮದ್ದಾಗಲಿ ಅಥವಾ ಔಷಧಿಯಾಗಿ ಕಂಡು ಹಿಡಿಯವಲ್ಲಿ ಸಾಧ್ಯವಾಗಿಲ್ಲ.
ಇದು ಇಷ್ಠೆ ದಿನಕ್ಕೆ ಈ ಕೊರೊನಾ ಅಟ್ಟಹಾಸ ನಿಲ್ಲುತ್ತದೆ ಎಂಬುದನ್ನು ಹೇಳುವುದು ಕಷ್ಟಸಾಧ್ಯ ಹಾಗಾಗಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ನಿಯಂತ್ರಣಗೊಳಿಸುವಲ್ಲಿ ಪ್ರತಿಯೊಬ್ಬರ ಅಗತ್ಯ ಕರ್ತವ್ಯವಾಗಿದೆ ಎಂದರು.
ಈ ವೇಳೆ ಹೇಮರಡ್ಡಿ ಮಲ್ಲಮ್ಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್ ಜಿ ಪಾಟೀಲ(ಶೃಂಗಾರಗೌಡ)ಎಪಿಎAಸಿ ಅಧ್ಯಕ್ಷ ಗುರು ತಾರನಾಳ, ಎಪಿಎಂಸಿ ಉಪಾಧ್ಯಕ್ಷ ಹಣಮಂತ ನಾಯಕಮಕ್ಕಳ, ಗೋಪಿ ಮಡಿವಾಳರ, ಕಾಮರಾಜ ಬಿರಾದಾರ, ತಾಲೂಕಾ ಕಾಂಗ್ರೇಸ್ ಯೂಥ್ ಅಧ್ಯಕ್ಷ ಮಹಮ್ಮದರಫೀಕ ಶಿರೋಳ, ಪಿಂಟು ಸಾಲಿಮನಿ, ರಾಮು ಲಮಾಣಿ, ಕಾರ್ತಿಕ ನಾಡಗೌಡ, ಪುರಸಭೆ ಸದಸ್ಯರಾದ ಮೈಬೂಬ ಗೊಳಸಂಗಿ, ರೀಯಾಜ ಢವಳಗಿ, ಯಲ್ಲಪ್ಪ ನಾಯಕಮಕ್ಕಳ, ಸಮಿರ ದ್ರಾಕ್ಷೀ,ಸೇರಿದಂತೆ ಮತ್ತಿತರರು ಇದ್ದರು.

ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಮಾಡಿಸದ ಕಾರ್ಮಿಕರಿಗೆ ಗತಿ ಯಾರು ?

ಸುಮಾರು ಕೂಲಿಗಳಿಗೆ ಕಾರ್ಮಿಕ ನೊಂದಾಯಿತ ಕಾರ್ಡ ಇಲ್ಲಾ, ಈ ಸಮಯದಲ್ಲಿ ಇಂತಹವರ ನೆರವಿಗೆ ಬರುವದೇ ಸರಕಾರ.
ಸ್ಟೋರಿ: ಮಕಬುಲ್ ಅ ಬನ್ನೇಟ್ಟಿ.
ಕನ್ನಡ ಟುಡೇ ವಿಶೇಷ.

