ಅಥಣಿ ಬಡ ಕುಟುಂಬಗಳಿಗೆ ನೆರವಿಗೆ ಧಾವಿಸಿದ ಶಾಸಕ  ಮಹೇಶ ಕುಮಟಳ್ಳಿ

ಅಥಣಿ ಬಡ ಕುಟುಂಬಗಳಿಗೆ ನೆರವಿಗೆ ಧಾವಿಸಿದ ಶಾಸಕ ಮಹೇಶ ಕುಮಟಳ್ಳಿ

ಅಥಣಿ : ದೇಶಾದ್ಯಂತ ಲಾಕ್ ಡೌನ ಮುಂದುವರೆದಿದ್ದು ಇಂದು ಅಥಣಿ ಪಟ್ಟಣದ ಗವಿಸಿದ್ದನ ಮಡ್ಡಿಯಲ್ಲಿ ಜನಪ್ರಿಯ ಶಾಸಕರಾದ ಮಹೇಶ್ ಕುಮಠಳ್ಳಿ ನೇತೃತ್ವದಲ್ಲಿ ಅವರ ಅಭಿಮಾನಿ ಬಳಗದ ವತಿಯಿಂದ  ನೂರಾರು ಬಡ ಕುಟುಂಬಗಳಿಗೆ ಉಚಿತವಾಗಿ ಜೀವನಾವಶ್ಯಕ ದಿನಸಿ ಕಿಟ್ ವಿತರಣೆ ಮಾಡಲಾಯಿತು. 
ಗೋಧಿ ಸಕ್ಕರೆ ಚಹಾಪುಡಿ ಸಾಬೂನು  ಬಿಸ್ಕಿಟ್ ಅಡುಗೆ ಎಣ್ಣೆ ಸೇರಿದಂತೆ ಇನ್ನಿತರ ದಿನಸಿ ಸಾಮಗ್ರಿಗಳು  ಕಿಟ್ ಗಳನ್ನು ಬಡವರಿಗೆ ಉಚಿತವಾಗಿ ಹಂಚಲಾಯಿತು.
 ಈ ವೇಳೆ ಮಹೇಶ ಕುಮಟಳ್ಳಿ ಅಭಿಮಾನಿಗಳ ಬಳಗ ಅನೀಲ ಭಜಂತ್ರಿ ಮಾತನಾಡಿ ರಾಜ್ಯಾದ್ಯಂತ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದುಡಿಯುವ ವರ್ಗದ ಜನರು ಮತ್ತು ಬಡವರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಒಂದು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಆದ್ದರಿಂದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರ ಆದೇಶದ ಮೇರೆಗೆ ತಾಲೂಕಿನಾದ್ಯಂತ ಇಲ್ಲಿವರೆಗೆ  ಸುಮಾರು 15,000 ಬಡ ಮತ್ತು ಅರ್ಹ ಕುಟುಂಬಗಳಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ  ಜನಪರ ಕೆಲಸಕ್ಕೆ ಮುಂದಾಗಿದ್ದು ಇಂದು ಅಥಣಿ ಪಟ್ಟಣದ ಗವಿ ಸಿದ್ದನ ಮಡ್ಡಿಯಲ್ಲಿ ಜೀವನಾವಶ್ಯಕ ದಿನಸಿ ಸಾಮಗ್ರಿಗಳನ್ನು ವಿತರಣೆ ಮಾಡಿದ್ದೇವೆ  ಎಂದರು,
ಈ ಸಂದರ್ಭದಲ್ಲಿ ಸತ್ಯಪ್ಪ ಪೂಜಾರಿ ಮಾತನಾಡಿ
ತಾಲೂಕಿನಲ್ಲಿ ಸಂಕಷ್ಟದ ಕಾಲದಲ್ಲಿ ಜನರೊಂದಿಗೆ ನಾವು ಇದ್ದೇವೆ ಎಂದು ನೈತಿಕವಾಗಿ ಧೈರ್ಯ ತುಂಬುವ ಕೆಲಸ ಡಿಸಿಎಂ ಲಕ್ಷ್ಮಣ ಸವದಿ ಮತ್ತು ಶಾಸಕ ಮಹೇಶ ಕುಮಟಳ್ಳಿ ಕೂಡಿಕೊಂಡು ಮಾಡುತ್ತಿದ್ದು ಯಾವುದೇ ಕಾರಣಕ್ಕೂ ತಾಲೂಕಿನ ಜನರು ಹೆದರಬೇಕಾಗಿಲ್ಲ ಲಾಕ್ ಡೌನ್ ನಿಂದ ಯಾವುದೇ ಸಮಸ್ಯೆ ಎದುರಾಗಿಲ್ಲ ಹಸಿವಿನಿಂದ ಯಾರು ಆತ್ಮಹತ್ಯೆ ಮಾಡಿಕೊಂಡಿಲ್ಲ  ಎಲ್ಲ ವರ್ಗದ ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜೀವನಾವಶ್ಯಕ ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ ಯಾವುದೇ ಸುಳ್ಳು ಸುದ್ದಿ ವದಂತಿಗಳಿಗೆ ಕಿವಿಗೊಡದೆ ಧೈರ್ಯವಾಗಿರಬೇಕೆಂದು ಹೇಳಿದರು  .
ಈ ವೇಳೆ ಮಹೇಶ ಕುಮಟಳ್ಳಿ ಅಭಿಮಾನಿ ಬಳಗ ವತಿಯಿಂದ, ಗುರು ಆಜೂರ, ವಿನಯ್ ಪಾಟೀಲ, ಸಿದ್ದು ಹಂಡಗಿ, ದತ್ತಾ ಚವ್ಹಾಣ, ಸಂತೋಷ ಕ್ಷೀರಸಾಗರ, ಹಣಮಂತ ಬಜಂತ್ರಿ, ರಾಜ ಸಾಗಾಂವಕರ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು
Share
WhatsApp
Follow by Email