ರಾಯಚೂರು: ವ್ಯಕ್ತಿಯೊಬ್ಬರ ಸಾವಿಗೆ ಈಕೆಯೆ ಕಾರಣವೆಂದು ಆರೋಪಿಸಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ ಘಟನೆಯೊಂದು ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಜರುಗಿದೆ.

ದಂಡಮ್ಮ ಎಂಬವರ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದೆ. ದಂಡಮ್ಮ ತನ್ನ ತಾಯಿಯೊಂದಿಗೆ ಜಾಲಹಳ್ಳಿಯಲ್ಲಿ ವಾಸವಾಗಿದ್ದರು.
ಇತ್ತೀಚೆಗೆ ಮೃತಪಟ್ಟ ದುರ್ಗಪ್ಪ ಎಂಬವರ ಸಾವಿಗೆ ದಂಡಮ್ಮ ಕಾರಣ ಎಂದು ಆರೋಪಿಸಿ ಮೃತನ ಸಹೋದರ ಬಸವರಾಜ ನಾಯಕ ಹಾಗೂ ಕೆಲ ಸಂಬಂಧಿಕರು ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಗ್ರಾಮದ ನಿವಾಸಿಗಳು ಯಾರು ಸಹಾಯಕ್ಕೆ ಬಾರದೆ ಇರುವುದು ಅಮಾನವೀಯ ಘಟನೆಯೆಂದು ತಿಳಿಯುತ್ತದೆ.
ಘಟನೆ ಸಂಬಂಧ ನಾಲ್ವರ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.