ಮುದ್ದೇಬಿಹಾಳ: ದೇಶದಲ್ಲೇಡೆ ಕೊರೊನಾ ಮಹಾಮಾರಿ ವೈರಸ್ ನಿಂದ ಜನರು ದಿಕ್ಕಾಪಾಲಾಗಿದ್ದು, ಕೊರೊನಾ ವೈರಸ್ ನಿಂದ ಸಾಯುವರಿಗಿಂತ ಹಸಿವಿನಿಂದ ಸಾಯುವ ಹಂತಕ್ಕೆ ನಮ್ಮ ಸ್ಥೀತಿ ಬಂದು ನಿಂತಿದೆ. ದೇಶದ ಯಾವದೇ ವ್ಯವಹಾರಿಕಾ ಕ್ಷೇತ್ರದ ಮಟ್ಟ ಕೊರೊನಾ ವೈರ್ ನಿಂದ ಹದಗೆಟ್ಟು ಹೊಗಿದೆ. ದಿನನಿತ್ಯ ದುಡಿದು ತಿನ್ನುವರ ಬದುಕು ಬರವಣೆಗೆಯಲ್ಲಿ ಬರಿಯಲು ಸಾದ್ಯವಿಲ್ಲಾ ಎಂಬುವದು ಸರಕಾರ ಮನಗಾಣ ಬೇಕಿದೆ. ಅಂದೇ ದುಡಿದು ಅಂದೇ ತಿನ್ನುವ ಬಡ ಕೂಲಿ ಕಾರ್ಮಿಕರ ಜೀವನ ಹಳಸಿದ ಅನ್ನಕಿಂತ ಕಡೆಯಾಗಿದೆ ಎಂದು ಪ್ರಗತಿಪರರು ಅಂದಾಜಿಸುತ್ತಿದ್ದಾರೆ.
ಹೌದು ಕೊರೊನಾ ಅಟ್ಟಹಾಸ ದಿನದಿಂದ ದಿನಕ್ಕೆ ತನ್ನ ಬಾಹುಳ್ಯವನ್ನು ವ್ಯಾಪಿಸುತ್ತಿದೆ, ಇಂದು ಇಲ್ಲಾ ಅನ್ನುವ ಹಾಗೆ ಇಲ್ಲಾ, ನಾಳೆ ಮತ್ತೇಷ್ಟು ಕೊರೊನಾ ಪತ್ತೇಯಾಗುತ್ತವೆಯೋ ಎಂದು ವೈದ್ಯರು ಲೆಕ್ಕಾ ಹಾಕುತ್ತಿದ್ದರೆ, ಇತ್ತ ಸರಕಾರ ಹಣಿ ಹಣಿ ಬಡಿದುಕೊಳ್ಳುವ ಅಂತಕ್ಕೆ ಬಂದು ನಿಂತಿದೆ. ದೇಶವೆ ಲಾಕ್ಡೌನ್ ಆಗಿರುವದರಿಂದ ಜನರ ಲೇಕ್ಕಾಚಾರ ಕುಸಿದು ಹೊಗಿದೆ.
ನಮ್ಮ ಸುತ್ತಮುತ್ತಲೂ ಇಂದೇ ದುಡಿದು ಜೀವನ ನೆಡಸುವ ಅನೇಕ ಕಾರ್ಮಿಕರು ಇದ್ದಾರೆ, ಅದರಲ್ಲಿ ಅನೇಕರು ಸರಕಾರಿಂದ ಕುರುತಿನ ಕಾರ್ಡ ಮಾಡಿಸಿಕೊಂಡಿದ್ದಾರೆ, ಇನ್ನು ದಿನನಿತ್ಯ ದುಡಿಯುವ ಕೂಲಿಗಳಿಗೆ ಕಾರ್ಮಿಕ ಕಾರ್ಡ ಮಾಡಿಸಿಕೊಂಡಿಲ್ಲಾ, ಇವರನ್ನು ಹುಡುಕಿ ಗುರುತ್ತಿನ ಕಾಡ್ ಮಾಡಿಕೊಡುವ ಗೋಜಿಗೆ ಯಾವತ್ತು ಕಾರ್ಮಿಕ ಇಲಾಖೆ ಹೋಗಿಲ್ಲಾ.
