ಜಲವಿವಾದ ಸಲಹಾ ಸಮಿತಿ ರಚಿಸಲು ಸಿಎಂ ಐತಿಹಾಸಿಕ ನಿರ್ಧಾರ

ಅಂತರ್‌ರಾಜ್ಯ ಜಲವಿವಾದಗಳಿಗೆ ಸಂಬಂಧಪಟ್ಟಂತೆ ಸಲಹೆ ನೀಡುವ ಸಲುವಾಗಿ ಒಂದು ಸಲಹಾ ಸಮಿತಿಯನ್ನು ರಚಿಸಬೇಕು ಎಂದು ಮಾಜಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಸಲಹೆ ನೀಡಿದ್ದಾರೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.
 ಬೆಂಗಳೂರು : ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶದ ಬೆನ್ನಲ್ಲಿಯೇ, ಶುಕ್ರವಾರ ಸಿಎಂ ನಿವಾಸದದಲ್ಲಿ ಮಾಜಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಜೊತೆ ನಡೆದ ಸಭೆಯ ಬಳಿಕ ಜಲವಿವಾದ ಸಲಹಾ ಸಮಿತಿ ರಚನೆ ಮಾಡಲು ನಿರ್ಧಾರ ಮಾಡಲಾಗಿದೆ. ಇದು ಕೇವಲ ಕಾವೇರಿ ಅಲ್ಲ ಎಲ್ಲಾ ರಾಜ್ಯದ ನೀರಾವರಿ ವಿಚಾರವಾಗಿ ಅಡ್ವೈಸರಿ ಕಮಿಟಿ ಮಾಡುವಂತೆ ಅವರು ಸಲಹೆ ನೀಡಿದ್ದಾರೆ. ಅಂತರರಾಜ್ಯ ನದಿ ವಿವಾದಕ್ಕೆ ಈ ಕಮಿಟಿ ಸಹಾಯವಾಗಲಿದೆ ಎಂದು ಸಿಎಂ ಹೇಳಿದ್ದಾರೆ. ಇನ್ನು ಪ್ರಾಧಿಕಾರ 3 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕು ಎಂದು ಹೇಳಿದೆ. ನಮಗೆ ನೀರು ಕೊಡೋದಕ್ಕೆ ಆಗೋದಿಲ್ಲ ಎಂದು ವಾದ ಮಂಡಿಸಲಾಗಿದೆ. ಆದ್ರೆ ಹಳೇ ಬಾಕಿ ಕೊಡಬೇಕು ಎಂದು ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ ಹಾಗೂ ಪ್ರಾಧಿಕಾರದ ಎದುರು ರಿವಿಷಿನ್ ಪಿಟಿಷನ್ ಹಾಕುವಂತೆ ಸಲಹೆ ನೀಡಿದ್ದಾರೆ. ಅದರೊಂದಿಗೆ ಸುಪ್ರೀಂ ಕೋರ್ಟ್‌ ಮುಂದೆ ಮೇಕೆದಾಟು ಡ್ಯಾಂ ಬಗ್ಗೆ ಪ್ರಸ್ತಾಪ ಮಾಡುವಂತೆ ನ್ಯಾಯಮೂರ್ತಿಗಳು ಸಲಹೆ ನೀಡಿದ್ದಾರೆ ಎಂದರು. ಮೇಕೆದಾಟು ಡ್ಯಾಂ ಬಗ್ಗೆ ಪ್ರಸ್ತಾಪ ಮಾಡಬೇಕು. ಮೇಕೆದಾಟು ಡ್ಯಾಂನಿಂದ ತಮಿಳುನಾಡಿಗೆ ತೊಂದರೆ ಆಗಲ್ಲ. ಮೇಕೆದಾಟು ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಪ್ರಸ್ತಾಪ ಮಾಡಬೇಕು ಎಂದು ಮಾಜಿ ನ್ಯಾಯಮೂರ್ತಿಗಳು ಸಲಹೆ ನೀಡಿದ್ದಾರೆ.

ತಕ್ಷಣವೇ ನಾವು ಪುನರ್‌ಪರಿಶೀಲನಾ ಅರ್ಜಿಯನ್ನು ಹಾಕಲಿದ್ದೇವೆ. ಮೊದಲು ಪ್ರಾಧಿಕಾರದ ಮುಂದೆ ರಿವಿಷನ್‌ ಪೆಟಿಷನ್‌ ಹಾಕಲಿದ್ದೇವೆ. ಇಲ್ಲಿ ನ್ಯಾಯಾಂಗ ನಿಂದನೆ ಪ್ರಶ್ನೆ ಬರೋದಿಲ್ಲ. ನಾಳೆಯೇ ಪುನರ್‌ಪರಿಶೀಲನಾ ಅರ್ಜಿಯನ್ನು ಹಾಕುತ್ತೇವೆ ಎಂದು ಸಿಎಂ ತಿಳಿಸಿದರು.

ಇನ್ನು ಶುಕ್ರವಾರದ ಕರ್ನಾಟಕ ಬಂದ್‌ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಾಂತಿಯುತವಾಗಿ ಬಂದ್‌ ಆಗಿದೆ. ಶಾಂತಿಯುತವಾಗಿ ಬಂದ್‌ ಮಾಡಿದ್ದಕ್ಕೆ ಸಾರ್ವಜನಿಕರನ್ನು ಅಭಿನಂದಿಸುತ್ತೇನೆ. ಎಲ್ಲೂ ಸ

ಇದಕ್ಕೂ ಮುನ್ನ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ನಿವೃತ್ತ ನ್ಯಾಯಾಧೀಶರು, ನಿವೃತ್ತ ಅಡ್ವಕೇಟ್ ಜನರಲ್ ಸಭೆಯಲ್ಲಿ ಭಾಗಿಯಾಗಿದ್ದರು. ಅವರು ಎಲ್ಲಾ ಸಲಹೆಗಳನ್ನ ನೀಡಿದ್ದಾರೆ. ಇತಿಹಾಸ ಪುಟಕ್ಕೆ ಸೇರುವಂಥ ಸಲಹೆಗಳನ್ನು ಅವರು ನೀಡಿದ್ದಾರೆ ಎಂದರು.ಹ ಕಹಿ ಘಟನೆಗಳು ಸಂಭವಿಸಿಲ್ಲ. ಅಧಿಕಾರ ವರ್ಗಕ್ಕೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.


 

Share
WhatsApp
Follow by Email