ಬ್ರೇಕಿಂಗ್ ನ್ಯೂಸ್ ಕೊರೋನಾ ಸೈನಿಕರಿಗೆ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಅಭಿನಂದನಾ ಪತ್ರ ನೀಡಿದ : ಶಾಸಕ ಬಾಲಚಂದ್ರ ಜಾರಕಿಹೋಳಿ 12/04/202012/04/2020 admin ಹಳ್ಳೂರ : ಕೊರೋನಾ ಮಹಾಮಾರಿ ವಿರುದ್ಧ ಹಗಲಿರುಳು ಜೀವದ ಹಂಗನ್ನು ತೊರೆದು ದೇಶ ಸೇವೆಯೇ ಈಶ ಸೇವೆಯೆಂದು ಶ್ರಮಿಸುತ್ತಿರುವ ತಮ್ಮ ಸೇವೆ ಸಹನೆ ಸಾಹಸಗಳಿಗೆ ಬೆಲೆ ಕಟ್ಟಲಾಗದು.ತಮ್ಮ ಕುಟುಂಬ ಜೀವದ ಹಂಗು ಬಿಟ್ಟು ಶ್ರಮಿಸುತ್ತಿರುವ ಕೊರೋನಾ ಸೈನಿಕರು, ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಕೆ.ಎಮ್.ಎಫ್. ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ನಳಿನ್ ಕುಮಾರ ಕಟೀಲ್ ಲೋಕಸಭಾ ಸದಸ್ಯರು ಹಾಗೂ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರು ಅಭಿನಂದನಾ ಪತ್ರವನ್ನು ಹಳ್ಳೂರ ಗ್ರಾಮ ಪಂಚಾಯತ್ ತಲುಪಿಸಿದ್ದು ಇಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅ, ಹಣಮಂತ ತಾಳಿಕೋಟಿ ಯವರು ಕೊರೋನಾ ಸೈನಿಕರಿಗೆ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತರಿಗೆ ಅಭಿನಂದನಾ ಪತ್ರವನ್ನು ನೀಡಿದ ನಂತರ ಮಾತನಾಡಿ ಕೊರೋನಾ ರೋಗವು ನಮ್ಮ ಗ್ರಾಮದಲ್ಲಿ ಹರಡದಂತೆ ನಾವೆಲ್ಲರೂ ಕಾರ್ಯನಿರ್ವಹಿಸೋಣಾ ಜನರಿಗೆ ಮನೆ ಬಿಟ್ಟು ಹೊರಗೆ ಬರದಂತೆ ಜಾಗೃತಿ ನೀಡಿ ಮನೆಯಲ್ಲಿದ್ದು ಮನುಷ್ಯರ ಅಂತರ ಕಾಯ್ದು ಕೊಳ್ಳುವದೇ ಇದಕ್ಕೆ ಪರಿಹಾರ ಎಂದು ಸಾರ್ವಜನಿಕರಿಗೆ ತಿಳಿ ಹೇಳೋಣಾ ಎಂದರು. ಇದೆ ಸಂದರ್ಭದಲ್ಲಿ ಹಳ್ಳೂರ ಬಿಟ್ ಪೊಲೀಸ್ ಏನ್ ಎಸ್ ಒಡೆಯರ. ನಾಗಪ್ಪ ಆರೇರ. ಗಿರಮಲ್ಲ ಸಂತಿ.ಕೊರೋನಾ ಸೈನಿಕ ಹಾಗೂ ಸಂಗಪ್ಪ ಪಟ್ಟಣಶೆಟ್ಟಿ. ಕಿಶೋರ ಗಣಾಚಾರಿ. ಗಂಗಪ್ಪ ಡಬ್ಬಣ್ಣವರ ಮಹಾಂತೇಶ ಕುಂದರಗಿ. ಹಣಮಂತ ಹಡಪದ್, ಮುರಗೇಪ್ಪ ಮಾಲಗಾರ ಆಶಾ ಕಾರ್ಯಕರ್ತೆಯ ಮುಖಂಡ ವಿದ್ಯಾ ರಡರಟ್ಟಿ.ಅಂಗನವಾಡಿ ಕಾರ್ಯಕರ್ತೆ ಗಂಗು ಸಂತಿ. ಶಾಂತಾ ನೇಸೂರ. ಗೀತಾ ಹರಿಜನ. ಸುಜಾತಾ ಕೂಲಿಗೋಡ.ಗಂಗವ್ವ ಪಾಲಭಾಂವಿ ಸರೋಜಿನಿ ಮುಗಳಖೋಡ ಸೇರಿದಂತೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು Share