ಇಂದು ಮುಸಲ್ಮಾನರ ಪವಿತ್ರ ಹಬ್ಬ ರಂಜಾನ್, ಚಂದ್ರ ದರ್ಶನವಾದ ದಿನದಿಂದ ಒಂದು ತಿಂಗಳ ನಿರಂತರ ಶ್ರದ್ದಾ ನಿಷ್ಟೆಯಿಂದ ಉಪವಾಸ

ಇಂದು ಮುಸಲ್ಮಾನರ ಪವಿತ್ರ ಹಬ್ಬ ರಂಜಾನ್, ಚಂದ್ರ ದರ್ಶನವಾದ ದಿನದಿಂದ ಒಂದು ತಿಂಗಳ ನಿರಂತರ ಶ್ರದ್ದಾ ನಿಷ್ಟೆಯಿಂದ ಉಪವಾಸ

ಸ್ಟೋರಿ: ಮಕಬುಲ್ ಅ ಬನ್ನೇಟ್ಟಿ.
ಕನ್ನಡ ಟುಡೆ ವಿಶೇಷ.

ಮುದ್ದೇಬಿಹಾಳ: ಚಂದ್ರ ದರ್ಶನವಾದ ದಿನದಿಂದ ಒಂದು ತಿಂಗಳ ನಿರಂತರ ಶ್ರದ್ದಾ ನಿಷ್ಟೆಯಿಂದ ಉಪವಾಸ ಮಾಡಿದ ಮುಸಲ್ಮಾನ ಬಾಂಧವರು ಇಂದು ಪವಿತ್ರ ರಮಜಾನ್ ಆಚರಣೆ ಮಾಡುತ್ತಿದ್ದಾರೆ. ಮಾನವನ ದೇಹ ಮತ್ತು ಮನಸ್ಸಿನ ಮೆಲಿನ ನಿಯಂತ್ರಣ ಸಾಧಿಸುವ ಮತ್ತು ಬಡತನದಲ್ಲಿರುವರ ಹಸಿವನ್ನು ಅರಿತುಕೊಳ್ಳುವ ಮಾಸವಾಗಿರುವ ರಂಜಾನ್ ಒಂದು ತಿಂಗಳ ನಿರಂತರ ಉಪವಾಸ ಮುಗಿದಿದೆ. ಕೊರೋನಾ ಸೊಂಕು ಮೂಡಿಸಿರುವ ಕರಿನೇರಳಿನ ಮದ್ಯಯೇ ಜಗತ್ತಿನೆಲ್ಲಡೆ, ನೆಲೆಸಿರುವ ಮುಸಲ್ಮಾನರು ರಂಜಾನ್ ಹಬ್ಬವನ್ನು ಸರಳತೆಯಿಂದ ಆಚರಿಸಲು ನಿರ್ದರಿಸಿದ್ದಾರೆ.
ಇಸ್ಲಾಮ್ ತಿಂಗಳಿನ 9ನೇ ತಿಂಗಳು ರಮಜಾನ್ ಮಾಸ ಆಗಿದ್ದು, ಈ ಬಾರಿ ಮೇ {ಜಗತ್ತಿನ ಗಲ್ಪ್ ರಾಷ್ಟಗಳು, ನಮ್ಮ ಕರಾವಳಿ ಹಲವು ಭಾಗಗಳಲ್ಲಿ 24 ರಂದು ಆಚರಣೆಯಾಗಲಿದ್ದು} ಕೆಲವು ಭಾಗಗಳಲ್ಲಿ ಇಂದು ಮೇ 25 ರಂದು ಆಚರಣೆಯಾಗಲಿದೆ. ಚಂದ್ರದರ್ಶನ ಆಗಿರುವದರಿಂದ ಹಬ್ಬಕ್ಕೆ ಚಾಲನೆ ದೊರೆತಿದೆ.
ಬಡವರಿಗೆ ದಾನ ಮಾಡುವದು ಒಳ್ಳೆಯದು.
