ಬ್ರೇಕಿಂಗ್ ನ್ಯೂಸ್ ಕ್ಷೌರಿಕ ಸಮಾಜಕ್ಕೆ ವಿಶೇಷ ಪ್ಯಾಕೆಜ್ ನೀಡುವಂತೆ ರಾಯಬಾಗ ತಹಶೀಲ್ದಾರ ಚಂದ್ರಕಾಂತ ಭಜಂತ್ರಿ ಅವರಿಗೆ ಮನವಿ ಸಲ್ಲಿಕೆ 25/04/202025/04/2020 admin ರಾಯಬಾಗ : ಕೊವಿಡ್19 ವೈರಸ್ದಿಂದ ಲಾಕ್ಡೌನದಿಂದ ಕ್ಷೌರಿಕ ವೃತ್ತಿಯನ್ನೆ ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದ ಹಡಪದ ಅಪ್ಪಣ್ಣ ಸಮಾಜ ತಿವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದೆ ಈ ಸಮಾಜಕ್ಕೆ ವಿಶೇಷ ಪ್ಯಾಕೆಜ್ ಮೂಲಕ ಆರ್ಥಿಕವಾಗಿ ಸಹಾಯ ಮಾಡಬೇಕೆಂದು ಆಗ್ರಹಿಸಿ ಶನಿವಾರ ತಾಲೂಕಾ ಹಡಪದ ಅಪ್ಪಣ್ಣ ನಾವ್ಹಿ ಸಮಾಜ ಸೇವಾ ಸಂಘದ ವತಿಯಿಂದ ರಾಯಬಾಗ ತಹಶೀಲ್ದಾರ ಚಂದ್ರಕಾಂತ ಭಜಂತ್ರಿ ಅವರಿಗೆ ಮನವಿ ಸಲ್ಲಿಸಿದರು.ದೇಶಾದ್ಯಂತ ಕೊರೋನಾ ಲಾಕ್ಡೌನನಿಂದ ಸಂಕಷ್ಟದಲ್ಲಿರುವ ಕ್ಷೌರಿಕ ಕುಲಕಸಬನ್ನು ಹೊಂದಿರುವ ಹಡಪದ ಅಪ್ಪಣ್ಣ ಸಮಾಜಕ್ಕೆ ಈಗ ಕ್ಷೌರಿಕ ದುಡಿಮೆ ಇಲ್ಲದೆ ಒಂದು ದಿನದ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಸರಕಾರ ಕಾರ್ಮಿಕ ಇಲಾಖೆಯಿಂದ ನೋಂದಾಯಿತ ಕಾರ್ಮಿಕರಿಗೆ ವಿಶೇಷ ಪ್ಯಾಕೆಜ್ ಘೋಷಣೆ ಮಾಡಿದೆ ಕ್ಷೌರಿಕ ವೃತ್ತಿಯಲ್ಲಿ ದುಡಿಯುತ್ತಿರುವ ಕಾರ್ಮಿಕರು ಯಾರು ಕೂಡಾ ಕಾರ್ಮಿಕ ಇಲಾಖೆಯಲ್ಲಿ ನೊಂದಣಿ ಮಾಡಿಕೊಂಡಿರುವುದಿಲ್ಲಾ ಹೀಗಾಗಿ ಸರಕಾರದವರು ತಿವ್ರ ಸಂಕಷ್ಟದಲ್ಲಿರುವ ಈ ಕ್ಷೌರಿಕ ಸಮಾಜಕ್ಕೆ ವಿಶೇಷ ಪ್ಯಾಕೆಜ್ ಮುಖಾಂತರ ಆರ್ಥಿಕವಾಗಿ ಸಹಾಯ ಮಾಡಬೇಕೆಂಬ ವಿಷಯನ್ನೋಳಗೊಂಡ ಮನವಿ ಪತ್ರವನ್ನು ತಹಶೀಲ್ದಾರರಿಗೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಹಡಪದ ಅಪ್ಪಣ್ಣ ನಾವ್ಹಿ ಸಮಾಜ ಸೇವಾ ಸಂಘ ಅಧ್ಯಕ್ಷ ರವಿ ನಾವ್ಹಿ, ಉಪಾಧ್ಯಕ್ಷ ಸುನೀಲ ನಾವ್ಹಿ, ಪ.ಪಂ ಮಾಜಿ ಅಧ್ಯಕ್ಷ ಚಂದ್ರಕಾಂತ ಕೋರೆ, ಆನಂದ ನಾವ್ಹಿ ಹಾಜರಿದ್ದರು. Share