ಬ್ರೇಕಿಂಗ್ ನ್ಯೂಸ್ ಅರಟಾಳ : ಗಟಾರನಲ್ಲಿ ನೀರು ನಿಂತು ಗಬ್ಬುನಾತ 23/03/202023/03/20201 min read admin ಅರಟಾಳ ; ಅಥಣಿ ತಾಲೂಕಿನ ಅರಟಾಳ ಗ್ರಾಮದಲ್ಲಿ ೨೦೧೭-೧೮ನೇ ಸಾಲಿನ ಸುವರ್ಣ ಗ್ರಾಮ ಯೋಜನೆಯಲ್ಲಿ ನಿರ್ಮಾಣವಾಗಿರುವ ಗಟಾರ, ಸಿಸಿ ರಸ್ತೆ, ಸಮುಧಾಯ ಭವನ ಕಾಮಗಾರಿ ಕೆಲಸ ಪ್ರಾರಂಭವಾಗಿ ಎರಡು ವರ್ಷ ಕಳೆದರು ಇನ್ನು ಪೂರ್ಣವಾಗಿಲ್ಲ. ನಿರ್ಮೀಸಿರುವ ಗಟಾರದಲ್ಲಿ ಅಲ್ಲಲ್ಲಿ ನೀರು ನಿಂತು ಗಬ್ಬು ನಾರುತ್ತಿದೆ. ಸಮಸ್ಯೆ ಕುರಿತು ಸಂಬoಧಿಸಿದ ಅಧಿಕಾರಿಗಳಿಗೆ ತಿಳಿಸಿದರು ಪ್ರಯೋನವಾಗಿಲ್ಲವೆಂದು ಸಾರ್ವಜನಿಕರ ಆರೋಪಿಸಿದ್ದಾರೆ. ಗ್ರಾಮದ ಪ್ರಮುಖ ರಸ್ತೆಯಾದ ಟಿಪ್ಪು ಸುಲ್ತಾನ ಸರ್ಕಲ್ದಿಂದ ಗಣಪತಿ ಸರ್ಕಲ್ವರೆಗೆ ಹಾಕಿರುವ ಗಟಾರ, ಗ್ರಾಮ ಪಂಚಾಯತಿಯಿoದ ದುರ್ಗಾದೇವಿ ದೇವಸ್ಥಾನದವರೆಗೆ ಹಾಕಿರುವ ಗಟಾರ ಸರಿಯಾಗಿಲ್ಲ. ಗಟಾರದಲ್ಲಿ ಅಲ್ಲಲ್ಲಿ ನೀರು ನಿಂತು ಗಬ್ಬು ನಾರುತ್ತಿದೆ. ಇದರಿಂದ ಗ್ರಾಮದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಜಿಪಂ ಇಂಜಿನೇಯರ ಹಾಗೂ ಗ್ರಾಪಂ ಅಧಿಕಾರಿಗಳಿಗೆ ತಿಳಿಸಿದರು ಸಮಸ್ಯ ಬಗ್ಗೆ ಹರಿದಿಲ್ಲ. ಆದರೆ ಸೊಳ್ಳೆಗಳ ಕಾಟ ಮಾತ್ರ ಹೆಚ್ಚಾಗಿವೆ. ಸರ್ಕಾರದ ಕೆಲಸ ದೇವರ ಕೆಲಸವೆನ್ನುವ ಅಧಿಕಾರಿಗಳು ಸಾರ್ವಜನಿಕರ ಕೆಲಸ ಮಾಡುವುದಕ್ಕೆ ಹಿಂದೆಟ್ಟು ಹಾಕುತ್ತಿರುವುದು ಯಾಕೆ ಎನ್ನುತ್ತಾರೆ ಗ್ರಾಪಂ ಸದಸ್ಯ ಮಾಳಪ್ಪ ಕಾಂಬಳೆ. ಆದರೆ ನಿರ್ಮಿಸಿರುವ ಗಟಾರ ಕಾಮಗಾರಿ ಸರಿಯಾಗಿಲ್ಲವೆಂದು ಗ್ರಾಮ ಪಂಚಾಯತ ಸದಸ್ಯರು ಸಭೆಯಲ್ಲಿ ಚರ್ಚಿಸಿ ಸಂಬAಧಿಸಿದ ಅಧಿಕಾರಿಗಳಿಗೆ ತಿಳಿಸಿದರು ಇದುವರೆಗೆ ಯಾವುದೇ ಪ್ರಯೋಜವಾಗಿಲ್ಲ. ಅರಟಾಳ ಗ್ರಾಮದಲ್ಲಿ ಗಟಾರ ನಿರ್ಮಿಸಲು ಅಷ್ಟೋಂದು ತೊಂದರೆ ಇಲ್ಲ. ಇಳಿಜಾರಿನಿಂದ ಕೂಡಿದ ಗ್ರಾಮದಲ್ಲಿ ಗಟಾರ ನಿರ್ಮಿಸುವುದು ಅತಿ ಸುಲಭ. ಆದರೆ ಹೆಸರಿಗೆ ಮಾತ್ರ ಗಟಾರ ಎನ್ನುವಂತಾಗಿದೆ. ಗಟಾರ ಸಮಸ್ಯ ಪರಿಹರಿಸುವ ಕೆಲಸಕ್ಕೆ ಗುತ್ತಿಗೆದಾರರು ಮುಂದಾಗದಿರುವುದು ಏಕೆ? ಎನ್ನುವ ಆರೋಪ ಸಾರ್ವಜನಿಕರದಾಗಿದೆ. ಕೊರೋನಾ ವೈರಸ್ ಹಾವಳಿ ಬಗ್ಗೆ ಪ್ರತಿದಿನ ದೂರದರ್ಶನ, ಪತ್ರಿಕೆಗಳಲ್ಲಿಂದ ತಿಳಿದುಕೊಳ್ಳುತ್ತೆವೆ. ಆದರೆ ನಮ್ಮೂರಿನಲ್ಲಿ ಹಾಕಿರುವ ಗಟಾರದಲ್ಲಿ ನೀರು ನಿಂತು ಕೆಟ್ಟ ವಾಸನೆಯಿಂದ ಹರಡುತ್ತಿದೆ. ಅಧಿಕಾರಿಗಳು ಮಾತ್ರ ನೋಡಿ ನೋಡದಂತ್ತಿರುವುದು ಯಾಕೆ? ಬಾಕ್ಸ ; ಗಟಾರ ಸಮಸ್ಯ ಕುರಿತು ಇಂಜೀನೆಯರ ಗಮನಕ್ಕೆ ತರಲಾಗಿದೆ ಹಾಗೂ ಗುತ್ತಿಗೆದಾರರಿಗೆ ಗಟಾರದಲ್ಲಿ ಅಲ್ಲಲ್ಲಿ ನೀರು ನಿಂತುಕೊAಡು ಕೆಟ್ಟ ವಾಸನೆ ಬಿರುತ್ತಿದೆ ಎಂದು ತಿಳಿಸಿದ್ದೇವೆ. ಇಲಾಖಾ ಅಧಿಕಾರಿಗಳ ಜೋತೆಗೆ ಮಾತನಾಡುತ್ತೆನೆ. -ಎ. ಜಿ. ಏಡಕೆ ಪಿಡಿಓ ಅರಟಾಳ. ಬಾಕ್ಸ ; ಕೆಲಸ ವಿಳಂಬವಾಗಿರುವುದಕ್ಕೆ ಗುತ್ತಿಗೆದಾರರಿಗೆ ಇಗಾಗಲ್ಲೆ ನಾಲ್ಕು ಬಾರಿ ನೋಟಿಸ್ ಕೊಟ್ಟಿದ್ದೆವೆ. ಗಟಾರ ಸಮಸ್ಯಯನ್ನು ಬಗ್ಗೆ ಹರಿಸಲಾಗುವುದು ಎಂದು ತಿಳಿಸಿದ್ದಾರೆ. ಮತ್ತೊಮ್ಮೆ ಮಾತನಾಡುತ್ತೆನೆ. – ಎಸ್. ಎ. ಕಟ್ಟಿಮನಿ ಇಂಜಿನೇಯರ Share