ರಮಜಾನ್ ಪ್ರಾರಂಭದ ದಿನದಿಂನದಲೂ ಮುಸಲ್ಮಾನರು ತಮ್ಮ ದೇವನ ಆರಾದನಗೆಗಾಗಿ, ಕೃಪೆಗಾಗಿ ಬಡವರಿಗೆ , ನಿರ್ಗತಿಕರಿಗೆ, ಆರ್ಥಿಕವಾಗಿ ತಳ್ಳಲ್ಪಟ್ಟವರಿಗೆ ಪ್ರತಿಯೊಬ್ಬ ಮುಸಲ್ಮಾನರು ತಮಗೆ ಕೈಲಾದಷ್ಟು ಸಹಾಯವನ್ನು ಮಾಡುತ್ತಾರೆ. ಅನ್ನವಿಲ್ಲದೆ ಹಸಿವಿನಿಂದ ಬದುಕುವ ಮತ್ತೊಬ್ಬರ ಹಸಿವನ್ನು ಪ್ರತಿಯೊಬ್ಬ ಮುಸಲ್ಮಾನ ನಿಗಿಸಲೇಬೇಕು ಎನ್ನುವ ನಿಯಮ ಇದೆ. ನಮ್ಮ ಮನೆಯಲ್ಲಿ ಮೃಷ್ಟಾನ್ನ ಭೋಜನ ಊಟ ಮಾಡುವಾಗ, ನೆರೆಯ ಮನೆಯ ವ್ಯಕ್ತಿ ಯಾವುದೇ ಧರ್ಮದವನಾದರೂ ಸರಿಯೇ ಅವನು ಸರಿಯಾಗಿ ಊಟ ಮಾಡಿದ್ದಾನೋ ಇಲ್ಲವೋ ಎಂಬುವದನ್ನು ಅರಿತುಕೊಂಡು ನಿಮ್ಮ ಮನೆಯಲ್ಲಿ ಊಟ ಮಾಡು ಎನ್ನುವ ತಾಕಿತು ಪ್ರವಾದಿಯವರು ಮುಸಲ್ಮಾನ ಧರ್ಮಿಯರಿಗೆ ಹೇಳಿದ್ದಾರೆ. ಅದರಂತೆಯೇ ಅವರು ಬದುಕು ನಡೆಸುತ್ತಿದ್ದಾರೆ.
ಹಬ್ಬದ ದಿನ ಬೆರೆಯವರಿಗೆ ಸುರಕುರಮಾ ಕೊಡುವದು.
ವಾಸ್ತವವಾಗಿ ಒಂದು ತಿಂಗಳ ಸಂಪೂರ್ಣ ಉಪವಾಸವನ್ನು ಮಾಡಿ ಪ್ರತಿಯೊಬ್ಬ ಮುಸಲ್ಮಾನನು ಹೊಸ ಬಟ್ಟೆಗಳನ್ನು ಹಾಕಿಕೊಂಡು ಆರಾದಕನಿಗೆ ಎಲ್ಲರೂ ಕೂಡಿಕೊಂಡು ಸ್ಥಳೀಯ ಸಮೀಪ ಇರುವ ಈದ್ಗಾದಲ್ಲಿ ಪ್ರಾರ್ಥನೆ ಮಾಡಿ ಜಗತ್ತಿನಲ್ಲಿರುವ ಪ್ರತಿಯೊಂದು ಜೀವಿಗೂ ಅಲ್ಲಾಹನ್ನು ಒಳಿತನನ್ನು ಮಾಡಲಿ, ಕಾಲಕಾಲಕ್ಕೆ ಮಳೆ ಬೆಳೆ ಚೆನ್ನಾಗಿ ಬರಲಿ ಎಂದು ದುವಾ: ಮಾಡುತ್ತಾರೆ. ಪ್ರಾರ್ಥನೆ ಮುಗಿದ ನಂತರ ಪ್ರತಿಯೊಬ್ಬ ಮುಸಲ್ಮಾನನು ತಬ್ಬಿಕೊಂಡು ದ್ವೇಷವನ್ನು ಬದಿಗೊತ್ತಿ ಅಲ್ಲಾಹನ ಆರಾಧನೆಯಲ್ಲಿ ಶ್ರಿಮಂತರು, ಬಡವರು ಒಂದೆ ಎನ್ನುವ ಸಾಮರಷ್ಯದ ಸಂಪುಟಕ್ಕೆ ನಾಂದಿ ಹಾಡುತ್ತಾ ಹಬ್ಬವನ್ನು ಬಲು ಉತ್ಸಾಹದಿಂದ ಆಚರಿಸುತ್ತಾರೆ. ಹಬ್ಬದ ದಿನದಂದು ಎಲ್ಲಾ ಧರ್ಮದ ಜನರನ್ನು ಕರೆದುಕೊಂಡು ತಮ್ಮ ಮನೆಯಲ್ಲಿ ವಿವಿಧ ಪದಾರ್ಥಗಳಿಂದ ಮಾಡಿದ ಸುರಕುರಮಾವನ್ನು ಕುಡಿಸುತ್ತಾರೆ, ಎಷ್ಟೋ ದಿನಗಳಿಂದ ವೈರತ್ವ ಇರುವವರು ಕೂಡಾ ಈ {ಇದ್‌ಉಲ್ ಪಿತ್ರ} ರಮಜಾನ ಹಬ್ಬದ ದಿನದಂದು ಮರೆತು ಕೂಡಿಕೊಂಡು ಬಾಳುತ್ತಿದ್ದಾರೆ.
ಸರ್ವಧರ್ಮದವರು ಒಂದಾಗುವ ರಮಜಾನ್ ಹಬ್ಬ
ಅಲ್ಲಾಹನನ್ನು ಆರಾದಿಸುವ ಹಬ್ಬದಲ್ಲಿ ಒಂದಾದ ಈ ಹಬ್ಬ ಸರ್ವಧರ್ಮದವರು ಬಹಳ ಇಷ್ಟ ಪಡುತ್ತಾರೆ. ರಮಜಾನ್ ಹಬ್ಬ ಬಂತೆAದರೆ ಸಾಕು ಗ್ರಾಮೀಣ ಭಾಗಗಳಲ್ಲಿ ಸರ್ವಧರ್ಮಿಯರು ತುಂಬಾ ಉತ್ಸಾಹಿಯಾಗಿ ಆಚರಿಸುತ್ತಾರೆ. ಅನೇಕ ಧರ್ಮದವರು ಪ್ರತಿವರ್ಷ ಉಪವಾಸವನ್ನು ಮಾಡುತ್ತಾರೆ ಮತ್ತು ತನ್ನ ಆತ್ಮೀಯ ಸ್ನೇಹಿತನ ಜೊತೆಯಲ್ಲಿ ಮಸೀದಿಯಲ್ಲಿ { ನಮಾಜ }ಪ್ರಾರ್ಥನೆ ಮಾಡಿದ ಸಾಕಷ್ಟು ಉದಾರಣೆಗಳು ಇವೆ. ಪ್ರತಿಯೊಬ್ಬರು ಕೊಡಿಕೊಂಡು ಸ್ನೇಹ ಸೌಹಾರ್ದತೆಯಿಂದ ಆಚರಿಸುವ ರಮಜಾನ್ ಹಬ್ಬದ ದಿನದಂದು ಬಹಳ ಸಂತೋಷದಿಂದ ಇರುತ್ತಾರೆ ಸರ್ವದರ್ಮದವರು.

ರಮಜಾನ್ ಹಬ್ಬದ ಮೇಲೆ ಕೊರೋನಾ ಕರಿನೇರಳು.