ಆದರೆ ಇಂದು ಸರಕಾರದಿಂದ ನೊಂದಾಯಿತರಾಗಿರುವ ಹಲವು ಕಾರ್ಮಿಕರು ತಮ್ಮ ಗುರುತಿನ ಕಾರ್ಡಗಳನ್ನು ಪುನರ್ ನೊಂದಾವಣಿ ಮಾಡಿಸರದ ಪರಿಣಾಮ ನೊಂದಾಯಿಸಿದ ಕಾರ್ಮಿಕರ ಕಾರ್ಡೆ ರದ್ದಾಗಿ ಹೊಗಿವೆ. ಇದರಿಂದ ಕಾರ್ಮಿಕರಿಗೆ ಬಹಳಷ್ಟು ತೊಂದರೆಯಾಗಿದ್ದು, ಇದನ್ನು ಸರಕಾರ ಮನಗಂಡು ಕಾರ್ಮಿಕ ಕಾರ್ಡ ಇರದವರಿಗೂ ಕಾರ್ಮಿಕ ಇಲಾಖೆಯಿಂದ ., ನೀಡುವಂತ ಅನುದಾನವನ್ನು ನೀಡಬೇಕಾಗಿದೆ.
ಸರಕಾರವೇನೋ ನೊಂದಾವಣಿಯಾದ ಕಾರ್ಮಿಕರ ಪಾಸ್ಬುಕ್ ಗೆ ಲಾಕ್ಡೌನ್ ನಿಂದ ಬದುಕಲು ತೊಂದರೆಯಾಗಬಾರದು ಎಂದು 2000 ಸಾವಿರ ಕಾರ್ಮಿಕ ಅನುದಾನದಡಿಯಲ್ಲಿ ನೀಡುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಸರಕಾರದ ಇಲಾಖೆಯಲ್ಲಿ ಕಾರ್ಮಿಕ ಎಂದು ನೊಂದಣಿಯಾಗದೆ ಇರುವ ಲಕ್ಷಾಂತರ ಕಾರ್ಮಿಕರು ಬೀದಿಯಲ್ಲಿ ಬಿದ್ದಿದ್ದಾರೆ, ಅವರ ಗೋಳು ಕೇಳುವರು ಯಾರು ? ಇದೇ ರೀತಿಯಲ್ಲಿ ಲಾಕ್ಡೌನ್ ಮುಂದುವರೇದರೆ ಅವರ ಜೀವನುಪಾಯಕ್ಕೆ ಸರಕಾರ ಏನು ಕೊಡುಗೆ ನೀಡುತ್ತದೆ ಎಂದು ಅವರು ಚಿಂತೆಯಲ್ಲಿ ಬದುಕು ನಡೆಸುತ್ತಿದ್ದಾರೆ. ಇಂತ ಕೆಳ ಮಟ್ಟದ ಕಾರ್ಮಿಕರ ಬದುಕಿನ ಬಂಡಿಗೆ ಸರಕಾರ ಆಸರೆಯಾಗಲೆಬೇಕಿದೆ.
ಇಗಾಗಲೆ ಲಾಕ್ಡೌನ್ ತಿಂಗಳೆ ಮುಗಿಯುತ್ತಲೇ ಬರುತ್ತಿದೆ, ಆದರೆ ಕೊರೊನಾ ವೈರಸ್ ಮುಗಿಯುವ ಲಕ್ಷಣಗಳು ಕಾಣುತ್ತಲ್ಲಾ, ಶ್ರೀಮಂತರು ಅದೇ ಹೇಗೋ ಬದುಕು ನಡೆಸುತ್ತಾರೆ, ಸ್ಲಂ ನಿವಾಸಿಗಳು , ಕಾರ್ಮಿಕರು, ಸಣ್ಣಪುಟ್ಟ ವ್ಯವಹಾರವನ್ನು ಮಾಡಿಕೊಂಡು ಬದುಕು ನಡೆಸುವರು ಬದುಕು ಇಗಾ ತಂತಿಯ ಮೇಲೆ ನಡೆಯುತ್ತಿದೆ. ದುಡಿಯಲು ಕೆಲಸವಿಲ್ಲ, ತಿನ್ನಲು ಸರಿಯಾದ ರೀತಿಯಲ್ಲಿ ಅನ್ನದ ವ್ಯವಸ್ಥೇಯಿಲ್ಲಾ, ಜನರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.
