ಕಲಾವಿದ ವಿನಾಯಕ ಚಿಕ್ಕೋಡಿಗೆ ಸನ್ಮಾನ.

ಕಲಾವಿದ ವಿನಾಯಕ ಚಿಕ್ಕೋಡಿಗೆ ಸನ್ಮಾನ.

ಮಹಾಲಿಂಗಪುರ : ಕಲಾ ಸಂಭ್ರಮ ಸಂಸ್ಥೆ ವತಿಯಿಂದ ಆನ್ಲೈನ್ ವಾಟರ್ ಕಲರ್ ಕಾಂಪಿಟೇಶನ್ ವಿಶ್ವದಾಖಲೆಯ 9 ರಲ್ಲಿ ಸಿಲ್ವರ್ ಕೆಟಗರಿ ಮತ್ತು ರಾಜ್ಯ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಯುವ ಕಲಾವಿದ ವಿನಾಯಕ ಚಿಕ್ಕೋಡಿಯವರ ಸಾಧನೆ ತುಂಬಾ ದೊಡ್ಡದು ನಾಡಿನ ಯುವ ಕಲಾವಿದರ ಗುಂಪಿನಲ್ಲಿ ಇವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಸಾಧನೆಯ ದೊಡ್ಡ ಮೆಟ್ಟಿಲು ಏರಿದ್ದಾನೆ ಎಂದು ಚಿತ್ರಕಲಾ ಶಿಕ್ಷಕ ಬಾಲಕೃಷ್ಣ ಚೋಪಡೆ ಹೇಳಿದರು.
ಸ್ಥಳೀಯ ಶ್ರೀ ಗಿರಿಮಲ್ಲೇಶ್ವರ ಆಶ್ರಮದಲ್ಲಿ ಕಲಾ ಸಂಭ್ರಮ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ವಿನಾಯಕ ಚಿಕ್ಕೋಡಿ ಇವರನ್ನು ಸನ್ಮಾನಿಸಿ ಮಾತನಾಡಿದ ಅವರು, ಅತೀ ಚಿಕ್ಕ ವಯಸ್ಸಿನಲ್ಲಿ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪಡೆದು ವಿನಾಯಕ ಚಿಕ್ಕೋಡಿ ನಮ್ಮ ರಾಜ್ಯದ ಕೀರ್ತಿ ಹೆಚ್ಚಿಸಿದ್ದಾನೆ. ಇವರು ಬಿಡಿಸಿದ ಸೂಲಗಿತ್ತಿ ನರಸಮ್ಮ ಅವರ ಭಾವಚಿತ್ರ ವಿಶ್ವದಾಖಲೆಗೆ 90 ನೇ ಚಿತ್ರವಾಗಿ ಆಯ್ಕೆಯಾಗಿ ಪ್ರಶಸ್ತಿ ಮುಡಿಗೇರಿದೆ. ನಾಡಿನ ಹೆಸರಾಂತ ಹಿರಿಯ ಸಾಹಿತಿಗಳು, ಕಲಾವಿದರು, ರಾಷ್ಟ್ರೀಯ ನಾಯಕರು, ವೀರವನಿತೆಯರು, ಸಾಲುಮರದ ತಿಮ್ಮಕ್ಕ, ಚಲನಚಿತ್ರ ಕಲಾವಿದರು ಮುಂತಾದ ಸಾಧಕರ ಚಿತ್ರಗಳನ್ನು ರಚಿಸಿದ ಅಪರೂಪದ ಕಲಾವಿದ ಎಂದರು.
ವಡ್ಡಿನ ಮಹಾಲಕ್ಷ್ಮೀ ಸಹಕಾರ ಸಂಘದ ಮ್ಯಾನೇಜರ್ ಚಿದಾನಂದ ಚಿಂದಿ, ಶಿಕ್ಷಕ ಸುರೇಶ ಮಟಗಾರ, ಕಲಾವಿದ ಮಹಾಲಿಂಗಪ್ಪ ಬೀಳಗಿ, ವಿನೋದ ಕಡಪಟ್ಟಿ, ಸನ್ಮಾನಿತ ವಿನಾಯಕನ ತಂದೆ ರಾಮಪ್ಪ ಚಿಕ್ಕೋಡಿ, ತಾಯಿ ಕವಿತಾ ಚಿಕ್ಕೋಡಿ, ಆಶಾ ಬೀಳಗಿ, ಶಿವಾನಿ ಬೀಳಗಿ, ಶಿವಾನಂದ ನೀಳನ್ನವರ್, ಮಾಯಪ್ಪ ಟೊನಪಿ, ಭರತ, ಶಿವಪ್ರಸಾದ ಇತರರು ಇದ್ದರು
Share
WhatsApp
Follow by Email