ಲಿಂಗಸುಗೂರು : ತಾಲೂಕಿನ ಪ್ರಜಾವಾಣಿ ವರದಿಗಾರ ಬಸವರಾಜ ನಂದಿಕೋಲಮಠ ನಿಧನದ ಪ್ರಯುಕ್ತ ಕರ್ನಾಟಕ ರಕ್ಷಣಾ ವೇದಿಕೆ ( ಹೆಚ್.ಶಿವರಾಮೇಗೌಡ ಬಣ) ಕಛೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಬಸವರಾಜ ನಂದಿಕೋಲಮಠ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ ಸಿ.ಕೆ. ಜೈನ್ ಹಿರಿಯ ಪತ್ರಕರ್ತರ ಅಕಾಲಿಕ ನಿಧನ ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟವಾಗಿದೆ ಅವರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಒಂದು ನಿಮಿಷಗಳ ಮೌನಾಚರಣೆ ಮಾಡಿ ಸಂತಾಪ ಸೂಚಿಸಲಾಯಿತು.
ಈ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷ ಮಾದೇಶ ಸರ್ಜಾಪುರ,ಉಪಾಧ್ಯಕ್ಷ ಬಸವರಾಜ ಪೇರಿ,ಪ್ರಧಾನ ಕಾರ್ಯದರ್ಶಿ ಶರಣಬಸವ ಈಚನಾಳ,ಸಂ.ಕಾರ್ಯದರ್ಶಿ ಮುತ್ತಣ್ಣ ಗುಡಿಹಾಳ,ಜಿಲ್ಲಾ ಮಾಧ್ಯಮ ವಕ್ತಾರ ರಾಜೇಶ ಮಾಣಿಕ್, ಖಜಾಂಚಿ ಮಹಾಂತೇಶ ಹೂಗಾರ,ರಾಜು ರೆಡ್ಡಿ,ಮಂಜುನಾಥ ಬಳ್ಳಾರಿ,ಅಮರೇಶ,ವಿಶ್ವನಾಥ,ಗಣೇಶ ಇತರರಿದ್ದರು.