ಬ್ರೇಕಿಂಗ್ ನ್ಯೂಸ್ ಸರಕಾರ ಮದ್ಯ ಮಾರಾಟಕ್ಕೆ ಅಸ್ತು, ಮಧ್ಯ ಪ್ರಿಯರಿಗೆ ಹರುಷ, 02/05/202002/05/20201 min read admin ಬೆಳಗಾವಿ: ಕೋವಿಡ್ -19 ನಿಧಾನವಾಗಿ ಸರಿದುಕೊಳ್ಳುತ್ತಿರುವ ಬೆನ್ನಲ್ಲೇ ಸರಕಾರ ಮದ್ಯ ಮಾರಾಟಕ್ಕೆ ಅಸ್ತು ಎಂದಿದೆ. ಕಂಟೈನ್ಮೆಂಟ್ ಜೋನ್ ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿಲ್ಲ. ಆದರೆ, ಮದ್ಯ ಮಾರಾಟ ಹಾಗೂ ಮದ್ಯ ಖರೀದಿ ಮಾಡಬೇಕಾದರೆ ಕೆಲ ನಿಯಮ ಪಾಲನೆ ಮಾಡಬೇಕಾಗಿರುವುದರನ್ನು ಸರಕಾರ ಸೂಚಿಸಿದೆ.ಈ ಬಗ್ಗೆ ಅಬಕಾರಿ ಆಯುಕ್ತರು ನೀಡಿದ ಸೂಚನೆಯ ಸಾರಾಂಶ ಹೀಗಿದೆ. ಕರ್ನಾಟಕ ರಾಜ್ಯ ಕರ್ನಾಟಕ ಅಬಕಾರಿ ಕಾಯ್ದೆ , 1965 ರ ಕಲಂ 21 ( 1 ) ಮತ್ತು 3 ( 2 ) ರಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಕೇವಲ ಮದ್ಯ ಮಾರಾಟ ಸನ್ನದುಗಳಾದ ಸಿಎಲ್ – 2 ಮತ್ತು ಸಿಎಲ್ 11 – ಸಿ [ ಎಂ . ಎಸ್ . ಐ . ಎಲ್ ಮದ್ಯ ಮಳಿಗೆಗಳು ] ಗಳನ್ನು ತೆರೆದು ಮದ್ಯ ಮಾರಾಟ ಮಾಡಲು ಹಾಗೂ ಕೆ . ಎಸ್ . ಬಿ . ಸಿ . ಎಲ್ ಡಿಪೋಗಳು ದಿನಾಂಕ : 04 . 05 . 2020 ರಿಂದ ಕಾರ್ಯ ನಿರ್ವಹಿಸಲು ಈ ಕೆಳಕಂಡ ಷರತ್ತುಗಳನ್ನು ವಿಧಿಸಿ ಆದೇಶಿಸಿದ್ದಾರೆ.ಮುಂದುವರೆದು ಈ ಅವಧಿಯಲ್ಲಿ ಆದೇಶದಲ್ಲಿ ತಿಳಿಸಲಾದ ಮಾರಾಟ ಸನ್ನದುಗಳನ್ನು ಹೊರತುಪಡಿಸಿ ಇತರೆ ಯಾವುದೇ ಸನ್ನದುಗಳು ಕಾರ್ಯನಿರ್ವಹಿಸುವಂತಿಲ್ಲ . ಷರತ್ತುಗಳು 1 . ಕೇಂದ್ರ ಸರ್ಕಾರ / ರಾಜ್ಯ ಸರ್ಕಾರ / ಜಿಲ್ಲಾಡಳಿತ / ಸ್ಥಳೀಯ ಸಂಸ್ಥೆಗಳು ಘೋಷಿಸಿರುವ Containment Zones ಗಳಲ್ಲಿ ಯಾವುದೇ ಮದ್ಯ ಮಾರಾಟ ಸನ್ನದುಗಳು ಕಾರ್ಯನಿರ್ವಹಿಸುವಂತಿಲ್ಲ . 