ಬ್ರೇಕಿಂಗ್ ನ್ಯೂಸ್ ಮುಗಳಖೋಡದಲ್ಲಿ ಗರ್ಭಿಣಿಗೆ ಹೋಮ್ ಕ್ವಾರಂಟೈನ್ 22/05/202022/05/20201 min read admin ಮುಗಳಖೋಡ: ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಾರಾಷ್ಟçದ ಮಿರಜದಿಂದ ಆಗಮಿಸಿದ ಇಬ್ಬರನ್ನು ಗುರುವಾರ ಕ್ವಾರಂಟೈನ್ ಮಾಡಲಾಯಿತು. ಇವರು ಬುಧವಾರ 20 ರಂದು ಮಿರಜದಿಂದ ಮುಗಳಖೋಡ ಪಟ್ಟಣಕ್ಕೆ ಆಗಮಿಸಿ ತಮ್ಮ ಮನೆಯಲ್ಲಿದ್ದರು.ಗುರುವಾರ ಆಶಾಕಾರ್ಯಕರ್ತೆಯರು ಮನೆ ಮನೆ ತೆರಳಿ ಪರಿಶೀಲಿಸುವಾಗ ಪತಿ-ಪತ್ನಿ ಮಿರಜದ ಪಲ್ಸ್ದಿಂದ ಬಂದಿದ್ದರು. ಪತ್ನಿ ಗರ್ಭಿಣಿಯಾಗಿದ್ದು, ಈ ವಿಷಯ ಪುರಸಭೆ ಅಧಿಕಾರಿಗಳು ಆಶಾಕಾರ್ಯಕರ್ತೆಯರಿಂದ ತಿಳಿದು ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಅವರನ್ನು ಕ್ವಾಂರಟೈನ್ ಮಾಡಿದರು. ನಂತರ ಪುರಸಭೆ ಪೌರಕಾರ್ಮಿಕರು ಪ್ರೌಢಶಾಲೆಯ ಸುತ್ತಮುತ್ತಲೂ ಕ್ರೀಮಿನಾಶಕ ಔಷಧಿ, ಡಿಡಿಟಿ ಪೌಡರ ಸಿಂಪಡಿಸಿ ಸ್ವಚ್ಚತಾ ಕಾರ್ಯ ಮಾಡಿದರು.ಈ ಕಾಂರoಟೈನ್ ಮಾಡಿರುವ ಸರ್ಕಾರಿ ಪ್ರೌಢಶಾಲೆಯ ಅಕ್ಕಪಕ್ಕದಲ್ಲಿ ಕೆವಿಜಿ ಬ್ಯಾಂಕ, ಪುರಸಭೆ ಕಾರ್ಯಾಲಯ, ಅಟಲಜೀ ಜನಸ್ನೇಹಿ ಕೇಂದ್ರವಿದ್ದು, ತಮ್ಮ ಕೆಲಸ ಕಾರ್ಯಗಳಿಗೆ ತೆರಳಲು ಪಟ್ಟಣದ ಜನರು ಆತಂಕಗೊoಡಿದ್ದಾರೆ.ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಜಿ.ಬಿ.ಡಂಬಳ, ಆರೋಗ್ಯ ಸಿಬ್ಬಂದಿಯವರು, ಪೋಲಿಸ್ ಇಲಾಖೆಯ ಎಎಸ್‌ಐ, ಐ.ಎಮ್. ದುಂದುಮನಿ, ಪಿ.ಕೆ.ದೋಣಿ, ಎಲ್.ಡಿ.ಸಡ್ಡಿ, ಹಾಗೂ ಪುರಸಭೆ ಸಿಬ್ಬಂದಿ ಇದ್ದರು Share