ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನಗರದಲ್ಲಿರುವ ಸಬರಮತಿ ನದಿ ದಾಟಲು ನೂತನ ನಿರ್ಮಿಸಿದ್ದ ಪ್ರಸಿದ್ಧ ಅಟಲ್ ಸೇತುವೆಯನ್ನು ಶನಿವಾರ (ಆಗಸ್ಟ್ 27) ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದಾರೆ.
ಈ ಸೇತುವೆಯನ್ನು ವಿಶೇಷವಾಗಿ ಗಾಳಿಪಟದ ಥೀಮ್‌ನೊಂದಿಗೆ ನಿರ್ಮಿಸಲಾಗಿದೆ. ಈ ಸೇತುವೆಯನ್ನು ಪಾದಚಾರಿಗಳ ಸಂಚಾರಕ್ಕಾಗಿಯೇ ನಿರ್ಮಿಸಲಾಗಿದೆ.
ಸೇತುವೆಯ ಮಧ್ಯ ಭಾಗದಲ್ಲಿ ಜನರಿಗೆ ಕುಳಿತುಕೊಂಡು ನದಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದಕ್ಕೂ ಅವಕಾಶ ಮಾಡಿಕೊಡಲಾಗಿದೆ.300 ಮೀಟರ್ ಉದ್ದವಿರುವ ಸೇತುವೆಯು 10-14 ಮೀಟರ್ ಅಗಲವಿದೆ.
ವಿಶೇಷ ಸೈಕಲಿಂಗ್ ಹಾದಿಯೂ ಇದರಲ್ಲಿದೆ. ಸೇತುವೆಯ ಬಳಿಯ ಕಲಾಕೃತಿ ಪ್ರದರ್ಶನವನ್ನೂ ಕಾಣಬಹುದು.
ಅಟಲ್ ಸೇತುವೆಯ ವಿಶೇಷತೆಗಳೇನು?
- ಈ ಸೇತುವೆ ಕೇವಲ ಪಾದಚಾರಿಗಳ ಉಪಯೋಗಕ್ಕೆ ಮಾತ್ರ. ಇದನ್ನು ಎಲ್ಲಿಸ್ ಸೇತುವೆ ಮತ್ತು ಸರ್ದಾರ್ ಸೇತುವೆ ನಡುವೆ ನಿರ್ಮಿಸಲಾಗಿದೆ.
- ಸೇತುವೆ ಮೇಲಿನ ರೂಫ್ ಅನ್ನು ಬಣ್ಣಬಣ್ಣದ ಫ್ಯಾಬ್ರಿಕ್ ನಿಂದ ನಿರ್ಮಿಸಲಾಗಿದೆ. ರೈಲಿಂಗ್ ಅನ್ನು ಗಾಜು ಮತ್ತು ಸ್ಟೈನ್ ಲೆಸ್ ಸ್ಟೀಲ್ ನಿಂದ ನಿರ್ಮಾಣ ಮಾಡಲಾಗಿದೆ.
- ಪ್ರಸಿದ್ಧ ಅಟಲ್ ಬ್ರಿಡ್ಜ್ ಕಣ್ಮನ ಸೂರೆಗೊಳ್ಳುವ ರೀತಿಯ ಡಿಸೈನ್ ನಲ್ಲಿ ನಿರ್ಮಾಣ ಮಾಡಲಾಗಿದ್ದು, ಎಲ್ ಇಡಿ ಕೂಡಾ ಬಳಕೆ ಮಾಡಲಾಗಿದೆ. ಈ ಸೇತುವೆ ಸುಮಾರು 300 ಮೀಟರ್ ಉದ್ದವಿದ್ದು, 14 ಮೀಟರ್ ಅಗಲಿದೆ.
- ಅಟಲ್ ಸೇತುವೆಯನ್ನು 2,600 ಮೆಟ್ರಿಕ್ ಟನ್ ಗಳಷ್ಟು ಸ್ಟೀಲ್ ಪೈಪ್ಸ್ ಉಪಯೋಗಿಸಿ ನಿರ್ಮಾಣ ಮಾಡಲಾಗಿದೆ.
- ಪಾದಚಾರಿಗಳನ್ನು ಹೊರತು ಪಡಿಸಿ ಅಟಲ್ ಸೇತುವೆಯನ್ನು ಸೈಕಲಿಸ್ಟ್ ಗಳು ಬಳಸಬಹುದಾಗಿದೆ. ಪ್ರವಾಸಿಗರ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗಿದೆ.