ರಾಯಬಾಗ :ಪಟ್ಟಣದಲ್ಲಿ ಜನರು ತಿರುಗಾಡದಂತೆ ಕಟ್ಟು ನಿಟ್ಟಾಗಿ ಕ್ರಮ

ರಾಯಬಾಗ : ಕೊರೋನಾ ವೈರಸ್ ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್‌ಡೌನ್ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಜನರು ತಿರುಗಾಡದಂತೆ ಕಟ್ಟು ನಿಟ್ಟಾಗಿ ಕ್ರಮ ಕೈಗೊಳ್ಳಲು ರವಿವಾರ ಪೋಲೀಸ್ ಅಧಿಕಾರಿಗಳು ರಾಯಬಾಗ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಡ್ರೋಣ್ ಕ್ಯಾಮರ್ ಬಿಟ್ಟು ನಿಗಾವಹಿಸಿದರು.
ಕೊರೋನಾ ಹಿನ್ನಲೆಯಲ್ಲಿ ಲಾಕ್‌ಡೌನ್ ಕಟ್ಟು ನಿಟ್ಟಾಗಿ ಜಾರಿಗೊಳಿಸಲು ಪಟ್ಟಣದ ಮುಖ್ಯರಸ್ತೆ ಹಾಗೂ ಮಾರುಕಟ್ಟೆ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆಗಳನ್ನು ಸಂಪೂರ್ಣವಾಗಿ ಬಂದಮಾಡಲಾಗಿದೆ ಆದರೂ ಜನರು ಅಲ್ಲಲ್ಲಿ ತಿರುಗಾಡುತ್ತಿರುವುದು ಗಮನಕ್ಕೆ ಬಂದಿದೆ ಹೀಗಾಗಿ ಪಟ್ಟಣದ ಪ್ರಮುಖ ಗಲ್ಲಿಗಳಲ್ಲಿ ಹಾಗೂ ಮಾರುಕಟ್ಟೆ ಸ್ಥಳಗಳಲ್ಲಿ ಡ್ರೋಣ ಕ್ಯಾಮರ್ ಬಿಟ್ಟು ಪರೀಕ್ಷೆ ನಡೆಯಿಸಿ ಪಟ್ಟಣದ ಜನರು ಮನೆಬಿಟ್ಟು ಅನಗತ್ಯವಾಗಿ ಬೈಕ್, ಗಾಡಿ ತೆಗೆದುಕೊಂಡು ಹೊರಗಡೆ ತಿರುಗಾಡಬಾರದು ಒಂದು ವೇಳೆ ಹೊರಗಡೆ ಬಂದರೆ ಅವರ ಬೈಕ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗುವುದೆಂದು ಹೇಳಿದರು.
ಅಲ್ಲದೆ ಕೊರೋನಾ ನಿಯಂತ್ರಣಕ್ಕೆ ಸಾರ್ವಜನಿಕರು ಕೂಡಾ ಲಾಕ್‌ಡೌನ್‌ವನ್ನು ಸಂಪೂರ್ಣವಾಗಿ ಪಾಲಿಸಿ ಪೋಲೀಸ್‌ರ ಜೊತೆ ಸಹಕಾರ ಮಾಡಿ ಎಲ್ಲರೂ ಕೊರೋನಾ ಮಹಾಮಾರಿ ರೋಗವನ್ನು ದೇಶದಿಂದ ಒಡಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಪಿಐ ಪವಾರ, ಪಿಎಸ್‌ಐ ಗಜಾನನ ನಾಯಿಕ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಸ್.ಆರ್.ಮಾಂಗ, ಎಸ್.ವಾಯ್.ತಳವಾರ ಉಪಸ್ಥಿತರಿದ್ದರು.
Share
WhatsApp
Follow by Email