ಕಸ್ತೂರಿ ರಂಗನ್ ವರದಿ 2013 ದ್ದು, ಈಗ ಪರಿಸ್ಥಿತಿ ಬದಲಾಗಿದೆ: ಸಚಿವ ಈಶ್ವರ ಖಂಡ್ರೆ

ಕಸ್ತೂರಿ ರಂಗನ್ ವರದಿ ಬಂದು ಹತ್ತು ವರ್ಷಗಳಾಗಿದೆ. ಈ ವರದಿ 2013ರಲ್ಲಿ ಬಂದಿದ್ದು, ಈಗ ನಾವು 2023ರಲ್ಲಿದ್ದೇವೆ. ಆಯಾ ಭಾಗದ ಜನ, ಅವರ ಸಮಸ್ಯೆ, ಅನಿಸಿಕೆ ಎಲ್ಲವನ್ನೂ ಕೇಳಬೇಕು. 

ಹಾಸನ : ಕಸ್ತೂರಿ ರಂಗನ್ ವರದಿ ಬಂದು ಹತ್ತು ವರ್ಷಗಳಾಗಿದೆ. ಈ ವರದಿ 2013ರಲ್ಲಿ ಬಂದಿದ್ದು, ಈಗ ನಾವು 2023ರಲ್ಲಿದ್ದೇವೆ. ಆಯಾ ಭಾಗದ ಜನ, ಅವರ ಸಮಸ್ಯೆ, ಅನಿಸಿಕೆ ಎಲ್ಲವನ್ನೂ ಕೇಳಬೇಕು. ಅವತ್ತಿನ ಕಾಲದಲ್ಲಿ ಅವರು ವರದಿ ಕೊಟ್ಟ ಸಂದರ್ಭದಲ್ಲಿ ಭೌಗೋಳಿಕವಾಗಿ ಆ ಭಾಗದಲ್ಲಿ ಏನೇನು ಇತ್ತು, ಇವತ್ತು ಏನೇನು ಪರಿವರ್ತನೆ ಆಗಿದೆ ಎನ್ನುವುದು ಯಾರಿಗೆ ಗೊತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ಆನೆ ದಾಳಿಯಿಂದ ಮೃತರಾದ ಆನೆ ವೆಂಕಟೇಶ್ ಅವರ ಕುಟುಂಬವನ್ನು ಅವರ ಗ್ರಾಮದ ಆಲೂರು ತಾಲೂಕಿನ ಹೊನ್ನವಳ್ಳಿಯಲ್ಲಿ ಭೇಟಿ ಮಾಡಿ ಸಾಂತ್ವನ ಹೇಳಿದ ನಂತರ ಕಸ್ತೂರಿ ರಂಗನ್ ವರದಿ ಕುರಿತು ಮಾತನಾಡಿದರು.

ವರದಿ ಕುರಿತು ಜನಪ್ರತಿನಿಧಿಗಳ ಜೊತೆ ಚರ್ಚೆ ಮಾಡಬೇಕು. ಅದು ಕೇಂದ್ರ ಸರ್ಕಾರದ ಅಂಗಳದಲ್ಲಿದೆ. ಕೇಂದ್ರ ಸರ್ಕಾರ ಸಂಜಯ್‌ ಕುಮಾರ್ ನೇತೃತ್ವದಲ್ಲಿ ಸಮಿತಿ ಮಾಡಿದೆ. ಅವರು ನನ್ನನ್ನು ಭೇಟಿ ಮಾಡಿದ್ದರು. ನೀವು ಎಲ್ಲಾ ಜಿಲ್ಲೆಗಳಿಗೂ ಭೇಟಿ ಕೊಡಿ, ಶ್ರೀಸಾಮಾನ್ಯರ ಸಲಹೆ ತೆಗೆದುಕೊಳ್ಳಿ. ಪರಿಸರವಾದಿಗಳ ಸಲಹೆ ತೆಗೆದುಕೊಳ್ಳಿ, ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಅವೆಲ್ಲವನ್ನೂ ಮಾಡಿ ನಮಗೆ ವರದಿ ಕೊಡಿ ಎಂದು ಹೇಳಿದ್ದೇನೆ. ಅವರು ವರದಿ ಕೊಟ್ಟಮೇಲೆ ನಾನು ಮತ್ತೆ ಸಚಿವ ಸಂಪುಟದ ಉಪಸಮಿತಿಯಲ್ಲಿ ಚರ್ಚೆ ಮಾಡಿ, ಸಚಿವ ಸಂಪುಟ, ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇನೆ. ಸಾಧಕ ಬಾಧಕಗಳನ್ನು ನೋಡಿಕೊಂಡು ಅಂತಿಮವಾಗಿ ಜಾರಿ ಮಾಡುವ ತೀರ್ಮಾನ ಮಾಡಲಾಗುವುದು ಎಂದರು.

Share
WhatsApp
Follow by Email