ಸರಕಾರ ಪತ್ರಕರ್ತರನ್ನು ನಿರ್ಲಕ್ಷಿಸಿದೆ – ಲಕ್ಕಣ್ಣ ಸವಸುದ್ದಿ

ಸರಕಾರ ಪತ್ರಕರ್ತರನ್ನು ನಿರ್ಲಕ್ಷಿಸಿದೆ – ಲಕ್ಕಣ್ಣ ಸವಸುದ್ದಿ

ಮೂಡಲಗಿ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊರೋನಾ ಹತ್ತಿಕ್ಕುವ ಕರ್ತವ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪತ್ರಕರ್ತರಿಗೆ ಯಾವುದೆ ಸಹಾಯ,ಸೌಲಭ್ಯಗಳನ್ನು ಕೊಡದೆ ನಿರ್ಲಕ್ಷ ಮಾಡುತ್ತಿವೆ ಎಂದು ಕಾಂಗ್ರೆಸ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಲಕ್ಕಣ್ಣ ಸವಸುದ್ದಿ ಹೇಳಿದರು.
ಬುಧವಾರ ಸಾಯಂಕಾಲ ಸ್ಥಳೀಯ ಶ್ರೀ ವೀರಭದ್ರೇಶ್ವರ ದೇವಾಲಯದ ಆವರಣದಲ್ಲಿ ತಾಲೂಕಾ ಪತ್ರಕರ್ತರ ಬಳಗಕ್ಕೆ ಆಹಾರ ಧಾನ್ಯಗಳ ಕಿಟ್,ಮಾಸ್ಕ,ಕೈ ಗವಸಗಳನ್ನು ವಿತರಿಸಿ ಮಾತನಾಡಿ,ಸಂವಿಧಾನದ 4ನೇ ಅಂಗವಾದ ಪತ್ರಿಕಾ ರಂಗವು ಸರಕಾರ ಮತ್ತು ಜನತೆಯ ನಡುವಿನ ಸೇತುವೆಯಾಗಿ ಕೆಲಸ ಮಾಡುತ್ತಿದೆ ಆದರೆ ಸರಕಾರ ಮತ್ತು ಅಧಿಕಾರಿಗಳು ಹಾಗೂ ಆಡಳಿತ ಪಕ್ಷ ಪತ್ರಕರ್ತರನ್ನು ತಮ್ಮ ಪ್ರಚಾರಕ್ಕಾಗಿ ಮಾತ್ರ ಬಳಸಿಕೊಳ್ಳುತ್ತಿವೆ ಆದರೆ ಪತ್ರಕರ್ತರ ಅನಾನುಕೂಲತೆ ಮತ್ತು ತೊಂದರೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ತರಾಟೆಗೆ ತಗೆದುಕೊಂಡರು.