ಕೊರೋನಾ ಸೊಂಕು ಇಡೀ ಜಗತ್ತನ್ನು ಆವರಿಸುವದರಿಂದ ಈ ಬಾರಿ ಮುಸ್ಲಿಮರು ಅನಿವಾರ್ಯವಾಗಿ ಕೆಲವು ಬದಲಾವಣೆಗಳನ್ನು ಮಾಡಬೇಕಿದೆ.ರಮಜಾನ ಅವಧಿಯಲ್ಲಿ ಸಾಮೂಹಿಕವಾಗಿ ಈದ್ಗಾದಲ್ಲಿ ಪ್ರಾರ್ಥನೆ { ಹಬ್ಬದ ವಿಶೇಷ ನಮಾಜ್} ಮಾಡುವದನ್ನು ಸರಕಾರದ ನಿಯಮದಂತೆ ಎಲ್ಲಾ ಸಮುದಾಯದ ಸಂಘಟನೆಗಳು ನಿಷೇದಿಸಿ ಆದೇಶವನ್ನು ಪಾಲಿಸಲು ಕರೆ ಕೊಟ್ಟಿವೆ . ಆದರಿಂದ ಈ ಬಾರಿ ರಮಜಾನ್ ಪ್ರಾರ್ಥನೆಯನ್ನು ಎಲ್ಲಾ ಮುಸಲ್ಮಾನರು ಮನೆಯಲ್ಲಿ ಆಚರಿಸಲು ತಯಾರಾಗಿದ್ದಾರೆ. ಮತ್ತು ಕೊರೋನಾ ಹೊಡೆತದಿಂದ ನಲುಗಿರುವ ಬಡವರಿಗೆ ತಾವು ತೆಗೆದುಕೊಳ್ಳುವ ಬಟ್ಟೆಯ ಹಣವನ್ನು ದಾನವಾಗಿ ನೀಡಲು ನಿರ್ಧಾರ ಮಾಡಿದ್ದಾರೆ.


ರಂಜಾನ್ ತಿಂಗಳ ಉಪವಾಸ ಇಸ್ಲಾಂ ಧರ್ಮದ ಕಡ್ಡಾಯ ಕರ್ಮಗಳಲ್ಲೊಂದಾಗಿದೆ. ಉಪವಾಸವು ಕೂಡಾ ಒಂದು ಆರಾಧನೆಯಾಗಿದ್ದು, ಒಬ್ಬನಲ್ಲಿ ದೈವಭಕ್ತಿ ಮೂಡಿಸುವ ಸಾಧನೆಯೂ ಹೌದು. ಒಂದು ತಿಂಗಳ ಉಪವಾಸ 11ತಿಂಗಳುಗಳ ಜೀವನಕ್ಕೆ ಚೈತನ್ಯ, ಮತ್ತು ಸ್ಪೂರ್ತಿ ತುಂಬಬಲ್ಲದು.

ಬಾಕ್ಸ ನ್ಯೂಸ್ : ಮುಸಲ್ಮಾನರ ಪವಿತ್ರ ಹಬ್ಬವಾದ ರಮಜಾನ್ ಬಹಳ ಶ್ರೇಷ್ಠವಾದದ್ದು, ಜಗತ್ತಿನ ಜೀವರಾಶಿಗಳಿಗೂ ಒಳಿತನ್ನು ಅವರು ಬಯಸುತ್ತಾರೆ. ಸರ್ವಧರ್ಮದವರನ್ನು ಕರೆದು ಮನೆಯಲ್ಲಿ ಸುರಕುರಮಾ ಕುಡಿಸಿ, ಊಟವನ್ನು ಮಾಡಿಸುವದು ಬಹಳ ಶ್ರೇಷ್ಟವಾದ ಕೆಲಸ. ಎಂದು ಮುತ್ತು ಪೂಜಾರಿ ಹೇಳಿದರು.
ಬಾಕ್ಸ ನ್ಯೂಸ್ : ಮುಸಲ್ಮಾನರ ಅನೇಕ ಹಬ್ಬಗಳಲ್ಲಿ ಇದು ಒಂದು ವಿಶೇಷತೆಯನ್ನು ಪಡೆದುಕೊಂಡಿದೆ. ಈ ಹಬ್ಬದಂದು ಪ್ರತಿಯೊಬ್ಬರು ಬಹಳ ಉತ್ಸಾಹದಿಂದ ಆಚರಿಸುತ್ತಾರೆ, ಅವರ ಹಬ್ಬದ ಉತ್ಸಾಹ ನೋಡಲು ಎರಡು ಕಣ್ಣುಗಳು ಸಾಲದು ಲಕ್ಷö್ಮಣ ಬೇನಾಳ. ಕಾನೂನು ಪದವಿ ವಿದ್ಯಾರ್ಥಿ ಹೇಳಿದರು.
Share
WhatsApp
Follow by Email