ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಬೇಕು. ಎಲ್ಲರು ಕೊರೊನಾ ವೈರಸ್ ವಿರುದ್ಧ ಹೋರಾಡಬೇಕು : ಪಿಡಿಒ ಈರಪ್ಪ ತಮದಡ್ಡಿ

ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಬೇಕು. ಎಲ್ಲರು ಕೊರೊನಾ ವೈರಸ್ ವಿರುದ್ಧ ಹೋರಾಡಬೇಕು : ಪಿಡಿಒ ಈರಪ್ಪ ತಮದಡ್ಡಿ

ಕೋಹಳ್ಳಿ : ಕ್ವಾರಂಟೈನ್‌ದಲ್ಲಿರುವ ಎಲ್ಲ 55 ಕಾರ್ಮಿಕರು ಕಡ್ಡಾಯವಾಗಿ ಸಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸಬೇಕು. ಎಲ್ಲರು ಕೊರೊನಾ ವೈರಸ್ ವಿರುದ್ಧ ಹೋರಾಡಬೇಕು ಎಂದು ಗ್ರಾಪಂ ಪಿಡಿಒ ಈರಪ್ಪ ತಮದಡ್ಡಿ ಹೇಳಿದರು.
ಅವರು ಶುಕ್ರವಾರ ಸ್ಥಳೀಯ ಗ್ರಾಮ ಪಂಚಾಯತಿ ವತಿಯಿಂದ ಸರಕಾರಿ ಪ್ರೌಢ ಶಾಲೆಯಲ್ಲಿ ಕಳೆದ ಒಂದು ವಾರದಿಂದ ಕ್ವಾರಂಟೈನ್‌ದಲ್ಲಿದ್ದ ಕಾರ್ಮಿಕರಿಗೆ ಹಾಗೂ ಅಡುಗೆ ಸಿಬ್ಬಂದಿಗೆ ಮಾಸ್ಕ ವಿತರಿಸಿ ಮಾತನಾಡಿ, ಎಲ್ಲರು ವಯಕ್ತಿಕವಾಗಿ ಅಂತರ ಕಾಯ್ದುಕೊಳ್ಳಬೇಕು. ಪ್ರತಿದಿನವು ತಮ್ಮ ಸರಿಯಾಗಿ ಹಾಜರಾತಿ ನೋಡಿಕೊಳ್ಳಲಾಗುವುದು. ಯಾರು ಕೂಡಾ ಹೊರಗಡೆ ತಿರುಗಾಡಬಾರದು. ಎಲ್ಲರು ಆರೋಗ್ಯ ಬಗ್ಗೆ ಕಾಳಜಿ ವಹಿಸಿ ಶುದ್ದ ಕುಡಿಯುವ ನೀರು, ಸರಿಯಾದ ಸಮಯಕ್ಕೆ ಊಟವನ್ನು ಸೇವಿಸಬೇಕು. ಯಾವುದೇ ಕಾರಣಕ್ಕೂ ತಮ್ಮ ಆರೋಗ್ಯದಲ್ಲಿ ಏರುಪೇರಾದರೇ ಕೂಡಲೇ ಸ್ಥಳದಲ್ಲಿದ್ದ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಎಲ್ಲರಿಗೂ ಮಾಸ್ಕ ವಿತರಣೆ ಮಾಡಿದರು. ಶಾಲೆಯ ಮುಖ್ಯೋಪಾಧ್ಯಾಯ ಆರ್. ಎಲ್. ರಾಠೋಡ, ಗ್ರಾಮ ಲೆಕ್ಕಾಧಿಕಾರಿ ಸಂಜೀವಕುಮಾರ ರಾಠೋಡ, ಆರೋಗ್ಯ ಇಲಾಖೆಯ ಕಿರಿಯ ಮಹಿಳಾ ಸಹಾಯಕಿ ಎಪ್. ಎಸ್. ಕೋಲಕಾರ, ಆಶಾ ಕಾರ್ಯಕರ್ತೆ ರಾಜಶ್ರೀ ಸತ್ತಿ, ಗ್ರಾಪಂ ಸದಸ್ಯ ಹಣಮಂತ ಕನ್ನಾಳ, ಸಿದ್ದರಾಮೇಶ್ವರ ಮೋಟಗಿ, ಪ್ರಕಾಶ ಸಿಂಗೆ, ಮಹಾಂತೇಶ ನಾಟೀಕಾರ ಸೇರಿದಂತೆ ಅಡುಗೆ ಸಿಬ್ಬಂದಿಯವರು ಇದ್ದರು.
Share
WhatsApp
Follow by Email