ದುಡಿಯಲು ತೆರಳಿದ್ದ ಕೂಲಿಕಾರ್ಮಿಕರು ತಾಲೂಕಿಗೆ ವಾಪಸ್ಸ್

ದುಡಿಯಲು ತೆರಳಿದ್ದ ಕೂಲಿಕಾರ್ಮಿಕರು ತಾಲೂಕಿಗೆ ವಾಪಸ್ಸ್

ಅರಟಾಳ ; ಸಮೀಪದ ಬಾಡಗಿ ಗ್ರಾಮದ 21 ಜನರು ಧಾರವಾಡ ಜಿಲ್ಲೆಯ ಇಟ್ನಂಗಿ ಬಟ್ಟಿಯಲ್ಲಿ ದುಡಿಯಲು ತೆರಳಿದ್ದ ಕೂಲಿಕಾರ್ಮಿಕರು ತಾಲೂಕಿಗೆ ವಾಪಸ್ಸಾಗಿದ್ದು, ಅವರ ಆರೋಗ್ಯ ತಪಾಸನೇ ಮಾಡಿ, ಕೈಗಳಿಗೆ ಸೀಲ್ ಹಾಕಿ ಹೋಂ ಕ್ವಾರಂಟೈನ್‌ಗೆ ಸೂಚಿಸಿ ಶನಿವಾರದಂದು ಬಾಡಗಿ ಗ್ರಾಮಕ್ಕೆ ಅವರನ್ನು ಅಧಿಕಾರಿಗಳ ತಂಡ ತಂದು ಬಿಡಲಾಯಿತ್ತು.
ಲಾಕ್ ಡೌನ್ ಆಗಿರುವುದರಿಂದ ಗ್ರಾಮಕ್ಕೆ ಬರಲಾಗದೆ ಬಾಡಗಿ ಗ್ರಾಮದ 21 ಜನರು ಧಾರವಾಡದ ಇಟ್ನಂಗಿ ಬಟ್ಟಿಯಲ್ಲಿ ಉಳಿದುಕೊಂಡಿದರು. ಸರ್ಕಾರ ಬೇರೆಡೆ ಗ್ರಾಮಗಳಲ್ಲಿ ದುಡಿಯುವ ಕಾರ್ಮಿಕರು ತಮ್ಮ ಸ್ಥಳಕ್ಕೆ ತೆರಳುವಂತೆ ಸೂಚಿಸಿದಾಗ. ಸರ್ಕಾರಿ ಅಧಿಕಾರಿಗಳ ಸಹಕಾರದೊಂದಿಗೆ ಬಸ್ಸು ಮಾಡಿಕೊಂಡು ಬಾಡಗಿ ಗ್ರಾಮಕ್ಕೆ ಅವರೆಲ್ಲರನ್ನು ಅಧಿಕಾರಿಗಳ ತಂಡ ತಂದು ಬಿಡಲಾಯಿತ್ತು. ಎಲ್ಲರ ಆರೋಗ್ಯ ತಪಾಸನೆ ಮಾಡಲಾಯಿತ್ತು. ಎಲ್ಲರು ಆರೋಗ್ಯವಾಗಿ ಇದ್ದಾರೆ. ಆದರೆ ನಿಯಮಾನುಸಾರ ಎಲ್ಲರಿಗೂ ಹೋಂ ಕ್ವಾರಂಟೈನ್ ಸೀಲ್ ಹಾಕಿ 14 ದಿನಗಳ ಕಾಲ ಎಲ್ಲರು ಮನೆಯಲ್ಲಿ ಇರಬೇಕು. ಕಡ್ಡಾಯವಾಗಿ ಎಲ್ಲರು ಕ್ವಾರಂಟೈನ್ ಪಾಲಿಸಬೇಕು. ಜನರಿಂದ ಅಂತರ ಕಾಯ್ದುಕೊಳ್ಳಬೇಕು. ಎಲ್ಲರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮನೆ ಬಿಟ್ಟು ಹೋರಗಡೆ ತಿರುಗಾಡಬಾರದು. ಕ್ವಾರಂಟೈನ್‌ನಲ್ಲಿರುವ ಎಲ್ಲರಿಗೂ ಇದು ಅನ್ವಯವಾಗುತ್ತದೆ ಎಂದು ಅಧಿಕಾರಿಗಳು ಸೂಚನೆ ನೀಡಿ ಶನಿವಾರದಂದು ಬಾಡಗಿ ಗ್ರಾಮಕ್ಕೆ ಅವರನ್ನು ಬಿಟ್ಟಹೋದರು.
ಪಿಡಿಒ ಎ. ಜಿ. ಎಡಕೆ, ಗ್ರಾಮ ಲೇಖಾಧಿಕಾರಿ ಎಮ್. ಎಮ್. ಮಲ್ಲಖಾನ, ಆರೋಗ್ಯ ಇಲಾಖೆ ರೇಣುಕಾ ಗಾಣಿಗ, ಪೋಲಿಸ್ ಸಿಬ್ಬಂದಿ ಎಸ್. ಎಸ್. ಶಶಿಕುಮಾರ, ಆಶಾ ಕಾರ್ಯಕರ್ತೆ ಅಮೃತಾ ಡಂಗಿ, ರೇಣುಕಾ ಇಳಗಾರ ಇದ್ದರು
Share
WhatsApp
Follow by Email