ಬ್ರೇಕಿಂಗ್ ನ್ಯೂಸ್ ಅಕ್ರಮ ಮರಳು ತಹಶೀಲ್ದಾರ್ ಮತ್ತು ಚಾಲಕನ ಹತ್ಯೆಗೆ ಯತ್ನಿಸಿದ ನಾಲ್ವರ ಬಂಧನ 02/05/202002/05/20201 min read admin ಅಥಣಿ: ತಹಶೀಲ್ದಾರ್ ದುಂಡಪ್ಪ ಕೋಮಾರ್ ಹಾಗೂ ಅವರ ವಾಹನ ಚಾಲಕ ಅನಿಲ್ ಮಲ್ಲಪ್ಪ ಗಸ್ತಿ, ಇವರ ಮೇಲೆ ಟ್ಯಾಕ್ಟರ್ ಹಾಯಿಸಿ ಹತ್ಯೆಗೆ ಯತ್ನಿಸಿ ಪರಾರಿಯಾಗಿದ್ದ ಅಕ್ರಮ ಮರಳು ದಂಧೆಕೋರನ್ನು ಬಂಧಿಸುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ ಆರೋಪಿಗಳನ್ನು ಗುರುವಾರ ತಡ ರಾತ್ರಿ ಅಥಣಿ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಅಥಣಿ ತಾಲೂಕಿನ ಶಿರೂರ -ಖಿಳೆಗಾಂವ ಮಧ್ಯದಲ್ಲಿರುವ ಹಳ್ಳದಲ್ಲಿ ಅಕ್ರಮ ಮರಳು ಗಣಿಗಾರಿಕೆಯ ಧಂದೆ ಮಾಡುತ್ತಿದ್ದಾರೆಂದು ಖಚಿತ ಮಾಹಿತಿ ಮೇರೆಗೆ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ್ ಹಾಗೂ ಅವರ ಚಾಲಕ ಅನಿಲ್ ಮಲ್ಲಪ್ಪ ಗಸ್ತಿ ಹಾಗೂ ಸಿಬ್ಬಂದಿ ಆರ್.ವಿ. ಖಲಾಟೆ ಅವರೊಂದಿಗೆ ದಾಳಿ ಮಾಡಿದಾಗ ತಹಶೀಲ್ದಾರ್ ಮತ್ತು ಅವರ ಸಿಬ್ಬಂದಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಒತ್ತಾಯಪೂರ್ವಕವಾಗಿ ಟ್ರ್ಯಾಕ್ಟರನ್ನು ತೆಗೆದುಕೊಂಡು ಹೊರಟಾಗ ಟ್ರಾಕ್ಟರ್ಗೆ ಅಡ್ಡಗಟ್ಟಿದ ತಹಶೀಲ್ದಾರ್ ವಾಹನ ಚಾಲಕ ಅನಿಲ್ ಮಲ್ಲಪ್ಪ ಗಸ್ತಿ ಇವರ ಮೇಲೆ ಟ್ರಾಕ್ಟರ್ ಹಾಯಿಸಿ ಕೊಲೆ ಮಾಡಲು ಪ್ರಯತ್ನಿಸಿದ ಬಗ್ಗೆ ಅಥಣಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ : 139/2020 ಕಲಂ 353, 307, ಐಪಿಸಿ ಮತ್ತು 3 ಪ್ರಿವೆನ್ಯೆನ್ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟಿ ಆಕ್ಟ್ ರಡಿಯಲ್ಲಿ ದಿನಾಂಕ: 27-04-2020 ರಂದು ಪ್ರಕರಣ ದಾಖಲಾಗಿರುತ್ತದೆ. ಪ್ರಕರಣದಲ್ಲಿ ಭಾಗಿಯಾದ ಬಂಧಿತ ಆರೋಪಿತರಾದ 1) ಸಾಗರ್ @ ಮಾರುತಿ ತಂದೆ ಶ್ರೀರಂಗ ಕೋಳಿ 2) ಗಣಪತಿ ಚನ್ನಪ್ಪ ಮಾನೆ 3) ನಾರಾಯಣ ಬಾಪು ಹೊನಮೋರೆ 4) ಪ್ರಕಾಶ ಲಕ್ಷಣ ಹೊನಮೋರೆ, ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು ಬಂಧಿತರೆಲ್ಲರೂ ಅಥಣಿ ತಾಲೂಕಿನ ಶಿರೂರ ಗ್ರಾಮದವರಾಗಿದ್ದಾರೆ ಸದರಿ ಬಂದಿತರು ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದರಿAದ ಸದರಿ ಯವರನ್ನು ಬಂಧಿಸಲು, ಶಂಕರಗೌಡ ಬಸನಗೌಡರ ಸಿಪಿಐ ಅಥಣಿ ಹಾಗೂ ಅವರ ಸಿಬ್ಬಂದಿಗಳಾದ ಎಮ್, ಬಿ, ದೊಡ್ಡಮನಿ, ಜಿ, ಎನ್, ಇಂಚಲ, ಎ, ಎ, ಈರಕರ, ಬಿ, ಜೆ, ತಳವಾರ, ಎಸ್, ಜಿ, ಮನ್ನಾಪುರ,, ರವರನ್ನೂಳಗೊಂಡ ಒಂದು ತಂಡವನ್ನು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ರಚಿಸಿದ್ದರು, ಬೆಳಗಾವಿ ಜಿಲ್ಲಾ ಹೆಚ್ಚುವರಿ ಎಸ್, ಪಿ, ಅಮರನಾಥ ರೆಡ್ಡಿ, ಮತ್ತು ಅಥಣಿ ಡಿವೈಎಸ್ಪಿ, ಎಸ್, ವ್ಹಿ, ಗಿರೀಶ, ರವರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ Share