ಸರಕಾರವೇನೋ ಉಚಿತವಾಗಿ ಪಡಿತರ ರೇಷನ್ ಕೊಡುತ್ತಿದೆ, ಅದರ ಜೋತೆ ಬದುಕು ನಡೆಸಲು ಇನ್ನೂ ಅನೇಕ ಜೀವನಾಂಶ ಬೇಕಾಗುತ್ತದೆ. ಅದನ್ನೇಲ್ಲಾ ದುಡಿಮೆ ಇಲ್ಲದೆ ಎಲ್ಲಿಂದ ತರಬೇಕು ಎಂದು ಕೂಲಿ ಕಾರ್ಮಿಕರು ಚಿಂತೆಗೀಡಾಗಿದ್ದಾರೆ. ಒಟ್ಟಿನಲ್ಲಿ ದಿನನಿತ್ಯ ದುಡಿದು ತಿನ್ನುವ ವರ್ಗಕ್ಕೆ ಈ ಕೊರೊನಾ ವೈರಸ್ ನಿಂದ ಬಾರಿ ತೊಂದರೆಯಾಗಿದ್ದು, ಸರಕಾರ ಇನ್ನಷ್ಟು ಹೇಚ್ಚಿನ ಅನುದಾನ ಆಯಾ ತಾಲೂಕುಗಳಿಗೆ ನೀಡಿ ಸ್ಥಳೀಯ ಮಟ್ಟದ ಅಧಿಕಾರಿಗಳು ಜನರ ಸಂಕಷ್ಟಕ್ಕೆ ಆಸರೆಯಾಗಬೇಕಿದೆ. ಒಂದು ವೇಳೆ ಸರಕಾರ ಸಾಮಾನ್ಯ ಜನರ ರಕ್ಷಣೆಗೆ ನಿಲ್ಲದೆ ಹೋದರೆ, ಕೊರೊನಾ ವೈರಸ್‌ನಿಂದ ಸಾವು ನೊವುಗಳಿಗಿಂತ ಹಸೀವಿನಿಂದ ಆಗುವ ಲಕ್ಷಣಗಳು ಬಹಳ ಇದ್ದಾವೆ ಎಂದು ಪ್ರಗತಿಪರ , ಸಮಾಜ ಚಿಂತಕರು ಆರೋಪ ಮಾಡುತ್ತೀದ್ದಾರೆ.
ಸರಕಾರ ಕೊರೊನಾ ವೈರಸ್ ನ್ನು ನಿರ್ಮೂಲನೆ ಮಾಡುವ ನೀಟ್ಟಿನಲ್ಲಿ ಸುಮಾರು ಒಂದು ತಾಲೂಕಿಗೆ ಇಂತಿಷ್ಟು ಲಕ್ಷ ಅನುದಾನವನ್ನು ಬಿಡುಗೆಡ ಮಾಡಿದೆಯಂತೆ, ಆದರೆ ಇದರಲ್ಲೂ ಅಧಿಕಾರಿಗಳೂ ಮತ್ತು ಜನಪ್ರತಿನಿಧಿಗಳು ಗೋಲ್ಮಾಲ್ ಮಾಡಿ ಸರಕಾರದ ಅನುದಾನವನ್ನು ಬಳಸಿಕೊಳ್ಳುತ್ತಿದ್ದಾರೆನ್ನುವ ಆರೋಪ ಕೇಳಿ ಬರುತ್ತಿದೆ. ಈ ಆರೋಪ ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವದು ಮುಂದಿನ ದಿನಮಾನಗಳಲ್ಲಿ ಜನಸಾಮಾನ್ಯರಿಗೆ ತಿಳಿಯಲಿದೆ.
