ಗುತ್ತೇದಾರ ಸಚಿನ್ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಗೆ ಒದಗಿದ ಸಂಕಷ್ಟ

ಗುತ್ತೇದಾರ ಸಚಿನ್ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಗೆ ಒದಗಿದ ಸಂಕಷ್ಟ

ಗುತ್ತಿಗೆದಾರ ಸಚಿನ್​​ ಪ್ರಕರಣ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಸಚಿನ್​ ಬರೆದಿಟ್ಟ ನೋಟ್​ ಬಿಜೆಪಿ ಪಾಲಿಗೆ ಬ್ರಹ್ಮಾಸ್ತ್ರವಾಗಿದೆ. ಸಚಿವ ಪ್ರಿಯಾಂಕ್​ ಖರ್ಗೆ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿದೆ. ಈಶ್ವರಪ್ಪ ರಾಜೀನಾಮೆಯನ್ನೇ ಮುಂದಿಟ್ಟು ದಾಳ ಉರುಳಿಸಿದೆ.

ಪ್ರಕರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ಕೋಟೆಯಿಂದ ಆರೋಪ-ಪ್ರತ್ಯಾರೋಪಗಳ ಸಿಡಿಗುಂಡು ಸಿಡಿಯುತ್ತಿವೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಹೆಸರನ್ನು ಉಲ್ಲೇಖಿಸಿದ್ದೇ ಬಿಜೆಪಿ ಪಾಲಿಗೆ ಬ್ರಹ್ಮಾಸ್ತ್ರವಾಗಿದೆ. ಇದೇ ವಿಚಾರವನ್ನೇ ಹಿಡಿದು ಬಿಜೆಪಿ, ಸಚಿವ ಪ್ರಿಯಾಂಕ್​ ಖರ್ಗೆ ರಾಜೀನಾಮೆಗೆ ಬಿಗಿಪಟ್ಟು ಹಿಡಿದಿದೆ.

ಈಶ್ವರಪ್ಪ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಏನು ಹೇಳಿದ್ರು?

ಸಚಿವ ಪ್ರಿಯಾಂಕ್​ ಖರ್ಗೆ ರಾಜೀನಾಮೆ ಬಗ್ಗೆ ಮಾತನಾಡಿದ ಬಿಜೆಪಿ ಎಂಎಲ್​ಸಿ ಸಿ.ಟಿ ರವಿ, ಈಶ್ವರಪ್ಪ ರಾಜೀನಾಮೆ ಪ್ರಸಂಗ ಹಿಡಿದು ಕುಟುಕಿದ್ದಾರೆ. ಈಶ್ವರಪ್ಪ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆ ಏನು ಹೇಳಿದ್ರು ಅಂತ ನೆನಪಿಸಿಕೊಳ್ಳಲಿ. ಪ್ರಿಯಾಂಕ್ ಖರ್ಗೆಯವರೇ ಹೊಣೆ ಆಗಬೇಕು ಎಂದು ಸಿಟಿ ರವಿ ಗುಡುಗಿದ್ದಾರೆ.

ಎವಿಡೆನ್ಸ್ ಇಲ್ಲ, ಸಾಕ್ಷಿ ಇಲ್ಲ ಅಂತ CM ಕೌಂಟರ್!​

ಸಚಿವ ಪ್ರಿಯಾಂಕ್​ ಖರ್ಗೆ ರಾಜೀನಾಮೆಗೆ ಪಟ್ಟು ಹಿಡಿದಿರೋ ಬಿಜೆಪಿ ವಿರುದ್ದ ಸಿಎಂ ಸಿದ್ದರಾಮಯ್ಯ ಕೆಂಡ ಉಗುಳಿದ್ದ್ದಾರೆ. ಪ್ರಿಯಾಂಕ್​ ರಾಜೀನಾಮೆ ಪಡೆಯಲು ಏನಾದ್ರು ಎವಿಡೆನ್ಸ್ ಇರಬೇಕಲ್ವಾ? ಏನು ಎವಿಡೆನ್ಸ್ ಇಲ್ಲ, ಸಾಕ್ಷಿ ಇಲ್ಲ ಅಂತ ಪರೋಕ್ಷವಾಗೆ ರಾಜೀನಾಮೆ ಪಡೆಯೋ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಇದು ಬಿಜೆಪಿ ರಾಜಕೀಯ ದ್ವೇಷದಿಂದ ಮಾಡ್ತಿರೋ ಆರೋಪ ಎಂದು ಕಿಡಿಕಾರಿದ್ದಾರೆ.

ಸಚಿನ್ ಗುತ್ತಿಗೆದಾರನೇ ಅಲ್ಲ ಎಂದ ಗುತ್ತಿಗೆದಾರ ಸಂಘ

ಸಚಿನ್​ ಗುತ್ತಿಗೆದಾರನೇ ಅಲ್ಲ ಎಂದು ಬೀದರ್​ ಗುತ್ತಿಗೆದಾರರ ಸಂಘ ವರದಿ ನೀಡಿತ್ತು. ಗುತ್ತಿಗೆದಾರರ ಸಂಘದ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿನ್ ಸಹೋದರಿ ಸುರೇಖಾ ಪ್ರತಿಕ್ರಿಯೆ ನೀಡಿದ್ದಾರೆ. ಸಚಿನ್ ಗುತ್ತಿಗೆದಾರ ಅಂತಾ ನಾವು ಯಾವತ್ತು ಹೇಳಿಕೊಂಡಿಲ್ಲ, ಸಂಘದವರೇ ಬಂದು ಅವನ ಹತ್ರ ಲೈಸೆನ್ಸ್ ಇದೆಯಾ ಎಂದು ಕೇಳಿದ್ರು. ಲೈಸೆನ್ಸ್ ಇರುವ ಬಗ್ಗೆ ನಮಗೆ ಗೊತ್ತಿಲ್ಲ, ಎಲ್ಲಾ ಡಾಕ್ಯುಮೆಂಟ್ಸ್ ಕಲಬುರಗಿ ಆಫೀಸ್‌ನಲ್ಲಿದ್ದವು. ಈಗಾಗಲೇ ಕಲಬುರಗಿ ಕಚೇರಿಯಲ್ಲಿ ಎಲ್ಲಾ ದಾಖಲೆಗಳು ನಾಶ ಮಾಡಿದ್ದಾರೆ ಎಂದು ಆರೋಪಿಸಿದ್ರು.
ಒಟ್ನಲ್ಲಿ ಯುವ ಗುತ್ತಿಗೆದಾರ ಸಚಿನ್ ಪ್ರಕರಣ ಸದ್ಯ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡೋ ಹಂತಕ್ಕೆ ಬಂದು ತಲುಪಿದೆ. ಈ ಪ್ರಕರಣ ಅದ್ಯಾವ ಘಟ್ಟಕ್ಕೆ ಹೋಗುತ್ತೆ ಎಂದು ಕಾದುನೋಡಬೇಕಿದೆ.

Share
WhatsApp
Follow by Email