2 . ಕೇಂದ್ರ ಸರ್ಕಾರ / ರಾಜ್ಯ ಸರ್ಕಾರ / ಜಿಲ್ಲಾಡಳಿತ / ಸ್ಥಳೀಯ ಸಂಸ್ಥೆಗಳು ಘೋಷಿಸಿರುವ Containment Zones ಹೊರತುಪಡಿಸಿ ಇನ್ನುಳಿದ ಸ್ಥಳಗಳಲ್ಲಿ ಮಾತ್ರವೇ ಸಿಎಲ್ – 2 ಮತ್ತು ಸಿಎಲ್ 11 – ಸಿ [ ಎಂ . ಎಸ್ . ಐ . ಎಲ್ ಮದ್ಯ ಮಳಿಗೆಗಳು ] ಗಳನ್ನು ತೆರೆದು ಮದ್ಯ ಮಾರಾಟ ಮಾಡಲು ಹಾಗೂ ಕೆ . ಎಸ್ . ಬಿ . ಸಿ . ಎಲ್ ಡಿಪೋಗಳು ಮಾತ್ರ ಕಾರ್ಯನಿರ್ವಹಿಸಲು ಅನುಮತಿಸಿದೆ . 3 . ಹೀಗೆ ಕಾರ್ಯನಿರ್ವಹಿಸುವ ಸನ್ನದುಗಳು ಆದೇಶಿತ ಅವಧಿಯಲ್ಲಿ ಬೆಳಗ್ಗೆ 9 . 00 ಗಂಟೆಯಿಂದ ಸಂಜೆ 7 . 00 ಗಂಟೆಯವರೆಗೆ ಮಾತ್ರವೇ ಕಾರ್ಯನಿರ್ವಹಿಸುವುದು .4 . ಉಲ್ಲೇಖಿತ 2ರ ಆದೇಶದಲ್ಲಿ ತಿಳಿಸಲಾದಂತೆ ಸನ್ನದು ಮಳಿಗೆಯಲ್ಲಿ ಕೇವಲ 5 ಜನರು ಮಾತ್ರ ಗ್ರಾಹಕರು ಇರುವಂತೆಯು ಹಾಗೂ ಅವರುಗಳು ಸಾಮಾಜಿಕ ಅಂತರವಾದ 6 ಅಡಿಗಳಿಗೆ ಕಡಿಮೆ ಇಲ್ಲದಂತೆ ಕಾಪಾಡಿಕೊಳ್ಳುವುದು . 5 . ಮದ್ಯ ಮಾರಾಟ ಮಾಡುವ ಸನ್ನದಿನಲ್ಲನ ನೌಕರರು ಹಾಗೂ ಮದ್ಯ ಖರೀದಿಗೆ ಬರುವ ಗ್ರಾಹಕರು Mask ಗಳನ್ನು ಹಾಕಿಕೊಳ್ಳುವುದನ್ನು ಕಡ್ಡಾಯಪಡಿಸಿಕೊಂಡು ಸನ್ನದು ಸ್ಥಳದಲ್ಲಿ ಸ್ಯಾನಿಟೈಸರ್‌ಗಳ ಬಳಸುವುದು . 6 . ಕೇವಲ Stand alone ಸಿಎಲ್ – 2 ಹಾಗೂ ಪಿಎಲ್ 11 – ಸಿ ಸನ್ನದುಗಳನ್ನು ನ್ನು ಮಾತ್ರವೇ ಕಾರ್ಯನಿರ್ವಹಿಸುವುದು , ಮಾಲ್‌ಗಳು ಹಾಗೂ ಸೂಪರ್ ಮಾರ್ಕೆಟ್‌ಗಳಲ್ಲಿ ಸ ಈ ಅನುಮತಿ ಅನ್ವಯವಾಗುವುದಿಲ್ಲ . ಮೇಲೆ ತಿಳಿಸಲಾದ ಷರತ್ತುಗಳೊಂದಿಗೆ ಕರ್ನಾಟಕ ಅಬಕಾರಿ ಕಾಯ್ದೆ ಹಾಗೂ ಅನ್ವಯಿಸುವ ತತ್ಸಂಬಂಧ ನಿಯಮಗಳನ್ನೂ ಕೂಡ ಪಾಲಿಸುವುದು . ಈ ಆದೇಶವನ್ನು ಅಬಕಾರಿ ಉಪ ಆಯುಕ್ತರುಗಳು ಪರಿಪೂರ್ಣವಾಗಿ ಜಾರಿ ಮಾಡುವುದು . ಆದೇಶ ಉಲ್ಲಂಘಿಸುವ ಸನ್ನದುಗಳನ್ನು ಅಮಾನತ್ತು / ರದ್ದುಪಡಿಸಲು ಕ್ರಮ ಜರುಗಿಸುವುದು . Share