
ರಾಯಚೂರು: ಸಿಂಧನೂರು-ರಾಯಚೂರು ಮುಖ್ಯ ರಸ್ತೆಯಲ್ಲಿ ಧಾರುಣ ಅಂತ್ಯ ಕಂಡ ವಿದ್ಯಾರ್ಥಿಗಳು
ವೈಷ್ಣವಿದೇವಿ ದೇವಸ್ಥಾನದ ಸಮೀಪ ಮಂಗಳವಾರ ತಡ ರಾತ್ರಿ ಕ್ರೂಸರ್ ಪಲ್ಟಿಯಾಗಿ ಚಾಲಕ ಹಾಗೂ ಮೂವರು ವಿದ್ಯಾರ್ಥಿಗಳು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಇದಕ್ಕೆ ಚಾಲಕನ ಅತಿ ವೇಗವು ಕಾರಣವಾಗಿದೆ.
ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದ ವಿದ್ಯಾರ್ಥಿಗಳಾದ ಸುಜಯೇಂದ್ರ ಕೃಷ್ಣಮೂರ್ತಿ(22), ಬಳ್ಳಾರಿಯ ಹಯವದನ ಪ್ರಹ್ಲಾದಚಾರಿ(18), ಕೊಪ್ಪಳದ ಅಭಿಲಾಷ ಅಶ್ವತ್ ಓಲಿ (20) ಹಾಗೂ ಚಾಲಕ ಕಂಸಾಲಿಶಿವಾ ಸೋಮಣ್ಣ(20) ಮೃತಪಟ್ಟಿದ್ದಾರೆ.