ಕೊರೋನಾ ಹತ್ತಿಕ್ಕುವ ವಾರಿಯರ್ಸಗಳಾದ ಪೋಲಿಸ,ಅರೋಗ್ಯ,ಪೌರಸೇವಾ,ಕಂದಾಯ ಸಿಬ್ಬಂದಿಗಳು ಸರಕಾರಿ ನೌಕರರಾಗಿದ್ದು ಅವರಿಗೆ ಸಾಕಷ್ಟು ಸಂಬಳ,ಬತ್ಯೆ ಇರುತ್ತದೆ.ಇದೆ ರೀತಿ ಅಂಗನವಾಡಿ,ಆಶಾ ಕಾರ್ಯಕರ್ತೆಯರಿಗೆ ಸರಕಾರವು 30ಲಕ್ಷ ಜೀವ ವಿಮಾ ಭದ್ರತೆ ಒದಗಿಸಿದೆ ಆದರೆ ಹಗಲಿರುಳು ಜೀವದ ಹಂಗು ತೊರೆದು ಸುದ್ದಿಗಳನ್ನು ಜನತೆಗೆ ತಲುಪಿಸುವ ಕಾರ್ಯದಲ್ಲಿ ನಿರತರಾದ ಪತ್ರಕರ್ತರಿಗೆ ಸರಕಾರವು ಯಾವುದೆ ಭದ್ರತೆ ಒದಗಿಸದೆ ನಿರ್ಲಕ್ಷಿಸುತ್ತಿದೆ ಎಂದು ಹೇಳಿ ಪತ್ರಕರ್ತರಿಗೆ ಸರಕಾರವು ಮಾಡುತ್ತಿರುವ ಅನ್ಯಾಯಗಳನ್ನು ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆ.ಪಿ.ಸಿ.ಸಿ.ಅದ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೆ ವರದಿ ಸಲ್ಲಿಸಿ ಪತ್ರಕರ್ತರ ಜೀವನಕ್ಕೆ ಭದ್ರತೆ ಮತ್ತು ಸಹಾಯ,ಸೌಲಭ್ಯ ಒದಗಿಸಲು ಪ್ರಯತ್ನಿಸುವುದಾಗಿ ಹೇಳಿ,ನನ್ನಿಂದ ಇನ್ನೂ ಏನಾದರೂ ಹೆಚ್ಚಿನ ಸಹಾಯ ಸಹಕಾರ ಬೇಕಾದಲ್ಲಿ ನಿಸಂಕೋಚವಾಗಿ ಕೇಳಿ ಪಡೆದುಕೊಳ್ಳಬೇಕೆಂದು ಭರವಸೆ ನೀಡಿದರು.
ಕಾಂಗ್ರೆಸ ಮುಖಂಡ ಬಿ.ಬಿ.ಹಂದಿಗುAದ ಮಾತನಾಡಿ,ಕೊರೋನಾ ಲಾಕ್ ಡೌನ್ ಸಮಯದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ವಿವರಿಸಿ ಸರಕಾರ ಪತ್ರಕರ್ತರ ಬಗ್ಗೆ ಕಾಳಜಿ ವಹಿಸಲಿ ಎಂದರು.ಇನ್ನೊರ್ವ ಮುಖಂಡ ಎಸ್.ಆರ್.ಸೋನವಾಲ್ಕರ ಮಾತನಾಡಿ,ಪತ್ರಕರ್ತರ ಸೇವೆ ಗುರುತಿಸಿ ಅವರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಸವಸುದ್ದಿಯವರ ಕಾರ್ಯ ಸಮಯೋಚಿತವಾಗಿದೆ ಎಂದರು.
ಹನಮಂತ ಕುರಬೇಟ ಮಾತನಾಡಿ,ಪತ್ರಕರ್ತರು ತಮ್ಮ ಕರ್ತವ್ಯದೊಂದಿಗೆ ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕೆಂದರು.
ತಾಲೂಕಾ ಪ್ರೆಸ್ ಅಸೋಶಿಯೇಷನ್ ಮಾಜಿ ಅದ್ಯಕ್ಷ ವಿ.ಎಚ್.ಬಾಲರಡ್ಡಿ ಪತ್ರಕರ್ತರ ಪರವಾಗಿ ಲಕ್ಕಣ್ಣ ಸವಸುದ್ದಿಯವರಿಗೆ ಕೃತಜ್ಞತೆ ಸಲ್ಲಿಸಿ,ಇವರು ಪತ್ರಕರ್ತರ ಹಿತೈಷಿಗಳಾಗಿದ್ದಾರೆ ಎಂದು ಹೇಳಿದರು.
ಈ ಸಮಯದಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲೂಕಾದ್ಯಕ್ಷ ಶಿವರಡ್ಡಿ ಹುಚರಡ್ಡಿ,ಗೂಳಪ್ಪ ಮೇಟಿ ಇನ್ನಿತರರು ಇದ್ದರು.
Share
WhatsApp
Follow by Email