ಬಾಕ್ಸ್ ನ್ಯೂಸ್ : ದಿನನಿತ್ಯ ದುಡಿದು ಜೀವನ ನಡೆಸುವರ ಬದುಕು ಬಹಳ ಚಿಂತಾಜನಕವಾಗಿದೆ, ಸರಕಾರ ಕೊರೊನಾ ವೈರಸನ್ನು ನಿರ್ಮೂಲನೆ ಮಾಡಲು ನೀಡಿರುವ ಅನುದಾನ ಸಮರ್ಪಕವಾಗಿ ಬಳಸಿಕೊಂಡು, ಜನಸಾಮಾನ್ಯರಿಗೆ ಬದುಕಲು ಅನೂಕೂಲ ಮಾಡಿಕೊಡಬೇಕಿದೆ ಎಂದು ದಲಿತಪರ ಹೋರಾಟಗಾರ ಎಮ್ ಸಿ ಪೂಜಾರಿ ಹೇಳಿದರು.

ಕೆ.ಎಮ್.ಎಫ್ ರಾಜ್ಯಾಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಪ್ರತಿ ಕುಟುಂಬಗಳಿಗೂ ದಿನ ಬಳಕೆ ವಸ್ತುಗಳನ್ನು ನೀಡುತ್ತಿರುವದು ಶ್ಲಾಘನೀಯವಾಗಿದೆ : ಘಟಪ್ರಭಾ ಶುರ‍ಗ್ಸ್ ಉಪಾಧ್ಯಕ್ಷ ರಾಮಣ್ಣ ಮಹಾರಡ್ಡಿ

ಮೂಡಲಗಿ: ಕ್ಷೇತ್ರದ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಹಾರ ದಿನಸಿ ವಸ್ತುಗಳ ಕಿಟ್ ಕೊಟ್ಟಿರುವದು ವಿಶೇಷವಾಗಿದೆ. ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿಯೇ ಹಾಗೂ ರಾಜ್ಯದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತಹ ಕಾರ್ಯವಾದ ಪ್ರತಿ ಕುಟುಂಬಗಳಿಗೂ ದಿನ ಬಳಕೆ ವಸ್ತುಗಳನ್ನು ನೀಡುತ್ತಿರುವದು ಶ್ಲಾಘನೀಯವಾಗಿದೆ ಎಂದು ಘಟಪ್ರಭಾ ಶುರ‍ಗ್ಸ್ ಉಪಾಧ್ಯಕ್ಷ ರಾಮಣ್ಣ ಮಹಾರಡ್ಡಿ ಹೇಳಿದರು.
ಅವರು ರವಿವಾರ ಸಮೀಪದ ಕಳ್ಳಿಗುದ್ದಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕೆ.ಎಮ್.ಎಫ್ ರಾಜ್ಯಾಧ್ಯಕ್ಷ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರಿಂದ ಕೊಡಲ್ಪಟ್ಟ ದಿನಸಿ ದಿನಬಳಕೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊರೋನಾ ವೈರಸ್‌ದಿಂದಾಗಿ ಪ್ರಪಂಚದ ತುಂಬ ಜನರು ಆತಂಕದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಕ್ಷೇತ್ರದ ಜನತೆಗೆ ಆಹಾರದ ಸಮಸ್ಯೆಯಾಗಬಾರದೆಂದು ಬಾಲಚಂದ್ರ ಜಾರಕಿಹೊಳಿಯವರು ಪ್ರತಿ ಕುಟುಂಬಕ್ಕೂ ದಿನಸಿ ದಿನ ಬಳಕೆ ವಸ್ತು