ಬ್ರೇಕಿಂಗ್ ನ್ಯೂಸ್ ಕರೊನಾ ಹಾವಳಿ ಅಧಿಕವಾಗಿದ್ದು. ಪ್ರತಿಯೊಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಿ : ಪಿಎಸ್ಐ ಕೆ. ಎಸ್. ಕೋಚರಿ 20/04/202020/04/20201 min read admin ಅರಟಾಳ ; ಕರೊನಾ ಹಾವಳಿ ಅಧಿಕವಾಗಿದ್ದು. ಪ್ರತಿಯೊಬ್ಬರು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು. ಬೇರೆ ಊರುಗಳಿಂದ ಬಂದು ತಿರುಗುವುದು, ಅಂತರ ಕಾಯ್ದುಕೊಳ್ಳದಿರುವುದು, ಗುಂಪು ಗುಂಪಾಗಿ ನಿಲ್ಲುವುದು ಮಾಡಬಾರದು. ಯಾರಾದರು ಹೊಸಬರು ಗ್ರಾಮಕ್ಕೆ ಬಂದರೆ ತಕ್ಷಣ ಆರೋಗ್ಯ ಮತ್ತು ಗ್ರಾಪಂ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಐಗಳಿ ಪೋಲಿಸ್ ಠಾಣೆ ಪಿಎಸ್ಐ ಕೆ. ಎಸ್. ಕೋಚರಿ ಹೇಳಿದರು.ಸೋಮವಾರ ಅವರು ಸಮೀಪದ ಹಾಲಳ್ಳಿ ಗ್ರಾಮಕ್ಕೆ ಜಮಖಂಡಿ ತಾಲೂಕಿನ ಕೊಣ್ಣುರ ಗ್ರಾಮದಿಂದ ಬಂದ ಆರ್ಎಮ್ಪಿ ಡಾಕ್ಟರ್ ಅವರ ಮನೆಗೆ ಭೇಟ್ಟಿ ನೀಡಿ ಮಾತನಾಡಿ, ಕರೊನಾ ವೈರಸ್ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸರ್ಕಾರ ಮುಂಜಾಗೃತವಾಗಿ ಎಚ್ಚರಿಕೆ ವಹಿಸಿದೆ. ಆದರು ಜನರು ಹೊರಗಡೆ ತಿರುಗುವುದು ಬಿಡುತ್ತಿಲ್ಲ. ಬೇರೆಡೆಯಿಂದ ಬಂದವರು ಹದಿನಾಲ್ಕು ದಿನಗಳ ಕಾಲ ಎಲ್ಲರಿಂದ ದೂರವಿರಬೇಕು. ಅಂಗನವಾಡಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ, ಪಂಚಾಯತ ಇಲಾಖೆಯ ಎಲ್ಲರು ನಿಮ್ಮ ಸಲುವಾಗಿ ಶ್ರಮಿಸುತ್ತಿದ್ದಾರೆ. ಅವರು ಹೇಳಿದಂತೆ ಎಲ್ಲರು ಮನೆಯಲ್ಲಿರಿ. ಸಾಮಾಜಿಕ ಅಂತರ ಅತಿ ಕಾಯ್ದುಕೊಳ್ಳಿ. ಮನೆಯಲ್ಲೇ ಇದ್ದು ಕರೊನಾ ವೈರಸ್ ಸೋಲಿಸಬೇಕಾಗಿದೆ. ನೀವು ಮನೆಯಲ್ಲಿ ಕಾಲ ಕಳೆಯುವುದು ದೇಶಕ್ಕೆ ನೀವು ಮಾಡುವ ಉಪಕಾರ ಎಂದರು.ಗ್ರಾಪA ಪಿಡಿಒ ಎ. ಜಿ. ಎಡಕೆ, ಗ್ರಾಪಂ ಉಪಾಧ್ಯಕ್ಷ ಶಿವಾನಂದ ಹೊನಗೌಡ, ರಾಯಪ್ಪ ಗೌಡಪನ್ನವರ, ಶಿವಲಿಂಗ ಬೇವನೂರ, ಚಂದ್ರಪ್ಪ ನಾಟೀಕರ, ಪೋಲಿಸ್ ಸಿಬ್ಬಂದಿ ಆರ್. ಎಚ್. ಪಾಟೀಲ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು. Share