
ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವಾಗ ಸಮಾಜ ಸೇವಾ ಮಾಡುವ ಯಾರು ಕೂಡಾ ಮುಂದೆ ಬರಲು ಹಿಂಜರಿಕೆ ಪಡುತ್ತಿದ್ದಾರೆ. ಕೆಲವರು ಅಧಿಕಾರ ಆಸೆಗಾಗಿ ಸಮಾಜ ಸೇವೆ ಮಾಡುವವರು ಒಂದು ಕಡೆಯಾದರೇ ಸಮಾಜ ಸೇವೆನೇ ಮೈಗೊಡಿಸಿಕೊಂಡ ಜನ ಇನ್ನೊಂದು ಕಡೆ. ಇರುವಾಗ ತಮ್ಮ ಜೀವನಕ್ಕೆ ಆಸರೆಯಾಗಿರುವ ಹಾಡುಗಾರಿಕೆಯನ್ನು ಬೀಟ್ಟು ಸಮಾಜ ಸೇವೆ ಮಾಡುತ್ತಿರುವ ಆ ವ್ಯಕ್ತಿಯ ಕಾರ್ಯ ಶ್ಲಾಘನೀಯ.

ಆದರೆ ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜನರಿಗೋಸ್ಕರ ಮಾಡುವಂತ ಕಾರ್ಯಗಳನ್ನು ಮನಗಂಡು ಶಾಸಕರನ್ನೇ ಮಾರ್ಗದರ್ಶಿಯಾಗಿರಿಸಿಕೊಂಡು ಸಮಾಜ ಸೇವೆ ಮಾಡುವ ಮನೋಭಾವನೆಯೊಂದಿಗೆ ಸಮಾಜದ ಹಿತಕ್ಕಾಗಿ ದುಡಿದು ಜನರ ವಿಶ್ವಾಸ ಗಳಿಸಿದಲ್ಲಿ ಅದಕ್ಕಿಂತ ಮಿಗಿಲಾದ ಶಕ್ತಿ ಬೇರಾವುದು ಬೇಕಾಗುವುದಿಲ್ಲ, ಸಮಾಜ ಸೇವೆಯಲ್ಲಿ ಅಂತಹ ಸಾಮರ್ಥ್ಯ ಇದೆ ಎಂಬ ನಂಬಿಕೆಯಿoದ ತಮ್ಮ ಹಾಡುಗಾರಿಕೆಯನ್ನು ಬಿಟ್ಟು ಸಮಾಜ ಸೇವೆ ಮಾಡಲು ಕ್ರಿಯಾಶೀಲರಾಗಿ ಮೊದಲಿಗೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ, ಶಾಸಕರ ಮೆಚ್ಚುಗೆ ಪಡೆದು, ಶಾಸಕರ ಮಾರ್ಗದರ್ಶನದಲ್ಲಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಮುಖ್ಯವಾಗಿ ಬೇಕಾದುದು ಸಮಾಜದ ಜನರ ವಿಶ್ವಾಸದ ಗಳಿಕೆ. ಇತ್ತೀಚಿನ ದಿನಗಳಲ್ಲಂತೂ ಪ್ರಕೃತಿ ವಿಕೋಪದಂತಹ ಸಂದರ್ಭಗಳಲ್ಲಿ ಅಪಾರ ಜಿವಹಾನಿ, ಆಸ್ತಿ ನಷ್ಟ ಇತ್ಯಾದಿ ಸಂಭವಿಸಿದಾಗ, ಹಾಗೂ ಇಡೀ ದೇಶದಲ್ಲೇ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ಹಿನ್ನೆಲೆ ಅನೇಕ ಖ್ಯಾತನಾಮ ಉದ್ಯಮಗಳು, ಸಮಾಜದ ಗಣ್ಯರು ದೇಣಿಗೆ, ದಿನಸಿ ವಸ್ತುಗಳನ್ನು ಬಡ ಜನರಿಗೆ ಹಚ್ಚುವಂತ ಕೆಲಸ ಮಾಡುತ್ತಿದ್ದಾರೆ. ಆದರೆ ಮರೇಪ್ಪ ಅವರು ತಾನು ಏನನಾದರೂ ಬಡ ಜನರಿಗೆ ಸಹಯ ಮಾಡಬೇಕು ಎಂದು ಬಡ ಕುಟುಂಬಗಳಿಗೆ ಸಹ ದಿನಸಿ ಕಿಟ್ ವಿತರಿಸುವ ಮೂಲಕ ಸಮಾಜಕ್ಕೆ ಅಳಿಲು ಸೇವೆ ಮಾಡುತ್ತಿದ್ದಾರೆ.

ಬಾಕ್ಸ್ ನ್ಯೂಸ್ : ಪ್ರತಿ ವ್ಯಕ್ತಿಯಲ್ಲೂ ತನ್ನದೆ ಆದ ಪ್ರತಿಭೆ ಇದ್ದೆ ಇರುತ್ತದೆ. ಜತೆಗೆ ಪ್ರತಿಭೆ ಅನಾವರಣಗೊಳ್ಳುವುದು ಇಂತಹ ಕಾರ್ಯಕ್ರಮದಿಂದಲೇ. ಯಾರನ್ನಾದರೂ ಬೆಟ್ಟು ಮಾಡುವ ಬದಲು ಅವರಿಗೆ ಅವಕಾಶ ನೀಡುವ ಮೂಲಕ ಸಮಾಜಮುಖಿ ಕೆಲಸ ಮಾಡಬೇಕು. ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರು ಸಂಕಲ್ಪ ತೊಟ್ಟರೆ ಮಾತ್ರ ಸಮಾಜದ ಅಭಿವೃದ್ಧಿ ಹೊಂದಲು ಸಾಧ್ಯ,
ಸಮಾಜ ಸೇವಕ ಮರೇಪ್ಪ ಮರೇಪ್ಪಗೋಳ