ಬ್ರೇಕಿಂಗ್ ನ್ಯೂಸ್ 50 ಸಾವಿರ ಬಡ ಕುಟುಂಬಗಳಿಗೆ ಆಹಾರ ಧಾನ್ಯ ವಿತರಣೆ ಮಾಡಿದ ಡಿಸಿಎಂ ಲಕ್ಷ್ಮಣ ಸವದಿ 29/04/202029/04/2020 admin ಅಥಣಿ: ಕೋರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಅಥಣಿ ಪಟ್ಟಣದ ಬಡ ಜನರ ಸಹಾಯಕ್ಕೆ ಮುಂದಾದ ಡಿಸಿಎಂ ಲಕ್ಷ್ಮಣ ಸವದಿ. ಅಥಣಿ ಪಟ್ಟಣದಲ್ಲಿ ಸತ್ಯ ಸಂಗಮ ಗ್ರಾಮ ವಿಕಾಸ್ ಪ್ರತಿಷ್ಠಾನ ಅಥಣಿ ಸಂಘಟನೆಯ ವತಿಯಿಂದ 50 ಸಾವಿರ ಬಡ ಕುಟುಂಬಗಳಿಗೆ ತಲಾ 5 ಕೆಜಿ ಜೋಳ, 5 ಕೆಜಿ ಗೋಧಿ ಪ್ಯಾಕೇಟಗಳನ್ನು ವಿತರಣೆ ಮಾಡುತ್ತಿರುವದು ಶ್ಲಾಘನೀಯ ಸಂಗತಿಯಾಗಿದೆ.ಪಟ್ಟಣದ ಸಂಸ್ಕೃತಿ ಪ್ಲಾಟ್ ಭಾಗದ ನೂರಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಮಂಗಳವಾರ ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಸುಮೀತ ಸವದಿ ಅವರು ಆಹಾರ ಧಾನ್ಯದ ಕಿಟ್ ಗಳನ್ನು ವಿತರಣೆ ಮಾಡಿದರು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡು ಧಾನ್ಯಗಳನ್ನು ವಿತರಣೆ ಮಾಡಲಾಯಿತು.ಈ ವೇಳೆ ವಿಶ್ವನಾಥ ತೆಲಸಂಗ, ವಿಶಾಲ ಸಗರಿ, ಸಂತೋಷ ಸಾವಡಕರ, ಶಿವಕುಮಾರ ಅಪರಾಜ್, ಅಕ್ಷಯ ಬುರ್ಲಿ, ಪ್ರಸನ್ನ ಸಗರಿ, ಸಂತೋಷ ಪವಾರ ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು Share