ನೀಡುತ್ತಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನೀತಿ ನಿಯಮಾವಳಿಗಳನ್ನು ಪಾಲಿಸುವದರ ಮೂಲಕ ಕೊರೋನಾ ಮಹಾಮಾರಿಯನ್ನು ಹಿಮ್ಮೆಟ್ಟಿಸಲು ಸಹಾಯ ಸಹಕಾರ ನೀಡಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಮಾಜಿ ಪಿಎಲ್‌ಡಿ ಬ್ಯಾಂಕ ನಿರ್ಧೇಶಕ ಅಡಿವೆಪ್ಪ ಅಳಗೋಡಿ, ಡಿ.ಡಿ ದೇಸಾಯಿ, ಆರ್ ಎಸ್ ಗುತ್ತಿಗೂಳಿ, ಲಕ್ಷ್ಮಣ ಸಂಕ್ರಿ, ಕೃಷ್ಣಾ ಮಳಲಿ, ಹನಮಂತ ಮಾವಿನಗಿಡದ, ಬಾಳಪ್ಪ ದಳವಾಯಿ, ಗೋಪಾಲ ಹರಿಜನ, ಲಕ್ಷ್ಮಣ ಚನ್ನಾಳ, ಬಿ.ಎಸ್ ಅಳಗೋಡಿ, ಮಲ್ಲಯ್ಯ ಹಿರೇಮಠ, ಗ್ರಾ.ಪಂ ಉಪಾಧ್ಯಕ್ಷ ವೆಂಕಟ ಮಹಾರಡ್ಡಿ, ಸದಸ್ಯರಾದ ಫಕೀರವ್ವ ಅಳಗೋಡಿ, ಕರೆಪ್ಪ ಅಳಗೋಡಿ, ಎನ್‌ಎಸ್‌ಎಫ್ ಅತಿಥಿ ಗೃಹದ ನಿಂಗಪ್ಪ ಕುರಬೇಟ, ಅಂಗನವಾಡಿ ಕಾರ್ಯಕರ್ತೆಯರಾದ ಮಂಜುಳಾ ಮಳಲಿ, ಲಕ್ಷ್ಮೀಬಾಯಿ ಸರವನ್ನವರ, ಆಶಾ ಕಾರ್ಯಕರ್ತೆ ಸುಮಿತ್ರಾ ಹರಿಜನ ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ:ಕೆ.ವಾಯ್ ಮೀಶಿ

ಹಗಲಿರುಳು ಶ್ರಮಿಸುತ್ತಿರುವ ಆರೋಗ್ಯ, ಪೊಲೀಸ್, ಪಂಚಾಯತ ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿಯ ಕಾರ್ಯ ನೀಜಕ್ಕೂ ಪ್ರಶಂಸಾರ್ಯವಾಗಿದೆ :ಡಾ.ರಾಜೇಂದ್ರ ಸಣ್ಣಕ್ಕಿ

ಮೂಡಲಗಿ: ಮಹಾಮಾರಿ ಕರೋನಾ ವೈರಸ್ ವಿರುದ್ದ ಜನ ಸಾಮಾನ್ಯರಿಗೆ ಅಪಾಯದ ಕುರಿತು ಅಪಾಯಕಾರಿ ಪರಿಸ್ಥಿತಿಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಆರೋಗ್ಯ, ಪೊಲೀಸ್, ಪಂಚಾಯತ ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿಯ ಕಾರ್ಯ ನೀಜಕ್ಕೂ ಪ್ರಶಂಸಾರ್ಯವಾಗಿದೆ ಎಂದು ದಾರವಾಡ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನ ಮಂಡಳಿ ಸದಸ್ಯ ಮಾಜಿ ಜಿ.ಪಂ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಅವರು ಮೂಡಲಗಿ ತಾಲೂಕಿನ ಎಲ್ಲ ಆಶಾ ಕಾರ್ಯಕರ್ತೆಯರಿಗೆ, ಆರೋಗ್ಯ ಸಿಬ್ಬಂದಿಯವರಿಗೆ ತಾಲೂಕಾ ಆರೋಗ್ಯ ಇಲಾಖೆ ಪ್ರತಿನಿಧಿಗಳ ಕ್ಯಾಪ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿಪ್ರಾಯ ವ್ಯಕ್ತ ಪಡಿಸಿದರು. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಬಿಸಿಲಿನ ತಾಪಮಾನದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯವರಿಗೆ ನೀಡುತ್ತಿರುವದು ಒಳ್ಳೇಯ ಕಾರ್ಯವಾಗಿದೆ. ಪ್ರತಿಯೊಬ್ಬರ ಮನೆಗಳಿಗೆ ಖುದ್ದಾಗಿ ಭೇಟಿ ನೀಡುವ ಮೂಲಕ ಜನತೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಆರೋಗ್ಯ ಇಲಾಖೆಯ ಪ್ರತಿನಿಧಿಗಳ ಕಾರ್ಯವು ಕೂಡಾ ಮೆಚ್ಚುವಂತಹದು. ಪ್ರಪಂಚದಾದ್ಯಂತ ಹರಡಿರುವ ಕೊರೋನಾ ವೈರಸ್ ಮನುಷ್ಯರನ್ನು ಬೆಂಬಿಡದೆ ಕಾಡುತ್ತಿದೆ. ಇಂತಹ ಮಹಾಮಾರಿಯಿಂದ ಪಾರಾಗಲು ಕೇಂದ್ರ ಹಾಗೂ ರಾಜ್ಯ ಸರಕಾರದ ನಿಯಮಾವಳಿಗಳು ಹಾಗೂ ಸ್ಥಳೀಯವಾಗಿರುವ ಆರೋಗ್ಯ ಇಲಾಖೆಯ ಸಿಬ್ಬಂದಿಯ ಮಾರ್ಗದರ್ಶನಗಳನ್ನು ಅತ್ಯಾವಶ್ಯಕವಾಗಿ ಪಾಲಿಸ ಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕಾ ವೈದ್ಯಾಧಿಕಾರಿ ಡಾ. ಆರ್.ಆರ್ ಅಂಟಿನ್, ಬಿಇಒ ಎ.ಸಿ ಮನ್ನಿಕೇರಿ, ಶಾಸಕರ ಆಪ್ತಸಹಾಯಕ ನಾಗಪ್ಪ ಶೇಖರಗೋಳ, ತಾಲೂಕಾ ನೌಕರ ಸಂಘದ ಅಧ್ಯಕ್ಷ ಆನಂದ ಹಂಜ್ಯಾಗೋಳ, ಉಪಜಿಲ್ಲಾ ಆರೋಗ್ಯಾಧಿಕಾರಿ ಶಿವಾಜಿ ಮಾಳಗೆಣ್ಣವರ, ರಾಜ್ಯ ಪರೀಷತ್ ಸದಸ್ಯ ಬಸನಗೌಡ ಈಶ್ವರಪ್ಪಗೋಳ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆರ್.ಜಿ ಬಸ್ಸಾಪೂರ, ನೌಕರ ಘಟಕದ ನಿರ್ಧೇಶಕರಾದ ಶಿವಲಿಂಗ ಪಾಟೀಲ, ರಾಮಚಂದ್ರ ಸಣ್ಣಕ್ಕಿ, ಎಸ್.ಎಲ್ ಜಾಗನೂರ, ಆರ್.ಟಿ ಸೋನವಾಲಕರ, ಪಾರ್ಮಸಿ ಅಧಿಕಾರಿ ಎಚ್ ಎಮ್ ನಿಡೋಣಿ, ಆರೋಗ್ಯ ಮಿತ್ರ ಇರ್ಶಾದ್ ಫೀರಜಾದೆ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.
ವರದಿ: ಕೆ.ವಾಯ್ ಮೀಶಿ

ಶ್ರೀ ಮಂಜುನಾಥ ವಿವಿದೋದ್ಧೇಶಗಳ ಸಹಕಾರಿ ಸಂಘದಿಂದ ಬಡ ಪತ್ರಿಕಾ ವಿತರಕರಿಗೆ ಆಹಾರ ಧಾನ್ಯಗಳ ಕಿಟ್‌ ವಿತರಣೆ

ವರದಿ:ಕೆ.ವಾಯ್ ಮೀಶಿ
ಮೂಡಲಗಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಇಲ್ಲಿಯ ಶ್ರೀ ಮಂಜುನಾಥ ವಿವಿದೋದ್ಧೇಶಗಳ ಸಹಕಾರಿ ಸಂಘದವರು ದಿನಪತ್ರಿಕೆಗಳನ್ನು ಸುರಕ್ಷಿತವಾಗಿ ಹಂಚುವ ಬಡ ಪತ್ರಿಕಾ ವಿತರಕರಿಗೆ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಿಸಿ ಮಾನವೀಯತೆಯನ್ನು ಬಿಂಬಿಸಿದ್ದಾರೆ.
ಸ್ಥಳೀಯ ಪಿಎಸ್‌ಐ ಮಲ್ಲಿಕಾರ್ಜುನ ಸಿಂಧೂರ ಸಂಘದ ಪರವಾಗಿ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು ‘ಸುದ್ದಿ ಪತ್ರಿಕೆಗಳನ್ನು ನಸುಕಿನಲ್ಲಿ ಮನೆಗಳಿಗೆ ಮುಟ್ಟಿಸುವ ಪತ್ರಿಕೆ ವಿತರಿಸುವವ ಕೆಲಸವು ಅನನ್ಯವಾಗಿದೆ. ಅವರನ್ನು ಗುರುತಿಸಿ ಆಹಾರ ಧಾನ್ಯಗಳ ಕಿಟ್‌ಗಳನ್ನು ನೀಡುವ ಮಂಜುನಾಥ ಸಂಸ್ಥೆಯ ಕಾರ್ಯವು ಶ್ಲಾಘನೀಯವಾಗಿದೆ’ ಎಂದರು.
ಬಾಲಶೇಖರ ಬಂದಿ ಮಾತನಾಡಿ ದಿನಪತ್ರಿಕೆಗಳನ್ನು ಹಂಚುವ ಹುಡುಗರು ಕಡು ಬಡವರಾಗಿದ್ದು, ಲಾಕ್‌ಡೌನ್ ಕಷ್ಟದ ಸಂದರ್ಭದಲ್ಲಿ ಮಂಜುನಾಥ ಸಂಸ್ಥೆಯವರು ಸಹಾಯ ಮಾಡುತ್ತಿರುವುದು ಉತ್ತಮ ಕೆಲಸವಾಗಿದೆ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರಶಾಂತ ನಿಡಗುಂದಿ ಮಾತನಾಡಿ ಕೊರೊನಾ ಹೊರಾಟ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಸಂಸ್ಥೆಯು ಸದಾ ಸಿದ್ಧವಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ಸಂಗಪ್ಪ ನಿಡಗುಂದಿ, ಉಪಾಧ್ಯಕ್ಷ ರುದ್ರಪ್ಪ ಬಳಿಗಾರ, ನಿರ್ದೇಶಕ ಶಿವಬಸು ಸುಣಧೋಳಿ, ಹನಮಂತ ಸನದಿ, ಶಿವಬೋಧ ಉದಗುಟ್ಟಿ, ಪಾಂಡು ಮಹೇಂದ್ರಕರ, ಲಕ್ಷ್ಮೀ ಶಿವಾಪುರ, ಶೈಲಾಜಿ ನಾರಾಯಣಕರ, ಕಾರ್ಯದರ್ಶಿ ಬಸವರಾಜ ಕುದರಿ ಇದ್ದರು.
ರೂ. ೫೦೦ ಮೌಲ್ಯದ ದಿನಸಿ ಕಿಟ್‌ಗಳನ್ನು ೨೫ ಪತ್ರಿಕಾ ವಿತರಕರಿಗೆ ಹಂಚಿದರು

WhatsApp
Follow by Email