
ಅವರು ಮಂಗಳವಾರದAದು ಗ್ರಾಪಂ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಶ್ರೀ ಜಗದ್ಗುರು ಆದಿ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದದವರಲ್ಲಿ ಜಗದ್ಗುರು ಶಂಕರಾಚಾರ್ಯರು ಒಬ್ಬರು. ಶರಣರ, ಸಂತರ ದಾರಿಯಲ್ಲಿ ನಡೆದರೆ ಜೀವನ ಸುಖವಾಗಿರುತ್ತದೆ ಎಂದರು.
ಕೆವಿಜಿಬಿ ಬ್ಯಾಂಕ್ ಸಿಬ್ಬಂದಿ ಸಂತೋಷ ಪೂಜಾರಿ ಮತ್ತು ಗಣಪತಿ ಭಂಡಾರಿ ಭಾವಚಿತ್ರಕ್ಕೆ ಪೂಜೆಸಲ್ಲಿಸಿದರು. ಗ್ರಾಪಂ ಕಾರ್ಯದರ್ಶಿ ಜಿತೇಂದ್ರ ಗದಾಡೆ, ಪಿಕೆಪಿಎಸ್ ಮಾಜಿ ಅಧ್ಯಕ್ಷ ರಾಮಪ್ಪ ಪೂಜಾರಿ, ಮಾಳಪ್ಪ ಕಾಂಬಳೆ, ಈಶ್ವರ ಬಡಿಗೇರ, ಮಾಳಪ್ಪ ಮಾದರ, ವಾನಂದ ಖ್ಯಾಡಿ, ಮಹಾದೇವ ಮಾದರ ಇದ್ದರು.