ಮೈಸೂರು: ಇತ್ತೀಚೆಗೆ ನಗರದಲ್ಲಿ ಎಲ್ಲೆಂದರಲ್ಲಿ ಉದ್ಯಮಗಳು ಅವ್ಯಾಹತವಾಗಿ ಅನಧಿಕೃತವಾಗಿ ತಲೆಎತ್ತುತ್ತಿದ್ದು ಪಾಲಿಕೆಗೆ ಮಾಹಿತಿ ನೀಡದೆ ಮನಬಂದಂತೆ ಕಮರ್ಷಿಯಲ್ ಆಫೀಸು, ವಾಣಿಜ್ಯ ಉದ್ಯಮ ಮಳಿಗೆಗಳು, ಶಾಪ್ ಗಳು ತಲೆ ಎತ್ತಿರುವುದು ಇಲ್ಲೊಂದು ಉತ್ತಮ ನಿದರ್ಶನವೆಂಬಂತೆ ರಾಮಕೃಷ್ಣ ನಗರದ ಬಳಿ ದಟ್ಟಗಳ್ಳಿ ರಸ್ತೆಗೆ ಹೊಂದಿಕೊಂಡು ಕೆ.ಇ.ಬಿ ಸರ್ಕಲ್ ಗಿಂತ ಮುಂಚಿತವಾಗಿ ಒಂದು ರಸ್ತೆ ತಿರುವು ಇದ್ದು ಅಲ್ಲಿ ಈ ಕಿಂಗ್ಸ್ ಕಾಫಿ ಕೋ ತಲೆ ಎತ್ತಿದ್ದು ಸಾಕಷ್ಟು ಕಾರ್, ಬೈಕುಗಳು ಸಂಜೆ ಆದರೆ ಸಾಕು ದಟ್ಟಣೆಯಾಗಿ ಜನಸಾಮಾನ್ಯರಿಗೆ ತಿರಿಗಾಡಲು ತೊಂದರೆ ಉಂಟುಮಾಡುತ್ತಿರುವುದು ಕಂಡುಬಂದಿದ್ದು, ಮಹಾನಗರ ಪಾಲಿಕೆಯವರೇ ದೃಢಪಡಿಸಿದ್ದು ಯಾವುದೇ ರೀತಿಯ ಪರವಾನಿಗೆ ನೀಡಿಲ್ಲ ಎಂದು. ಆದರೂ ಅದು ಹೇಗೆ ವ್ಯಾಪಾರ ಮಾಡುತ್ತಿರುವರೋ ವಿಸ್ಮಯಕಾರಿ!
ಕಿಂಗ್ಸ್ ಕಾಫಿ ಕೋ. ಎಂಬ ಕಾಫಿ ಶಾಪ್ ಗೆ ಮೈಸೂರು ಮಹಾನಗರ ಪಾಲಿಕೆಯವರು ಯಾವುದೇ ರೀತಿಯ ಪರವಾನಿಗೆ ನೀಡಿಲ್ಲ ಎಂಬ ಹಿಂಬರಹ ಪತ್ರ ಕನ್ನಡ ಟುಡೇ ನ್ಯೂಸ್ ಗೆ ದೊರೆತಿದ್ದು, ಈ ಕುರಿತು ಧ್ವನಿ ಎತ್ತಿ ದೂರು ಸಲ್ಲಿಸಿದ ವಾಯ್ಸ್ ಆಫ್ ಪೀಪಲ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ವಸಂತರಾವ್ ಚೌಹಾಣ್ ಅವರು ದೂರು ಸಲ್ಲಿಸಿದಾಗ ಪಾಲಿಕೆಯಿಂದ ಉತ್ತರ ಮಾತ್ರ ಪರವಾನಿಗೆ ನೀಡಿಲ್ಲ ಎಂಬದು ಖಚಿತವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸುವರೇ ಜನರ ಜೀವನದ ಜೊತೆ ರಸ್ತೆ ಮೇಲೆ ಅಪಘಾತವಾಗುವ ರಸ್ತೆ ತಿರುವುನಲ್ಲಿ ಈಗಲಾದರೂ ವಾಹನಗಳು ನಿಲ್ಲುವುದು ತಪ್ಪಿಸುವರೋ ಕಾದುನೋಡಬೇಕಿದೆ.