ಬೆಂಗಳೂರು:ಇತ್ತೀಚಿಗೆ ಚೀನಾ ದೇಶದಲ್ಲಿ ಹರಡಿರುವ HMPV ಸೋಂಕಿನ ಕುರಿತು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ರಾಜ್ಯದಲ್ಲಿ ಎಚ್ಎಂಪಿವಿ ಕುರಿತು ಆತಂಕಪಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ, ಎನ್ಸಿಡಿಸಿ ಜೊತೆ ಪರಿಸ್ಥಿತಿಯ ಸೂಕ್ಷ್ಮ ಮೇಲ್ವಿಚಾರಣೆ ನಡೆಸುತ್ತಿದೆ.
ಚಳಿಗಾಲದ ಇತರೆ ಶ್ವಾಸಕೋಶ ಸೋಂಕಿನ ರೀತಿಯಲ್ಲಿಯೇ ಶೀತ ಮತ್ತು ಜ್ವರದ ಲಕ್ಷಣವನ್ನು ಎಚ್ಎಂಪಿವಿ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದೆ.
ಏನೇನು ಮಾಡಬೇಕು?
- ಕೆಮ್ಮುವಾಗ ಸೀನುವಾಗ ಕಾರವಸ್ತ್ರದಿಂದ ಬಾಯಿಯನ್ನು ಮುಚ್ಚಿಕೊಳ್ಳಿ
- ಆಗಾಗ ಕೈಯನ್ನು ಸಾನಿಟೈಜರ್ ಅಥವಾ ಸೋಪಿನಿಂದ ತೊಳೆಯುತ್ತಿರಿ
- ನಿಮಗೆ ಕೆಮ್ಮು , ಶೀತ, ಜ್ವರ ಇದ್ದರೆ ಜನ ಪ್ರದೇಶದಿಂದ ದೂರವಿರಿ.
- ಮನೆಯಲ್ಲಿಯೇ ಇರಿ.
- ಸರಿಯಾದ ಪ್ರಮಾಣದ ನೀರು ಮತ್ತು ಪ್ರೋಟಿನ್ ಯುಕ್ತ ಆಹಾರ ಸೇವಿಸಿ.