ಬ್ರೇಕಿಂಗ್ ನ್ಯೂಸ್ ಕೋರೋನಾ ಲಾಕ್‌ಡೌನ್ ಪರಿಣಾಮ ಬಾಡಿಗೆ ಮಳಿಗೆಗಳಲ್ಲಿನ ವ್ಯವಹಾರ ಸ್ಥಗಿತ | ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ ವ್ಯಾಪಾರಸ್ಥರು ? ಬಾಡಿಗೆ ಮನ್ನಾ ಮಾಡಲು ಸರಕಾರಕ್ಕೆ ಪತ್ರ! 16/05/202016/05/20201 min read admin ಕರೋನಾ ಮಹಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಜಾರಿಗೆ ತಂದಿರುವ ಲಾಕ್‌ಡೌನ್ ಪರಿಣಾಮದಿಂದಾಗಿ ರಾಜ್ಯಾದ್ಯಂತ ವ್ಯಾಪಾರ, ವಹಿವಾಟುಗಳು ಸ್ಥಗಿತಗೊಂಡಿರುತ್ತವೆ. ಇದರಿಂದಾಗಿ ಸ್ಥಳೀಯ ಸಂಸ್ಥೆಗಳು/ ಪ್ರಾಧಿಕಾರಿಗಳಿಂದ ವ್ಯಾಪಾರಿ ಮಳಿಗೆಗಳನ್ನು ಮಾಸಿಕ ಬಾಡಿಗೆ ಪಡೆದು ಪಡೆದು ವ್ಯಾಪಾರ/ ಉದ್ಯೋಗ/ ನಡೆಸುತ್ತಿರುವ ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದು ಲಾಕ್‌ಡೌನ್ ಅವಧಿಯಲ್ಲಿನ ಮಳಿಗೆಗಳ ಬಾಡಿಗೆಯನ್ನು ಸಂಪೂರ್ಣ ಮನ್ನಾ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗು ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ವಿನಂತಿಸಲಾಗಿದೆ. ರಾಜ್ಯಾದ್ಯಂತ ಇರುವ ಮಹಾನಗರ ಪಾಲಿಕೆ/ ನಗರಪಾಲಿಕೆ/ ಪುರಸಭೆ/ ತಾಲೂಕ ಪಂಚಾಯತ/ ಪಟ್ಟಣ ಪಂಚಾಯತ ವ್ಯಾಪ್ತಿಗಳಲ್ಲಿ ಅಲ್ಲದೇ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಇಲಾಖೆಯಿಂದ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳಲ್ಲಿ ನಿರ್ಮಿಸಲಾಗಿರುವ ವ್ಯಾಪಾರ ಮಳಿಗೆ/ ವಾಣಿಜ್ಯ ಸಂಕೀರ್ಣಗಳಲ್ಲಿ ಸಾಕಷ್ಟು ವ್ಯಾಪಾರಸ್ಥರು ಇಂಥಹ ಮಳಿಗೆಗಳನ್ನು ಹರಾಜು ಪ್ರಕಿಯೆ ಮೂಲಕ ಬಾಡಿಗೆ ಪಡೆದುಕೊಂಡು ವ್ಯಾಪಾರ/ ವಹಿವಾಟು ನಡೆಸುತ್ತಿದ್ದಾರೆ ಈ ವ್ಯಾಪಾರಸ್ಥರು ಪ್ರತಿ ತಿಂಗಳು ತಪ್ಪದೇ ಸಂಬAಧಿಸಿದ ಪ್ರಾಧಿಕಾರಿಗಳಿಗೆ ಬಾಡಿಗೆ ಹಣವನ್ನು ಪಾವತಿಸುತ್ತಿದ್ದಾರೆ. ದೇಶಾದ್ಯಂತ ಲಾಕ್ಡೌನ್ ಪದ್ಧತಿ ಜಾರಿಗೆ ತರುವುದಕ್ಕಿಂತಲೂ ಮುಂಚಿನಿAದಲೇ ಕರೋನಾ ಮಾಹಾಮಾರಿಯಿಂದ ವ್ಯಾಪಾರು/ ವಹಿವಾಟುಗಳು ಸಂಪೂರ್ಣವಾಗಿ ಸ್ಥಗಿತಗೊಂಡು ಈ ಮಳಿಗೆಗಳಲ್ಲಿ ವ್ಯಾಪಾರ ನಡೆಸುತ್ತಿರುವ ಅನೇಕ ಕುಟುಂಬಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆರ್ಥಿಕ ಹಾನಿಯನ್ನು ಅನುಭವಿಸುತ್ತಿವೆ. ಇದು ಅಲ್ಲದೆ ಈ ಕುಟುಂಬಗಳಿಗೆ ಸರಕಾರದಿಂದ ನಿರೀಕ್ಷಿಸಿದ ಯಾವುದೇ ಪರಿಹಾರ ಇದುವರೆಗೂ ದೊರಕಿರುವುದಿಲ್ಲಾ. ಈ ಎಲ್ಲಾ ಕುಟುಂಬಗಳ ಆರ್ಥಿಕ ಹಿತದೃಷ್ಠಿಯಿಂದ ಇವರು ಬಾಡಿಗೆ ಪಡೆದುಕೊಂಡು ವಹಿವಾಟು ನಡೆಸುತ್ತಿರುವ ವಾಣಿಜ್ಯ ಮಳಿಗೆಗಳ ಬಾಡಿಗೆಯನ್ನು ಸರಕಾರವೇ ಭರಿಸುವುದಾಗಬೇಕು, ಇಲ್ಲವೇ ಮಾರ್ಚ-ಏಪ್ರಿಲ್-ಮೇ ತಿಂಗಳ ಸಂಪೂರ್ಣ ಬಾಡಿಗೆಯನ್ನು ಮನ್ನಾ ಮಾಡುವುದಾಗಬೇಕು. ಈ ವ್ಯಾಪಾರಸ್ಥರು ಪುನಃ ವ್ಯಾಪಾರ/ ಉದ್ಯೋಗಗಳನ್ನು ಪ್ರಾರಂಭಿಸಲು ಇವರಿಗೆ ಸರಕಾರದಿಂದ ಬ್ಯಾಂಕಗಳ ಮುಖಾಂತರವಾಗಿ ಹಣಕಾಸು ಸಹಾಯ-ಸಾಲ ಕೂಡಾ ದೊರಕಿಸುವಂತೆ ಈ ಪತ್ರದಲ್ಲಿ ವಿನಂತಿಸಲಾಗಿದೆ. Share