ಬ್ರೇಕಿಂಗ್ ನ್ಯೂಸ್ ಸರ್ಕಾರದ ಆದೇಶ ಗಾಳಿಗೆ ತೂರಿದ ಪಾಲಬಾಂವಿ ನಾಗರಿಕರು ಹಾಗೂ ಅಧಿಕಾರಿಗಳು 24/03/202024/03/20201 min read admin ಮುಗಳಖೋಡ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋರೊನ ವೈರಸ ತಡೆಗಟ್ಟಲು ಹಗಳಿರುಳು ಶ್ರಮಿಸುತಿದ್ದರೆ ರಾಯಬಾಗ ತಾಲೂಕಿನ ಪಾಲಬಾಂವಿ ಗ್ರಾ.ಪಂ ಧಿವ್ಯ ನಿರ್ಲಕ್ಷತನದಿಂದ ಸೋಮವಾರ ಸಂತೆಯು ಭರ್ಜರಿಯಾಗಿ ನಡೆಯಿತು. ಪಾಲಬಾಂವಿ ಗ್ರಾಮದಲ್ಲಿ ಗ್ರಾ.ಪಂ ವತಿಯಿಂದ ಜನಸಾಮಾನ್ಯರಿಗೆ ತಿಳುವಳಿಕೆ ನೀಡಿ ಕೋರೊನ ಜಾಗೃತಿಯನ್ನು ನೀಡದೆ ಎಲ್ಲ ಜನಸಾಮಾನ್ಯರು ಒಂದೆಡೆ ಸೇರುವಂತೆ ವಾರಕೊಮ್ಮೆ ನಡೆಯುವ ಸಂತೆಯನ್ನು ತಡೆಯದೆ ವಿಪಲರಾಗಿದ್ದಾರೆ. ಈ ಬಗ್ಗೆ ಅಭಿವೃದ್ದಿ ಅಧಿಕಾರಿ ಸಂಜೀವ್ ನಂದಗಾoವ ಅವರು ಪತ್ರಕರ್ತರ ಸಂಪರ್ಕಕ್ಕೆ ಸಿಗಲಿಲ್ಲ. ಪಾಲಬಾಂವಿಯ ಗ್ರಾ.ಪಂ ಸದಸ್ಯರು ಈ ಕಡೆ ಗಮನ ಹರಿಸಲಿಲ್ಲ. ಕೆಲ ಗ್ರಾ.ಪಂ ಸದಸ್ಯರ, ಜನಪ್ರತಿನಿಧಿಗಳ ಕುಟುಂಬಸ್ಥರು ಸಂಜೆ ೫ ಗಂಟೆಯಿoದ ಸಂತೆ ಮಾಡುತ್ತಿರುವುದು ಕಂಡು ಬಂತು. ಗ್ರಾಮ ಮಟ್ಟದಲ್ಲಿ ಸಭೆ ಸಮಾರಂಭಗಳು, ಸಂತೆ, ಜಾತ್ರೆಗಳು ಯಾರ ಹಂಗ್ಗಿಲ್ಲದೆ ನಡೆಯುತ್ತಿವೆ. ಸಾಂಕ್ರಾಮಿಕ ರೋಗವಾದ ಕೋರೊನ ಭಯವಿಲ್ಲದೆ ಜನರು ಪಾಲ್ಗೋಳ್ಳುತ್ತಿರುವದು ಜನರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಜನರಲ್ಲಿ ಜನಜಾಗೃತಿ ಮೂಡಿಸುವವರು ಯಾರು.? ಎಂಬ ಪ್ರಶ್ನೆ ಮೂಡುತ್ತಿದೆ. ಸಂಬoದಪಟ್ಟ ಗ್ರಾ.ಪಂ ಅಭಿವೃದ್ದಿ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ, ಪೋಲಿಸರು ಯಾವುದೇ ಕ್ರಮ ಕೈಗೋಳ್ಳದಿರುವದಕ್ಕೆ ಪ್ರಜ್ಙಾವಂತ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. Share