ಹುಕ್ಕೇರಿ : ಪಾದಚಾರಿಗಳ ಮೇಲೆ ಬುಲೇರೋ ಕಾರು ಹಾಯ್ದು ಮೂವರು ಮಂದಿ ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಹುಕ್ಕೇರಿ ತಾಲ್ಲೂಕಿನ ಗುಡಸ ಗ್ರಾಮದಲ್ಲಿ ಇಂದು ನಡೆದಿದೆ.
ವೇಗವಾಗಿ ಹೋರಟ್ಟಿದ್ದ ಬುಲೋರ್ ಕಾರು ಪಾದಚಾರಿಗಳ ಮೇಲೆ ಎರಗಿದ್ದ ಪರಿಣಾಮ ಮೂವರು ಸಾವಿಗಿಡಾಗಿದ್ದಾರೆ .ಮೃತಪಟ್ಟವರು ಇಬ್ಬರೂ ಮಹಿಳೆಯರಾಗಿದ್ದು,ಈ ಬುಲೇರೋ ಕಾರು ಓರ್ವ ಮಹಿಳೆಯನ್ನು ಒಂದು ಕಿ.ಮಿ.ವರೆಗೆ ದೂರ ಎಳೆದುಕೊಂಡು ಹೋಗಿದೆ ಎಂದು ಹೇಳಲಾಗುತ್ತಿದೆ.
ಬುಲೇರೋ ಕಾರು ನೊಂದಣಿ ಸಂಖ್ಯೆ ka22 104 ಆಗಿದೆ. ಸ್ಥಳಕ್ಕೆ ಹುಕ್ಕೇರಿ ಪೋಲೀಸರು ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಮೃತಪಟ್ಟವರ,ಮತ್ತು ಗಾಯಾಳುಗಳ ಹೆಸರು ಇನ್ನೂ ಗೊತ್ತಾಗಿಲ್ಲ.ಹುಕ್ಕೇರಿ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ .