ಗಡಿ ಗ್ರಾಮ ಕೊಟ್ಟಲಗಿಯಲ್ಲಿ 50 ಜನರ ಕೊರೊನ ಕಾವಲು ಪಡೆ ರಚನೆ 

ಕೊಟ್ಟಲಗಿ : ತಾಲೂಕಿನ ಗಡಿ ಗ್ರಾಮವಾದ ಕೊಟ್ಟಲಗಿಯಲ್ಲಿ  ಕೊರೊನ ಹರಡದಂತೆ ತಡೆಗಟ್ಟುವ ನಿಟ್ಟನಲ್ಲಿ ಅಥಣಿ ತಾಪ ಕಾನಿ ಅಧಿಕಾರಿ ರವಿ  ಬಂಗಾರೆಪ್ಪನವರ ಸಮ್ಮುಖದಲ್ಲಿ ಸೊಮವಾರ 50 ಜನರ ಸ್ವಯಂ ಸೇವಕರ ಕಾವಲು ಪಡೆ ರಚನೆ ಮಾಡಲಾಯಿತು.
 ಕೊಟ್ಟಲಗಿ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  50 ಜನರ ಜನರ ಸ್ವಯಂ ಸೇವಕರ ಕಾವಲು ಪಡೆ ರಚನೆ ಮಾಡಿ  ಸ್ವಯಂ ಸೇವಕರನ್ನು ಉದ್ದೇಶಿಸಿ   ಮಾತನಾಡಿದ  ರವಿ ಬಂಗಾರಪ್ಪನವರ ಗಡಿ ಭಾಗದ ಪ್ರತಿ ಗ್ರಾಮಗಳಲ್ಲಿ 50  ಯುವ ಜನರ ಕಾವಲು ಪಡೆ ರಚಿಸಲಾಗಿದೆ. ಗಡಿ ಭಾಗದ ಅನಂತಪುರ , ಮದಭಾವಿ , ಜಕ್ಕಾರಟ್ಟಿ , ಶಿರೂರ , ಅರಳಿಹಟ್ಟಿ , ಖಿಳೆಗಾಂವ , ಮಲಾಬಾದ , ಬಳ್ಳಿಗೇರಿ ಗ್ರಾಮಗಳ ಮಹಾರಾಷ್ಟ್ರ ಸರಹದ್ದಿನಲ್ಲಿ ಕಾರ್ಯ ನಿರ್ವಹಿಸಲು 50 ಯುವ ಜನರ ಕಾವಲು  ಪಡೆರಚಿಸಲಾಗಿದೆ.  
ಮಹಾರಾಷ್ಟ್ರದಿಂದ ಯಾವೊಬ್ಬ ವ್ಯಕ್ತಿಯೂ ರಾಜ್ಯದ ಗಡಿ ಗ್ರಾಮಗಳಿಗೆ ನುಸುಳದ ಹಾಗೆ ಕಾರ್ಯನಿರ್ವಹಿಸಬೇಕು.ಮಹಾರಾಷ್ಟ್ರದಲ್ಲಿ ಕರೊನಾ ವೈರಸ್ ಶಂಕಿತರ ಸಂಖ್ಯೆ ಹೆಚ್ಚಾಗಿದ್ದು , ಹೀಗಾಗಿ , ರಾಜ್ಯದ ಗಡಿ ಗ್ರಾಮಕ್ಕೆ ಬರುವ ಮುಖ್ಯ ರಸ್ತೆಗಳನ್ನು ಹೊರತು ಪಡಿಸಿ , ಇನ್ನುಳಿದ ಒಳ ರಸ್ತೆಗಳನ್ನೆಲ್ಲ ಬಂದ್ ಮಾಡಬೇಕು , ಇಲ್ಲಿಯ ಯಾವೊಬ್ಬ ವ್ಯಕ್ತಿಯೂ ಮಹಾರಾಷ್ಟ್ರಕ್ಕೆ ಹೋಗದ ಹಾಗೆ ನೋಡಿಕೊಳ್ಳಬೇಕು. 4 ರಿಂದ 5 ಜನಸೇವಕರು ಸೇರಿಕೊಂಡು ತಮ್ಮ ಅಕ್ಕಪಕ್ಕದ ಹಾಗೂ ವಿವಿಧ ಓಣಿಯಲ್ಲಿ ಬರುವ ಹೊಸದಾಗಿ ಆಗಮಿಸಿರುವ ಪ್ರತಿಯೊಬ್ಬರ ಮಾಹಿತಿಯನ್ನು ನೀಡಿ ಅವರನ್ನು ಪರೀಕ್ಷೆಗೊಳಪಡಿಸಬೇಕು ವಿಶೇಷವಾಗಿ ರೋಗದ ಲಕ್ಷಣಗಳು ಇರುವಂತಹ ವ್ಯಕ್ತಿಗಳು ಕಂಡುಬಂದಲ್ಲಿ ಇಲಾಖೆಯ ಗಮನಕ್ಕೆ ತರಬೇಕು ಪ್ರಮುಖವಾಗಿ ರಸ್ತೆಗಳಲ್ಲಿರುವ ಚೆಕ್ ಪೋಸ್ಟ್ ಗಳನ್ನು ತಪ್ಪಿಸುವ ದೃಷ್ಟಿಯಿಂದ ಒಳದಾರಿಗಳಲ್ಲಿ ನುಸುಳಿ ಬರುತ್ತಿದ್ದಾರೆ. ಅಂಥವರ ಕುರಿತು ಜಾಗೃತಿ  ವಹಿಸಬೇಕು ಸರ್ಕಾರದ ನಿರ್ದೇಶನದಂತೆ ನಡೆದುಕೊಂಡು ರೋಗ ಬರದಂತೆ, ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಐಗಳಿ ಪಿಎಸ್ಐ ಕೆ ಎಸ್ ಕೊಚೇರಿ ಮಾತನಾಡಿ  ಕರೊನಾ ಹರಡುವಿಕೆ ತಡೆಯಲು ಲಾಕ್‌ಡೌನ್ ಆದೇಶವಿದ್ದು , ಯಾರೂ ಮನೆ ಬಿಟ್ಟು ಹೊರಗೆ ಬರದೇ ಸುರಕ್ಷಿತವಾಗಿರಬೇಕು. ಗುಂಪುಗುಂಪಾಗಿ ಸೇರಬೇಡಿ ಕಾನೂನು ಕೈಗೆ ತೆಗೆದುಕೊಳ್ಳುವ
ವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು . ಸಾಮರಸ್ಯದಿಂದ ಸ್ವಯಂ  ಪ್ರೇರಣೆ ಯಿಂದ ರೋಗ ನಿವಾರಣೆಗೆ ಸಹಕರಿಸಬೇಕು ಎಂದು ಹೇಳಿದರು 
ಗ್ರಾಮದ ಗಣ್ಯರಾದ ಗುರಪ್ಪ ಸತ್ತಿ , ಸಿದ್ದರಾಯ ಯಲ್ಲಡಗಿ, ವೈದ್ಯರಾದ ಡಾ ರವಿ ಸಂಖ,ಜಗದೀಶ ಖೊಬ್ರಿ, ಡಾ ಆರ್ ಎಸ ದೊಡ್ಡನಿಂಗಪ್ಪಗೋಳ ಕೊರೊನ ಜಾಗ್ರತಿ ಕುರಿತು ಮಾತನಾಡಿದರು.
ಪಿಡಿಓ ಡಾ.ಕಾಡೇಶ ಅಡಹಳ್ಳಿ ಸೇವಕರು ನಿರ್ವಹಿಸಬೇಕಾದ ಕರ್ತವ್ಯಗಳು ಕುರಿತು  ಮಾತನಾಡಿದರು .ಜೊತೆಗೆ ದವಸ ಧಾನ್ಯಗಳು, ಕಾಯಿಪಲ್ಯೆ,ದಿನಸಿ ಅಂಗಡಿ ವ್ಯಾಪಾರಸ್ತರು ಹೆಚ್ಚಿನ ಬೆಲೆ ಪಡೆಯದೇ ನಿಗದಿತ ದರ ಪಡೆಯಬೇಕು.ಹೆಚ್ಚಿನ ದರ ಪಡೆಯುವವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಹೇಳಿದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ  ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಗಣ್ಯರಾದ ಗುರು ಮುಗ್ಹನವರ, ಶಿವು ತೇಲಿ, ರಘುನಾಥ ದೊಡ್ಡನಿಂಗಪ್ಪಗೋಳ,  ಅಶೋಕ ಸತ್ತಿಗೇರಿ, ಸಣ್ಣಪ್ಪ ದಾನಪ್ಪಗೋಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಎಲ್ಲ ಸದಸ್ಯರು ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು.
Share
WhatsApp
Follow by Email