ಪ್ರಧಾನಮಂತ್ರಿ ಪರಿಹಾರ ನಿಧಿಗೆ : ಸಣ್ಣ ಪುಸ್ತಕ ವ್ಯಾಪಾರಿ ಅಂಧನಿoದ 1.25 ಲಕ್ಷ ದೇಣಿಗೆ



ರಬಕವಿ : ಹುಟ್ಟಿನಿಂದ ಅಂಧವಾದರು ಒಬ್ಬ ಪುಸ್ತಕ ವ್ಯಾಪಾರಿ ಜವಾಹರಲಾಲ ಡಾಗಾ ತಮ್ಮ ಸಣ್ಣ ಪುಸ್ತಕ ವ್ಯಾಪಾರದಿಂದ ಬಂಧ ಲಾಭದಲ್ಲಿ ಈ ಹೇಮ್ಮಾರಿ ಕರೋನಾ ರೋಗಕ್ಕೆ ಸ್ಥಳಿಯ ತಹಶೀಲ್ದಾರ ಕಛೇರಿಯಲ್ಲಿ ಶಾಸಕ ಸಿದ್ದು ಸವದಿ ಹಾಗೂ ತಹಶೀಲ್ದಾರ ಪ್ರಶಾಂತ ಚನಗೊಂಡ ನೇತೃತ್ವದಲ್ಲಿ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 1.25 ಲಕ್ಷ ರೂಗಳ ಚೆಕ್ಕ್ ವಿತರಿಸುವ ಮೂಲಕ ಮಾದರಿಯಾಗಿದ್ದಾರೆ.
ಇದೇ ಸಂರ್ದಭದಲ್ಲಿ ಅಂಧನಾದ ಜವಾಹರಲಾಲ್ ಡಾಗಾ ಅವರ ನಾನು ಪುಸ್ತಕ ವ್ಯಾಪಾರದಲ್ಲಿ ದುಡಿದ ಶ್ರಮದ ಹಣದಲ್ಲಿ ನನ್ನ ಕೈಲಾದಷ್ಟು ನಮ್ಮ ದೇಶಕ್ಕಾಗಿ ಸಹಾಯ ಮಾಡಿದ್ದೇನೆ ಎಂದು ಮನದಾಳದ ಮಾತನ್ನು ಹೇಳಿಕೊಂಡರು.
ಇದೇ ಸಂರ್ದಭದಲ್ಲಿ ಶಾಸಕ ಸಿದ್ದು ಸವದಿ, ತಹಶೀಲ್ಧಾರ ಪ್ರಶಾಂತ ಚನಗೊಂಡ, ನಗರಸಭೆ ಪೌರಾಯುಕ್ತರಾದ ಜಾಧವ, ಯೂನುಸ್ ಚೌಗಲಾ, ರಾಹುಲ್ ಡಾಗಾ ಮತ್ತಿತರಿದ್ದರು
Share
WhatsApp
Follow by Email